ತಪ್ಪಾಯ್ತು ತಿದ್ಕೋತೀವಿ
ಉತ್ತರಕನ್ನಡದ ಹೊನ್ನಾವರದಿಂದ ಶಂಕರನಾರಾಯಣ ಭಟ್ ಅವರು ಬರೆಯುತ್ತಾರೆ- 'ಸೆ.14ರ 'ಸಂಪಾದಕೀಯ'ದಲ್ಲಿ 1ನೇ ಪ್ಯಾರಾ 3ನೇ ಸಾಲಿನಲ್ಲಿ 'ಮುಂಚೆಯೇ ಹೊರಬೀಳಬೇಕು ಎನ್ನುವ ಬಯಕೆ ಶುಕ್ರವಾರ ಈಡೇರಿತ್ತು' ಎಂದಿದೆ. ಆದರೆ ಇಲ್ಲಿ 'ಈಡೇರಿತ್ತು' ಬದಲಿಗೆ 'ಈಡೇರಿತು' ಅಂದರೆ ಹೆಚ್ಚು ಸೂಕ್ತ ಅನಿಸುತ್ತಿಲ್ಲವೋ? ಕಾರಣ ಈಡೇರಿತ್ತು ಅಂದಾಕ್ಷಣ, 'ಆದರೆ' ಎಂಬ ನಕಾರಾತ್ಮಕ ಭಾವನೆ ಬಂದುಬಿಡುತ್ತದಲ್ಲವೇ? ಉದಾ: ಬಯಕೆ ಈಡೇರಿತ್ತು, ಆದರೆ ಆಡ್ವಾಣಿಯವರ ಅಡ್ಡವಾಣಿ ಬಯಕೆಗೆ ಅಡ್ಡವಾಯಿತು.'
'9ನೇ ಪ್ಯಾರಾ 4ನೇ ಸಾಲಿನಲ್ಲಿ 'ಆ ಮೋದಿಯ ಹೆಸರು ಪಕ್ಕಾ ಆಗಿದೆ ಅಂತ ಬರೆದಿದೆ. ಇಲ್ಲಿ 'ಆ' ಅಕ್ಷರ ಅವಶ್ಯವಿತ್ತೇ ಹಾಗೂ 'ಆ' ಒಂದು ಅನಪೇಕ್ಷಿತ ಎಂಬ ಧ್ವನಿಯನ್ನು ಬಿಂಬಿಸುವುದಿಲ್ಲವೇ? ಉದಾ: ಅಂದೇ ಪುಟ 14ರಲ್ಲಿ 'ಆ ಕರಾಳ ರಾತ್ರಿ ನಡೆದಿದ್ದೇನು?' ಎಂಬ ವರದಿ ಪ್ರಕಟವಾಗಿದೆ. ಇಲ್ಲಿ 'ಆ' ಎಂಬುದು ಸರಿಯಾದ ಪ್ರಯೋಗ. 'ಆ ಮೋದಿ' ಎಂಬಲ್ಲಿ ಕರಾಳ ಅಥವಾ ಭೀಕರ ಭಾವನೆ ವ್ಯಕ್ತವಾಗುತ್ತದೆ. ಇವು ಕೇವಲ ತಿಳುವಳಿಕೆಗಾಗಿ ಅಷ್ಟೇ.'
"ಕನ್ನಡಪ್ರಭ'ದ 'ತಪ್ಪಾಯ್ತು ತಿದ್ಕೋತೀವಿ' ಅಂಕಣವು ಕೇವಲ ತಪ್ಪುಗಳಿಗಷ್ಟೇ ಸೀಮಿತವಾಗಿರದೆ, ಹಲವಾರು ಹೊಸ ಹೊಸ ವಿಚಾರ, ದೃಷ್ಟಿಕೋನಗಳಿಗೂ ಎಡೆಮಾಡಿಕೊಡುತ್ತಿದೆ. ಈ ಹಿಂದೆ ಬಂದ 'ಹತ್ಯಾಚಾರ'ವಿರಲಿ, 'ಕಳ್ಳ ಕೃಷ್ಣ' ಇರಲಿ ಓದುಗರನ್ನು ಎಚ್ಚರಿಸಿ, ಹೆಚ್ಚು ಹೆಚ್ಚು ತಿಳುವಳಿಕೆ ಬರುವಂತೆ ಮಾಡುತ್ತಿರುವುದು ಶ್ಲಾಘನೀಯ.'
'ಸೆ.13ರ ಪುಟ 12ರಲ್ಲಿ 'ರಾಜ್ಯದಲ್ಲಿ ಹೂಡಿಕೆಗೆ ಪ್ರಮುಖ ಕಂಪನಿಗಳಿಗೆ ಸಿದ್ದು ಮುಕ್ತ ಆಹ್ವಾನ' ಶೀರ್ಷಿಕೆಯ ಚಿತ್ರದ ಪಕ್ಕದಲ್ಲಿ 'ಫಿನ್‌ಲೆಂಡ್ ಮಲ್ಟಾ ದೇಶದ ಪ್ರಧಾನಿಗಳ ಪ್ರಧಾನಿಗಳನ್ನು ಭೇಟಿಮಾಡಿದ....' ಎಂದು ಪ್ರಕಟವಾಗಿದೆ. ಹಾಗಂದರೇನು?'
"5 ಸಾವಿರ ಮೆ.ಟನ್ ಧಾನ್ಯ ಪೂರೈಕೆಗೆ ಸಂಪುಟ ಒಪ್ಪಿಗೆ' ಶೀರ್ಷಿಕೆಯ 2ನೇ ಸಾಲಿನಲ್ಲಿ 'ಕುಟುಂಬ ಕುಟುಂಬಗಳಿಗೆ' ಎಂದು ಪ್ರಕಟಿಸಲಾಗಿದೆ. ಇನ್ನು 'ಇನ್ನಷ್ಟು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳು' ಎಂದು ಕೊನೆಯ ವಾಕ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.'
'ಪುಟ 13ರಲ್ಲಿ 'ಮಹಿಳೆ ಜತೆ ಅನುಚಿತ ವರ್ತನೆ' ಶೀರ್ಷಿಕೆಯ ಸುದ್ದಿಯಲ್ಲಿ 'ಮಹಿಳೆಯೊಬ್ಬರೊಂದಿಗೆ' ಮಹಿಳೆಯೊಂದಿಗೆ ಅಂದರೆ ನಡೆಯುತ್ತಿರಲಿಲ್ಲವೇ? 4ನೇ ಸಾಲಿನಲ್ಲಿ 'ಗುರುವಾರ ಬೆಳಗ್ಗೆ ಮೆಲ್ಕಾರ್ ಜಂಕ್ಷನ್‌ನಲ್ಲಿ ಗುರುವಾರ ನಡೆದಿದೆ' ಎಂದು ಎರಡು ಬಾರಿ ಗುರುವಾರ ಬಳಸುವ ಅವಶ್ಯವಿತ್ತೆ?'
'ಕೊನೆ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಹೆಗಡೆ' ಶೀರ್ಷಿಕೆಯ 4ನೇ ಪ್ಯಾರಾದಲ್ಲಿ 'ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುಂತೆ' ಎಂದು ಬರೆಯಲಾಗಿದೆ. ಆದರೆ ಅದು ಭರಿಸುವಂತೆ ಎಂದಾಗಬೇಕಿತ್ತು. ಮುಂದಿನ ಪ್ಯಾರಾದಲ್ಲಿಯೂ ತುಂಬುವಲ್ಲಿ ಎಂದು ಬರೆಯಲು ತುಂಬಿವಲ್ಲಿ ಎಂದು ಪ್ರಕಟಿಸಲಾಗಿದೆ' ಎಂದಿದ್ದಾರೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

