ಗೋವಾದಲ್ಲಿ ಗಣಿಗಾರಿಕೆ
ಗೋವಾದಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆಯ ಮೇಲೆ ಸುಪ್ರೀಮ್ ಕೋರ್ಟ್ ವಿಧಿಸಿದ್ದ ನಿಷೇಧವನ್ನು ನ್ಯಾಯಾಲಯ ಕೆಲವು ಷರತ್ತುಗಳನ್ನು ಹಾಕಿ ತೆರವು ಮಾಡಿದ್ದು ದೇಶದ ಔದ್ಯಮಿಕ ಪ್ರಗತಿಗೆ ದೊಡ್ಡ ರೀತಿಯಲ್ಲೇ ನೆರವು ನೀಡಿದಂತೆಯೇ ಆಗುತ್ತದೆ. ದೇಶದ ಅದಿರಿನ ರಫ್ತಿನಲ್ಲಿ ಗೋವಾ ಅದಿರಿನ ಪಾಲು ಅರ್ಧ ಭಾಗದಷ್ಟು.
ಅಕ್ರಮ ಗಣಿಗಾರಿಕೆಯ ದಂಧೆಯಲ್ಲಿ ಅನೇಕ ಪ್ರತಿಷ್ಠಿತ ವ್ಯಕ್ತಿಗಳು, ಸಂಸ್ಥೆಗಳೂ ತೊಡಗಿದ್ದ ಶಂಕೆ ಪ್ರಕಟವಾದ ಕೂಡಲೇ ಸುಪ್ರೀಮ್ ಕೋರ್ಟ್ ಅಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿದ್ದು, ಆ ಆದೇಶ ಹದಿನೆಂಟು ತಿಂಗಳು ಜಾರಿಯಲ್ಲಿತ್ತು.
ಈ ಅವಧಿಯಲ್ಲಿ ಕಬ್ಬಿಣ, ಉಕ್ಕಿನ ಉದ್ಯಮ ವಲಯ ಕಚ್ಚಾ ಮಾಲಿನ ಅಭಾವದಿಂದ ತತ್ತರಿಸಿದ್ದು, ಅದರ ಪರಿಣಾಮವಾಗಿ ಅನೇಕ ಕಡೆಗಳಲ್ಲಿ ಬೃಹತ್ ಕಟ್ಟಡಗಳ ನಿರ್ಮಾಣದ ಕೆಲಸವೂ ಸ್ಥಗಿತವಾಗಿತ್ತು.
ಇದರಿಂದ ಔದ್ಯಮಿಕ ಪ್ರಗತಿಯ ಸೂಚ್ಯಂಕ ಇಳಿಮುಖವಾದಂತೆಯೇ ಬೃಹತ್ ಪಟ್ಟಣಗಳಲ್ಲಿ ದಿನಗೂಲಿಗಳಿಗೆ ಕೆಲಸವೇ ಇಲ್ಲದಂತೆ ಆಗಿತ್ತು. ಗೋವಾದ ಗಣಿಗಳ ನಿಷೇಧದ ಹಿಂದೆ ಪರಿಸರ ಮಾಲಿನ್ಯದ ಸಮಸ್ಯೆ ಇದ್ದಿದ್ದೂ ನಿಜ. ನ್ಯಾಯಾಲಯ ಈಗ ವಿಧಿಸಿರುವ ಷರತ್ತುಗಳನ್ನು ಗಣಿಗಾರಿಕೆಯ ಉದ್ಯಮಿಗಳು ಸರಿಯಾಗಿ ಪಾಲಿಸಿದರೆ ಪರಿಸರ ಮಾಲಿನ್ಯ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು ಸಾಧ್ಯವಾಗಬಹುದು.
ಆದರೆ ಎಲ್ಲ ನಿಯಮಗಳನ್ನೂ ಪಾಲಿಸುವ ಪ್ರಯತ್ನ ಯಶಸ್ವಿಯಾಗಬೇಕಾದರೆ ಹಲವು ತಿಂಗಳ ಕೆಲಸ ಮಾಡಬೇಕಾಗುತ್ತದೆ. ಅಲ್ಲಿಯವರೆಗೆ ಔದ್ಯಮಿಕ ಉತ್ಪಾದನೆಯ ವೇಗ ಹೆಚ್ಚುವುದು ಕಷ್ಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

