ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಗೌರಿಬಿದನೂರಿನಿಂದ ರವೀಂದ್ರನಾಥ್ ಪತ್ರ ಬರೆಯುತ್ತಾರೆ- 'ಏ.4ರ ಕ.ಪ್ರ.ದ 2ನೇ ಪುಟದ ಕೋಲಾರ ವಿಭಾಗದಲ್ಲಿ ಪ್ರಕಟವಾದ 'ದೇಶದ ಪ್ರಗತಿ, ಭದ್ರ ಬುನಾದಿಗೆ ಮತ ಹಾಕಿ' ಎಂಬ ಬರಹದ 2ನೇ ಪ್ಯಾರಾದ 2ನೇ ಸಾಲಿನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಅಜಯ್ ಹಿಲೋರಿ ಮಾತನಾಡಿ 'ನೀಡಿ ಸಂಹಿತೆ' ಎಂಬ ಪದವಿದೆ. ಆದರೆ ಈ ಪದವು 'ನೀತಿ ಸಂಹಿತೆ' ಎಂದಿರಬೇಕು. ಇದೇ ಪುಟದಲ್ಲಿ 'ಮುನಿಯಪ್ಪಗೆ ಬೆಂಬಲ: ಪ್ರಕಾಶ' ಎಂಬ ಬರಹದ 2 ನೇ ಪ್ಯಾರಾದ 7ನೇ ಸಾಲಿನಲ್ಲಿ ಮುನಿಯಪ್ಪನ ಅವರನ್ನು ಸೋಲಿಸಿಯೇ ಎಂಬ ವಾಕ್ಯಗಳಿವೆ. ಇದರ ಬದಲು ಮುನಿಯಪ್ಪನವರನ್ನು ಎಂದಿರಬೇಕು.'
'ಇದೇ ಬರಹದ 3ನೇ ಪ್ಯಾರಾದಲ್ಲಿ (ಕೊನೆಯಲ್ಲಿ) 'ಬಿಜೆಪಿ ಹಾಗೂ ಜೆಡಿಎಸ್ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಹಾಗಾಗಿ, ವಾದ್ದರಿಂದ ಮುನಿಯಪ್ಪನವರನ್ನು ಬೆಂಬಲಿಸುತ್ತಿದ್ದೇವೆ' ಎಂದಿದೆ. ಇಲ್ಲಿ 'ವಾದ್ದರಿಂದ' ಎಂಬ ಪದ ಬೇಡವೆನ್ನಿಸುತ್ತದೆ ಮತ್ತು ಮುನಿಯಪ್ಪನವರನ್ನು ಬೆಂಬಲಿಸುತ್ತಿದ್ದೇವೆ ಎಂದಿರಬೇಕು. ಇದೇ ಅಂಕಣದ 4ನೇ ಪ್ಯಾರಾದ 5ನೇ ಸಾಲಿನಲ್ಲಿ ಕೇಶವರಂತಹ ಭೂ ವ್ಯಾಪಾರಿಯಲ್ಲ ಎಂದಿದೆ. ಇಲ್ಲಿ ಭೂ ವ್ಯಾಪಾರಿ ಎಂದಿರಬೇಕು. ಇದೇ ಪುಟದಲ್ಲಿ ಪ್ರಕಟವಾದ 'ಶೂ ಪಾಲೀಶ್ ಮಾಡಿ ಮತ ಬೇಡಿದ ಜೆಡಿಎಸ್ ಅಭ್ಯರ್ಥಿ' ಎಂಬ ಬರಹದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆಯೇ ಹೊರತು ಜನರ ಸಂಕಷ್ಟಗಳ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದಿದೆ. ಆದರೆ ಈ ವಾಕ್ಯಗಳು 'ಐಶಾರಾಮಿ ಜೀವನ ನಡೆಸುತ್ತಿದ್ದಾರೆಯೇ ಹೊರತು ಜನರ ಸಂಕಷ್ಟಗಳ(ನಂತರ) ನಿವಾರಣೆಯ ಬಗ್ಗೆ ಅಥವಾ ಅದನ್ನು ತೊಲಗಿಸುವ ಬಗ್ಗೆ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ' ಎಂದಿದ್ದರೆ ಅದು ಅರ್ಥಪೂರ್ಣವಾಗುತ್ತಿತ್ತು. ಇದೇ ಪುಟದಲ್ಲಿ ಪ್ರಕಟವಾದ 'ಇದು ಬದಲಾವಣೆ ಸಮಯ: ಕೇಶವ್‌' ಎಂಬ ಬರಹದ 2ನೇ ಪ್ಯಾರಾದ 5ನೇ ಸಾಲಿನಲ್ಲಿ ಸ್ವಾತಂತ್ರ್ಯ ಬಂದು 6 ವರ್ಷಗಳಾದರೂ ಇನ್ನೂ ಬದಲಾಗಿಲ್ಲ ಎಂದಿದೆ. ಆದರೆ ಇಲ್ಲಿ ಸ್ವಾತಂತ್ರ್ಯ ಬಂದು 67 ವರ್ಷಗಳಾದರೂ ಎಂದಿರಬೇಕು. ಇದೇ ಪುಟದಲ್ಲಿ ಪ್ರಕಟವಾದ ಚಿಕ್ಕಬಳ್ಳಾಪುರದಲ್ಲಿ ಮತದಾನ ಜಾಗೃತಿ ಎಂಬ ಬರಹದ ಕೊನೆಯ ಸಾಲು ಅಂದರೆ ಮತದಾನ ಮಾಡುವುದಲ್ಲದೇ ನಂತರ ಮುಂದಿನ ವಾಕ್ಯಗಳು ಅದೃಶ್ಯವಾಗಿವೆ!'
'ಕ್ಷೇತ್ರದ ಅಭ್ಯರ್ಥಿಗಳ ವೃತ್ತಿ, ಶಿಕ್ಷಣ ಏನು? (ಪುಟ 3 ) ಎಂಬ ಚುನಾವಣಾ ಲೇಖನದಲ್ಲಿ 6ನೇ ಪ್ಯಾರಾದಲ್ಲಿ 2ನೇ ಸಾಲಿನಲ್ಲಿ ಜವಹಾರ ಲಾಲನ್ನೆಹರೂ ಎಂದಿದೆ. ಆದರೆ ಇಲ್ಲಿ ಜವಹರಲಾಲ್ ನೆಹರೂ ಎಂದಿರಬೇಕು. ಕೋಲಾರ ವಿಭಾಗದ 3ನೇ ಪುಟದಲ್ಲಿ ಪ್ರಕಟವಾದ ಬಿಜೆಪಿ-ಕರ್ನಾಟಕ ಎಂಬ ಜಾಹೀರಾತಿನಲ್ಲಿ ಆರ್. ಅಶೋಕ್‌ರ ಭಾಷಣದ ಗ್ರಾಮವನ್ನು ಗೋಳೂರು (ಬಾಗೇಪಲ್ಲಿ) ಎಂದು ಮುದ್ರಣವಾಗಿದೆ. ಆದರೆ ಈ ಗ್ರಾಮದ ಹೆಸರು ಗೂಳೂರು.' ಎಂದಿದ್ದಾರೆ.


- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.