ತಪ್ಪಾಯ್ತು ತಿದ್ಕೋತೀವಿ
ಗೌರಿಬಿದನೂರಿನಿಂದ ಕೆ.ಎ. ರವೀಂದ್ರನಾಥ್ ಅವರು ಬರೆಯುತ್ತಾರೆ- "ಇನ್ನೂ ಘೋಷಣೆಯಾಗದ ಜೆಡಿಎಸ್ ಅಭ್ಯರ್ಥಿ' (ಕ.ಪ್ರ. ಪುಟ-3, ಕೋಲಾರ ವಿಭಾಗ ಮಾ.21) ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಬರಹದಲ್ಲಿ ಛಾಯಾ ಚಿತ್ರದ ಪಕ್ಕದ ದಪ್ಪಕ್ಷರಗಳಲ್ಲಿನ... 'ಎರಡು ದಿನ ಕಾಲಾವಕಾಶ ಒಪ್ಪಿಸುತ್ತೇನೆ. ಅವರು ಸಕಾತ್ಮಕವಾಗಿ ಸ್ಪಂದಿಸುವ ಭರವಸೆ ತಮಗಿದೆ' ಎಂದಿದೆ. ಆದರೆ ಈ ಪದವು ಸಕಾರಾತ್ಮಕವಾಗಿ ಎಂದಿರಬೇಕಲ್ಲವೇ?'
'ಇದೇ ಬರಹದ 2ನೇ ಪ್ಯಾರಾದ 8ನೇ ಸಾಲಿನಲ್ಲಿ ಸಕಾರತ್ಮಾಕವಾಗಿ ಸ್ಪಂದನೆ ಸಿಗುತ್ತದೆ ಎಂದಿದೆ. ಈ ಪದವು ಸಕಾರಾತ್ಮಕ ಎಂದಿರಬೇಕಲ್ಲವೇ? 5ನೇ ಕಾಲಂನ 12ನೇ ಸಾಲಿನಲ್ಲಿ ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ತಮಗಿದೆ ಎಂದಿರಬೇಕಲ್ಲವೇ?'
'ಇದೇ ಪುಟದ ರಸವತ್ತು ವಿಭಾಗದ ಸಭೆಗೆ ಅರ್ಜಿದಾರರನ್ನೇ ಕರೆಸಿದ್ದು ಎಂಬ ಬರಹದ ಕೊನೆಯಲ್ಲಿ ಇತ್ತಸಭೆಗೂ ಜನ ಆಯ್ತು ಅತ್ತ ಅರ್ಜಿದಾರರಿಗೂ ಸುಲಭದಲ್ಲಿ ತಿಳುವಳಿಕೇನೂ ಸಿಗ್ತು ಎಂದಿರಬೇಕಲ್ಲವೇ? ಪುಟ 3ರಲ್ಲಿ ಪ್ರಕಟವಾದ ಜೆಡಿಎಸ್ಗೆ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ನೀಡಿ ಎಂಬ ಬರಹದಲ್ಲಿ 3ನೇ ಕಾಲಂನ 2ನೇ ಪ್ಯಾರಾದ 3ನೇ ಸಾಲಿನಲ್ಲಿ ... 'ನೀರಾವರಿ ಸೌಲಭ್ಯ ಒದಗಿಸುತ್ತೇವೆ ಎಂದೇಳಿ' ಪದವಿದೆ. ಆದರೆ ಈ ಪದವು ಎಂದು ಹೇಳಿ ಅಥವಾ ಎಂದ್ಹೇಳಿ ಎಂದಿರಬೇಕಲ್ಲವೇ?' ಎಂದಿದ್ದಾರೆ.
ಎಲ್ಲರೂ ಬಳಸುವುದಿಲ್ಲವಾದರೂ ಕೆಲವರು ಬರೆಯುವಾಗ ಆಡುಭಾಷೆಯನ್ನೇ ಬಳಸುತ್ತಾರೆ. ಅಂಕಣ ಬರಹದಲ್ಲಿ ಅಂತಹ ಆಡುಭಾಷೆಯ ಶಬ್ದಗಳು ಇಷ್ಟವಾಗುತ್ತವಾದರೂ, ಸುದ್ದಿಯಲ್ಲಿ ಹೊಂದಿಕೆಯಾಗುವುದಿಲ್ಲ.
ಹರಪನಹಳ್ಳಿಯಿಂದ ಕೆ. ಶ್ರೀನಿವಾಸರಾವ್ ಅವರು ಬರೆಯುತ್ತಾರೆ- 'ಆರ್. ಕೇಶವಮೂರ್ತಿಯವರ 'ಗಂಧದ ಗುಡಿಯ ಕನಸಿನ ಫ್ಯಾಮಿಲಿ' (ಖುಷಿ 9 ಮಾರ್ಚ್) ಲೇಖನದಲ್ಲಿ ಒಂದೆರಡು ತಪ್ಪುಗಳು! ಪಂಡರಿಬಾಯಿ ನಾಯಕಿಯಾಗಿ ಕಾಣಿಸಿಕೊಂಡ ಚಿತ್ರ 'ಗುಣಸಾಗರಿಕ' ಅಲ್ಲ- 'ಗುಣಸಾಗರಿ'. ಅಂತೆಯೇ ಅಶ್ವತ್ಥ್ರವರು 'ಮೋಡದ ಮರೆಯಲ್ಲಿ' ಚಿತ್ರದಲ್ಲಿ ಅಣ್ಣಾವ್ರಿಗೆ ತಂದೆಯಾಗಿ ಅಭಿನಯಿಸಿಲ್ಲ. ಬದಲಾಗಿ ಅಣ್ಣಾವ್ರ ಪುತ್ರ ಶಿವಣ್ಣನವರಿಗೆ ತಂದೆಯಾಗಿ ಅಭಿನಯಿಸಿದ್ದಾರೆ' ಎಂದಿದ್ದಾರೆ.
ಶಿವಮೊಗ್ಗದಿಂದ ಕೆ. ಧರ್ಮಯ್ಯ ಅವರು ಬರೆಯುತ್ತಾರೆ- 'ಮಾ.8ರಂದು ಮುಖಪುಟದಲ್ಲಿ 'ಹುಣಸೆ ಮುಪ್ಪಾದರೂ -ಹುಲಿ ಮುಪ್ಪೇ?' ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಹುಣಸೆ ಮರದಿಂದ ನಮಗೆ ದೊರೆಯುವುದು ಹುಳಿಯೇ ಹೊರತು ಹುಲಿ ಅಲ್ಲ. ಹುಲಿ ಮುಪ್ಪಾದರೆ ಶಕ್ತಿಹೀನವಾಗುತ್ತದೆ. ಇಲ್ಲಿ ಹುಳಿಗೆ ಬದಲಾಗಿ -ಹುಲಿ ಎಂದು ಪ್ರಿಂಟ್ ಆಗಿದೆ. ಮರ ಮುಪ್ಪಾದರೆ? ಹುಳಿ ಮುಪ್ಪೆ? ಇದು ಗಾದೆ ಮಾತು ಕೂಡ.'
'ಮಾ.16ರಂದು ಮುಖಪುಟದಲ್ಲಿ 'ಮೋದಿ ಪ್ರತಿಷ್ಠೆಗೆ ವರಣಸಿ' ಇದು. ವರಣಾಸಿ ಎಂದು ಆಗಬೇಕಾಗಿತ್ತು. ಆದರೆ ಮೋದಿಯವರ ಚಿತ್ರದ ಮೇಲ್ಭಾಗದಲ್ಲಿ ವರಣಾಸಿ ಸರಿ ಇದೆ. ಹುಳಿ ಇಲ್ಲದೆ ಸಾರು ಪಲ್ಯ ರುಚಿ ಇಲ್ಲ-ಇದು ಆಚರಣೆಗೆ ಸದಾ ಬೇಕು' ಎಂದಿದ್ದಾರೆ.
ಮೋದಿಗೆ ವರವಾಗಲಿರುವ ವಾರಾಣಸಿ ಎಂಬುದು ಆ ಶೀರ್ಷಿಕೆಯ ಅರ್ಥ. ಆ ಕಾರಣಕ್ಕೆ 'ವರ'ಣಸಿ ಎಂದು ಬರೆಯಲಾಗಿದೆ. ವಾರಾಣಸಿ ಎಂಬುದು ಸರಿಯಾದ ಬಳಕೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

