ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- "ಬೈಟು ಕಾಫಿ'ಯ ಕೋಣೆಯ ಅಡುಗೆಯೆಲ್ಲಾ ಚೆನ್ನಾಗಿರುತ್ತೆ. ಆದ್ರೂ ಏನ್ಮಾಡೋಣ? ಕಾಫಿಗೆ ಸಕ್ಕರೆಯೆಂದು ಉಪ್ಪು ಸುರಿದರೆ ಪಡಪೋಶಿ ಕೆಲಸ ಆಗೋದಿಲ್ವೇ?' 'ಬೆಳ್ಳಿ ತಟ್ಟೆ' ಅಂಕಣದಲ್ಲಿ ಮಾ.10ರಂದು ಶೀರ್ಷಿಕೆ 'ಮೆಣಸು ತಿನ್ನಿ ಭೀತಿ ಬಿಡಿ' ಎಂದು ನೀಡಿರುತ್ತೀರಿ. ವಿವರಣೆಯನ್ನು ಪರಿಶೀಲಿಸಿದರೆ 'ಸಿ ವಿಟಮಿನ್ ಕಾರಣವಾದ ಹಣ್ಣು-ಮತ್ತು ತರಕಾರಿಗಳನ್ನು ನೀಡಲು ಸಲಹೆಗಳಿವೆ. ಸಾಂದರ್ಭಿಕ ಚಿತ್ರ ಮಾತ್ರ ಕರಿಮೆಣಸಿನ ಚಿತ್ರವಿದೆ.'
'ವಿವರಣೆಯಲ್ಲಿ ಅದೇನೋ ಡೊಳ್ಳು ಮೆಣಸು(ಮೆಣಸಿನ ಹಣ್ಣು) ಎಂದು ಹೇಳಿರುವ ಮೆಣಸು ಯಾವುದೆಂದು ಈ ಲೇಖಕನಿಗೆ ಅರ್ಥವಾಗಲಿಲ್ಲ. ಪೆಪ್ಪರ್ ಎಂದು ಆಂಗ್ಲಭಾಷೆಯಲ್ಲಿ ಕರೆಯಲ್ಪಡುವ ಕರಿಮೆಣಸಿಗೆ ಡೊಳ್ಳು ಮೆಣಸು (ಮೆಣಸಿನ ಹಣ್ಣು) ಎನ್ನುತ್ತಾರೆಯೇ? ಹಣ್ಣು -ತರಕಾರಿಗಳ ಬಗೆಗೆ ವಿಶೇಷ ಪ್ರಾಮುಖ್ಯ ನೀಡಿರುವ ಲೇಖನಕ್ಕೆ 'ಮೆಣಸು ತಿನ್ನಿ ಭೀತಿ ಬಿಡಿ' ಎಂದು ಶಿರೋನಾಮೆ ನೀಡುವುದು ತಪ್ಪಲ್ಲವೆ! ಕಾಫಿಗೆ ಸಕ್ಕರೆ ಬದಲು ಉಪ್ಪು ಬಿದ್ದಿದೆಯೆ ಸ್ಪಷ್ಟೀಕರಣ ಬಯಸಲೆ!?
'ಮಾ.3 ಪುಟ7, 'ಈ ಟಾಟಾ ... ಪಾಠ' ಲೇಖನ, 4ನೇ ಪ್ಯಾರಾ 'ಅವರ ಕನಸ್ಸಿನ ಹಿಂದೆಯೂ', ಕನಸಿನ ಆಗಬೇಕಿತ್ತು. 5ನೇ ಪ್ಯಾರಾ ಒಬ್ಬನೇ ಮಗನಾದ ಜೆ.ಎನ್. ಟಾಟಾಗೆ ತಂದೆಯಂತೆ. ಇಲ್ಲಿ 'ಗೆ' ಅವಶ್ಯಕತೆ ಇರಲಿಲ್ಲ. 4ನೇ ಸಾಲು ...ಕಾರ್ಖಾನೆಗಳನ್ನು ಜಾಲಾಡಿದರು ಅಂತ ಇದೆ. ಇಲ್ಲಿ ಜಾಲಾಡಿದರು ಶಬ್ದ ಪ್ರಯೋಗ ಅಷ್ಟು ಉಚಿತ ಅನ್ನಿಸುತ್ತಿಲ್ಲ.'
'ಮಾ.4, ಪುಟ9 ಪ್ರತಿಕ್ರಿಯೆ ಲೇಖನ 1ನೇ ಪ್ಯಾರಾ 15ನೇ ಸಾಲು... 'ಲೂಟಿ ಹೊಡೆದವರು ನಿರ್ಭಿಯಿತರಾಗಿ ಅಂತಿದೆ- ಅದು ನಿರ್ಭೀತರಾಗಿ ಆಗಬೇಕಿತ್ತು. ನ್ಯಾಯಾಲಯಗಳಿಗೆ 'ಸಾಲಾಗಿ' ಬದಲಿಗೆ 'ಸವಾಲಾಗಿ' ಆಗಬೇಕಿತ್ತು. ಒಬ್ಬ ಕ್ರಿಯಾಶೀಲ ಸದಸ್ಯನಾಗಿ ಈ ವಿಷಯವನ್ನು ನಾನು ಈ ಪ್ರಸ್ತಾಪ... ಇಲ್ಲಿ ಮತ್ತೊಮ್ಮೆ 'ಈ' ಅವಶ್ಯವಿರಲಿಲ್ಲ.'
'ಇಡಿ ಸದನ ಒಕ್ಕೊರಲಿನಿಂದ ಎಸ್.ಆರ್. ಹಿರೇಮಠರನ್ನು ಟೀಕಿಸಿದರು ಅಂತಿದೆ. ಇಲ್ಲಿ ಸದನ ಟೀಕಿಸಿತು ಆಗಬೇಕಾಗಿತ್ತು ಅಥವಾ ಸದನದ ಸದಸ್ಯರು ಟೀಕಿಸಿದರು ಆಗಬಹುದಿತ್ತು. ಆದರೆ ಮೂರನೆಯ ದಿನ ನಾನು ಎಚ್.ಡಿ. ಕುಮಾರಸ್ವಾಮಿಯವರಿಗೆ... ಇಲ್ಲಿ 'ನಾನು' ಅನಾವಶ್ಯಕ ನುಸುಳಿದೆ. ಕೊನೆಯ ಪ್ಯಾರಾ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿರುವ ವಿಚಾರ ಅನುಸಂಗೀತವಾಗಿ ನನ್ನನ್ನು ಒಡಪಡಿಸಿದ್ದರು ಅಂತಿದೆ. ಹಾಗಂದರೇನು?'
'ಗುರುವಾರ ಮಾ.6 ನೂರೆಂಟು ನೋಟ 10ನೇ ಸಾಲು... ನನಗೆ ಮಾತ್ರವಲ್ಲ, ಬಹುಪಾಲು ಎಲ್ಲ 'ಸ್ಪರ್ಧೆಗಳಿಗೂ' ಅಂತ ಬರೆದಿದೆ. ಅದು ಸ್ಪರ್ಧಾಳುಗಳಿಗೂ ಆಗಬೇಕಿತ್ತು. 13ನೇ ಪ್ಯಾರಾ, 3ನೇ ಸಾಲು.. ಜನರಿಗೆ ವಿಪರೀತ ಹೆಮ್ಮೆಯನ್ನು ಉಂಟು ಮಾಡಿತ್ತು ಬದಲಿಗೆ ಹೆಮ್ಮೆಯನ್ನುಂಟುಮಾಡಿತ್ತು ಅಂದರೆ ಒಂದು ಅಕ್ಷರ ಸ್ಥಳ ಉಳಿಸಬಹುದಿತ್ತು. ಇದನ್ನೂ ಒಂದಕ್ಷರದ ಅಂತಲೂ ಬರೆಯಬಹುದು.'
'ಸತ್ಯ ಅವರ ಸಮಕಾಲೀನ ಲೇಖನ 1ನೇ ಪ್ಯಾರಾ ಕೊನೆಯ ಸಾಲು...'ದರೆ' ಅದನ್ನು... ಬದಲಿಗೆ ಆದರೆ ಆಗಬೇಕಿತ್ತು. ಇನ್ನು ಕೋರ್ಕಮಿಟಿ ಎಂಬುದಕ್ಕೆ ಸಮನಾದ ಕನ್ನಡ ಶಬ್ದ ಸಿಕ್ಕಿಲ್ಲ ಅಂತ ಲೇಖಕರೆಂದರೆ ಅದನ್ನು ನಿರ್ಣಾಯಕ ಅಥವಾ ಮಹತ್ವದ ಸಭೆ ಎಂಬರ್ಥದಲ್ಲಿ ಬಳಸಬಹುದೇನೋ?' ಎಂದಿದ್ದಾರೆ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

