ಸಂಪಾದಕೀಯ

ಅನಂತ ದೇವಾಲಯದ ಪರಿಸ್ಥಿತಿ

Published On :

ತಿರುವನಂತಪುರದ ಅನಂತ ಪದ್ಮನಾಭ ದೇವಾಲಯದ ವಿವಾದದಲ್ಲಿ ಗುರುವಾರ ಸುಪ್ರೀಮ್ ಕೋರ್ಟ್ ನಿರ್ದಿಷ್ಟವಾದ ಹಾಗೂ ನಿಖರವಾದ ವ್ಯವಸ್ಥೆಯ ತೀರ್ಪನ್ನು ನೀಡಿರುವುದು ಸ್ವಾಗತಾರ್ಹ.
ನ್ಯಾಯಾಲಯದ ತೀರ್ಪಿನಂತೆ, ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲೇ, ದೇವಾಲಯದ ಅರ್ಚಕರ ಪ್ರತಿನಿಧಿಗಳನ್ನು ಒಳಗೊಂಡ ಐದು ಮಂದಿಯ ಆಡಳಿತ ಸಮಿತಿ ಅಸ್ತಿತ್ವದಲ್ಲಿ ಬರಬೇಕಾಗಿದೆ. ಅಂದರೆ ಇದುವರೆಗೆ ಆಡಳಿತದ ಎಲ್ಲ ಅಧಿಕಾರವನ್ನು ಪಡೆದಿದ್ದ ತಿರುವಾಂಕೂರು ರಾಜಮನೆತನಕ್ಕೆ ಇನ್ಮುಂದೆ ಆ ವಿಚಾರದಲ್ಲಿ ಯಾವ ಅಧಿಕಾರವೂ ಇರುವುದಿಲ್ಲ. ಸುಪ್ರೀಮ್ ಕೋರ್ಟಿನ ತೀರ್ಪಿನಿಂದ ದೇವಾಲಯದ ಧಾರ್ಮಿಕ ವಿಧಿ-ವಿಧಾನಗಳ ಆಚರಣೆಗೆ ಯಾವುದೇ ರೀತಿಯಲ್ಲಿ ಅಡ್ಡಿ ಬಾರದಂತೆ ನೋಡಿಕೊಳ್ಳುವುದು ಆಡಳಿತ ಮಂಡಳಿಯ ಕರ್ತವ್ಯ ಹಾಗೂ ಧರ್ಮ. ದೇವಾಲಯದ ಆಡಳಿತ, ಅಲ್ಲಿನ ಅಪಾರ ಸಂಪತ್ತಿನ ಬಳಕೆಯಂತಹ ವಿಚಾರಗಳನ್ನು ಕುರಿತು ಅನೇಕರು ಅಲ್ಲಿನ ವ್ಯವಸ್ಥೆ ಹದಗೆಟ್ಟಿದೆ ಎನ್ನುವ ದೂರನ್ನು ನೀಡಿದಾಗ ನ್ಯಾಯಾಲಯ "ತನ್ನ ಮಿತ್ರನಾಗಿ" ಪರಿಸ್ಥಿತಿ ಕುರಿತ ವರದಿ ನೀಡಲು ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯಂ ಅವರನ್ನು ನೇಮಿಸಿತ್ತು. ಅವರು ಕೊಟ್ಟ ವರದಿಯಲ್ಲಿ ಕಂಡುಬಂದ ಅಂಶಗಳನ್ನು ಗಮನಿಸಿ, ಪರಿಸ್ಥಿತಿಯ ಸುಧಾರಣೆಗೆ ಆಡಳಿತ ಮಂಡಳಿಯ ರಚನೆಯ ತೀರ್ಪು. ಜತೆಗೇ ನಿವೃತ್ತ ಆಡಿಟರ್ ಜನರಲ್ ವಿನೋದ ರಾಯ್ ಅವರ ನೇತೃತ್ವದಲ್ಲಿ ಹಣಕಾಸಿನ ವ್ಯವಹಾರ, ಸಂಪತ್ತಿನ ಬಳಕೆಯನ್ನು ಕುರಿತ ವಿಶೇಷ ಆಡಿಟ್ ವ್ಯವಸ್ಥೆಗೂ ಆದೇಶ ನೀಡಲಾಗಿದೆ. ಹದಿನಾರನೆಯ ಶತಮಾನದಿಂದಲೂ ದೇಶದ ಎಲ್ಲ ಭಾಗಗಳ ಜನರನ್ನೂ ಆಕರ್ಷಿಸಿದ್ದ, ಐತಿಹಾಸಿಕ - ಧಾರ್ಮಿಕ ಸಂಸ್ಥೆಯೊಂದರ ಪುನರುಜ್ಜೀವನಕ್ಕೆ ಸುಪ್ರೀಮ್ ಕೋರ್ಟ್ ಒಳ್ಳೆಯ ದಾರಿಯನ್ನೇ ತೋರಿಸಿದೆ. ದೇವಾಲಯದ ಸಿಬ್ಬಂದಿಯ ಸ್ಥಿತಿಗತಿಯನ್ನು ಗಮನಿಸಿ, ಅವರ "ಸೇವೆಗೆ" ತಕ್ಕ ಪ್ರತಿಫಲವನ್ನು ನಿಗದಿಪಡಿಸುವ ಸಲಹೆ ಮಾನವೀಯತೆಯ ದೃಷ್ಟಿಯಿಂದ ಮೆಚ್ಚುಗೆಗೆ ಅರ್ಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.