ಸಂಪಾದಕೀಯ

ವಿಜ್ಞಾನ-ಜ್ಯೋತಿಷ್ಯ ಜಿಜ್ಞಾಸೆ

Published On :

ಎಂಎನ್ ಸುಧೀಂದ್ರ ರವರ 'ಮಾಟವೇ, ಮನೋವ್ಯಾಧಿಯೇ' ಪತ್ರಕ್ಕೆ ಪ್ರತಿಕ್ರಿಯೆ: ಇದು ಈಗ ಜ್ಯೋತಿಷ್ಯದ ಹೆಸರಿನಲ್ಲಿ ಸಾರ್ವತ್ರಿಕವಾಗಿ ಹರಡುತ್ತಿರುವ ಹಗಲು ದರೋಡೆ. ಶಾಸ್ತ್ರಜ್ಞರೇ ಹೇಳುವಂತೆ ಜ್ಯೋತಿಷ್ಯವನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದರೆ - ಯಾವುದೇ ಸಮಸ್ಯೆ ಉದ್ಭವಿಸಿದಾಗ ಮೊದಲು ಲೌಕಿಕ ನೆಲೆಗಟ್ಟಿನಲ್ಲಿಯೇ ಪರಿಹಾರಕ್ಕೆ ಪ್ರಯತ್ನಿಸಬೇಕು. ನಮ್ಮ ಪ್ರಯತ್ನಗಳ ಹೊರತಾಗಿಯೂ ಪದೇ ಪದೆ ಸೋಲಾಗುತ್ತಿದ್ದರೆ ಪುರುಷ ಪ್ರಯತ್ನಕ್ಕೆ (ನಮಗೆ)  ದೈವವು ಪ್ರತಿಕೂಲವಾಗಿದೆಯೆಂದು ತಿಳಿದು ಪರಿಹಾರಕ್ಕಾಗಿ ಜ್ಯೋತಿಷ್ಯವನ್ನು ಆಶ್ರಯಿಸಬೇಕು. ಕಾಯಿಲೆ- ರೋಗಗಳ ವಿಷಯದಲ್ಲಿ ಜ್ಯೋತಿಷ್ಯವು ಹೀಗೆ ಹೇಳುತ್ತದೆ- ವ್ಯಕ್ತಿಯು ರೋಗದಿಂದ ಬಳಲುತ್ತಿದ್ದಾಗ ಮೊದಲು ವೈದ್ಯರನ್ನು ಸಂಪರ್ಕಿಸಿ ಔಷಧ ಮಾಡಬೇಕು. ಅದು ಫಲಿಸದಿದ್ದಾಗ ದೈವಜ್ಞ (ಜ್ಯೋತಿಷಿ) ರನ್ನು ಕೇಳಬೇಕು.
ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಯಾವುದೇ ವ್ಯಕ್ತಿಯ ನಡುವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದರೆ ಅದನ್ನು ಮಾನಸಿಕ ಸಮಸ್ಯೆಯೆಂದು ಪರಿಗಣಿಸಿ ಮೊದಲು ಮನೋವೈದ್ಯರನ್ನು ಭೇಟಿಯಾಗುವುದೇ ಸರಿಯಾದ ಕ್ರಮವಾಗಿದೆ.
ಆದರೆ ಇದಕ್ಕಿಂತಾ ಗಂಭೀರ ಸಮಸ್ಯೆಯೆಂದರೆ- ವೈಜ್ಞಾನಿಕ ಸಿದ್ಧಾಂತಗಳು ಎಷ್ಟೇ ಸತ್ಯವಾಗಿದ್ದರೂ ಅದನ್ನು ಅನುಷ್ಠಾನಗೊಳಿಸಬೇಕಾದ ವೈದ್ಯನು ವಿಲಾಸಿಯೂ, ಸ್ವಾರ್ಥಿಯೂ ಆಗಿದ್ದರೆ ಏನಾಗುತ್ತದೆ? ಸಣ್ಣ ತಲೆನೋವಿಗೂ ಅನಗತ್ಯವಾಗಿ ದುಬಾರಿ ಪರೀಕ್ಷೆ ಮಾಡಿಸಲಾಗುತ್ತದೆ. ಗ್ಯಾಸ್ಟಿಕ್‌ನ ಎದೆ ಉರಿಗೂ ಆಂಜಿಯೋಗ್ರಾವ್ ಮಾಡಿಸಲಾಗುತ್ತದೆ. ಹೆರಿಗೆಯಂತಹ ಪ್ರಕೃತಿ ಸಹಜ ಕ್ರಿಯೆಯೂ ಸಿಸೇರಿಯನ್ ಆಗಿ ಮೂವತ್ತು ಸಾವಿರ ಕಿತ್ತುಕೊಂಡು ಹೋಗುತ್ತದೆ! ಸಂತಾನ ಹರಣ ಕ್ರಿಯೆ ಮಾಡಿಸಿಕೊಳ್ಳಲು ಹೋದವನ ಕಿಡ್ನಿಯೇ ಅವನಿಗರಿವಿಲ್ಲದೇ ಕಳ್ಳತನವಾಗುತ್ತದೆ. ಇದು ವಿಜ್ಞಾನ ಅಥವಾ ಮೌಡ್ಯದ ಪ್ರಶ್ನೆಯಲ್ಲ. ಸಮಾಜವೆಂಬ ವ್ಯವಸ್ಥೆಯಲ್ಲಿ ಬದುಕುತ್ತಿರುವ ಮನುಷ್ಯನೆಂಬ ಪ್ರಾಣಿಯಲ್ಲಿ ಇರಬೇಕಾದ ಮಾನವೀಯ ಮೌಲ್ಯಗಳ ಪ್ರಶ್ನೆ.
-ರಾಮದಾಸ ಎಚ್, ಭಟ್, ತೀರ್ಥಹಳ್ಳಿ

ಇವರ ಕನಸಿನ ಭಾರತ ಯಾವುದು?

ಡಾ.ಯು.ಆರ್ ಅನಂತಮೂರ್ತಿಯವರೆ ನಿಮಗೇನಾಗಿದೆ? ಪ್ರತೀ ಸಲ ನೀವು ಮೋದಿಯ ಬಗ್ಗೆ ಈ ರೀತಿ ಮಾತನ್ನಾಡುತ್ತಿರುವಿರಲ್ಲಾ ನಿವೇನಾದ್ರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಬೇಕು ಅಂತ ತೀರ್ಮಾನಿಸಿದ್ದೀರಾ ಹೇಗೆ? ಸಾಹಿತ್ಯ ಕ್ಷೇತ್ರವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗುತ್ತಿರುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.
ಇಷ್ಟಕ್ಕೂ ನಿಮ್ಮನ್ನು ಅಹ್ವಾನಿಸಿದ್ದು ಡಾ.ಬರಗೂರು ರಾಮಚಂದ್ರಪ್ಪನವರ ಕೃತಿ ಬಿಡುಗಡೆಗೆ ಮಾಡುವುದಕ್ಕೇ ಹೊರತು ರಾಜಕೀಯ ಭಾಷಣ ಮಾಡುವುದಕ್ಕಲ್ಲ. ಅದನ್ನು ಮೊದಲು ನೆನಪಿನಲ್ಲಿಟ್ಟುಕೊಳ್ಳಿ.
ಅಲ್ಲ, ಸಿಖ್ ಹತ್ಯಾಕಾಂಡದಲ್ಲಿ ಅಮಾಯಕರು ಬಲಿಯಾದಾಗ ಅದರ ಕುರಿತು ನೀವು ಒಂದು ಮಾತನ್ನು ಸಹ ಆಡಲಿಲ್ಲ/ ಆಡುವುದಿಲ್ಲ. ಅದು ಹೋಗಲಿ, ಕೇಂದ್ರ ಸರ್ಕಾರದ ದಿನಕ್ಕೊಂದು ಹಗರಣಗಳ (ಕಾಮನ್ವೆಲ್ತ್, 2ಜಿ ಹಗರಣ, ಆದರ್ಶ್ ಹಗರಣ, ಸಂಸದರ ಖರೀದಿ ಹಗರಣ), ಹಣ ದುಬ್ಬರ, ರುಪಾಯಿ ಮೌಲ್ಯ ಕುಸಿತ ಮುಂತಾದ ವಿಷಯಗಳ ಬಗ್ಗೆ ಯಾಕೆ ನೀವು ತುಟಿ ಬಿಚ್ಚುವುದಿಲ್ಲ?
ಮೋದಿ ಪ್ರಧಾನಿಯಾದರೆ ಬದಕುವುದಕ್ಕೆ ಬಯಸುವುದಿಲ್ಲ ಎನ್ನುತ್ತೀರಲ್ಲ, ಹಾಗಾದರೆ ಎಲ್ಲಿಗೆ ಹೋಗುವಿರಿ? ಮೋದಿ ಕೈಗೆ ಭಾರತ ಹೋದರೆ ಮಾತ್ರ ನಿಮ್ಮ ಕನಸಿನ ಭಾರತಕ್ಕೆ ಧಕ್ಕೆಯಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ದೇಶವನ್ನು ಲಪಟಾಯಿಸುತ್ತಾ ಹೀನ ಸ್ಥಿತಿಗೆ ಕೊಂಡೊಯ್ಯತ್ತಿದ್ದರೂ ನಿಮ್ಮ ಕನಸಿನ ಭಾರತಕ್ಕೆ ಧಕ್ಕೆ ಯಾಗುವುದಿಲ್ಲ. ನಿಮ್ಮ ಕನಸಿನ ಭಾರತ ಯಾವುದೋ ತಿಳಿಯುತ್ತಿಲ್ಲ!  
-ರಾಚು ದಳವಾಯಿ, ಜಾಗಟಗಲ್,  ರಾಯಚೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.