ಹಣ್ಣು, ತರಕಾರಿಯಲ್ಲಿ ವಿಷ
ಜಗತ್ಪ್ರಸಿದ್ಧ ಆಲ್ಫಾನ್ಸೋ ಮಾವಿನ ಹಣ್ಣೂ ಸೇರಿದಂತೆ ಅನೇಕ ಬಗೆಯ ಹಣ್ಣುಗಳು, ತರಕಾರಿಯನ್ನು ಮೇ ಒಂದರಿಂದ ಭಾರತ ಯೂರೋಪಿನ ರಾಷ್ಟ್ರಗಳಿಗೆ ರಫ್ತುಮಾಡುವಂತಿಲ್ಲ ಎನ್ನುವುದು ನಿಜಕ್ಕೂ ಆಘಾತಕಾರಿಯಾದ ಸುದ್ದಿಯೇ.
ಈ ನಿಷೇಧಾಜ್ಞೆಗೆ ಕೊಟ್ಟಿರುವ ಕಾರಣ ಭಾರತದಲ್ಲಿ ಹಣ್ಣು - ತರಕಾರಿ ಬೆಳೆಗೆ ವಿಪರೀತವಾಗಿ ಕ್ರಿಮಿನಾಶಕಗಳನ್ನು ಬಳಸುವುದರಿಂದ, ಆ "ಔಷಧಿ" ಅಂತಿಮ ಹಂತದಲ್ಲೂ ಉಳಿದುಬಿಡುವುದನ್ನು ಯೂರೋಪಿನ ತಜ್ಞರು ಗಮನಿಸಿದ್ದಾರೆ. ಆದ್ದರಿಂದ "ವಿಷಪೂರಿತ" ಅಥವಾ ಅಶುದ್ಧ ಹಣ್ಣು ತರಕಾರಿಯ ನಿಷೇಧ ಸಮರ್ಥನೀಯ ಎಂದೇ ಮೇಲ್ನೋಟಕ್ಕೆ ಕಂಡುಬರಬಹುದು. ಆದರೆ ಭಾರತೀಯರೂ ಇದೇ ಹಣ್ಣ ತರಕಾರಿಯನ್ನೇ ಅಲ್ಲವೇ ಬಳಸುವುದು? ಹಾಗಾದ್ರೆ ಈ ವಿಷಪೂರಿತ ಆಹಾರದ ಕೃಷಿವಿಧಾನ, ಮಾರಾಟ, ಹಂಚಿಕೆಯ ಮೇಲೆ ನಮ್ಮಲ್ಲೂ ನಿಯಂತ್ರಣ ವ್ಯವಸ್ಥೆ ಬೇಡವೇ?
ಆ ಪ್ರಶ್ನೆ ಹೊಸದೇನೂ ಅಲ್ಲ. ಮಾವಿನ ಹಣ್ಣು ಒಳ್ಳೆಯ ಕೆಂಪು ಬಣ್ಣದಿಂದ ವಿಜೃಂಭಿಸುವಂತೆ ಮಾಡಲು ಒಂದು ವಿಧದ ಪೌಡರ್ ಬಳಕೆಯಾಗುತ್ತಿದೆ ಎನ್ನುವುದು ರಹಸ್ಯವಲ್ಲ. ಮಾವಿನ ಹಣ್ಣನ್ನು ಮರದಿಂದ ಇಳಿಸಿ, ಮಾರಾಟಕ್ಕೆ ಮಾಗಿಸುವ ಸಂದರ್ಭದಲ್ಲಿ ಪೌಡರ್ ಬಳಕೆ ಅನಿವಾರ್ಯವೇ? ತರಕಾರಿ ಬೆಳೆಗಾರರು ಬಳಸುವ ವಿಶೇಷ ಗೊಬ್ಬರ, ಕ್ರಿಮಿನಾಶಕಗಳ ಪರಿಣಾಮ ಕುರಿತ ಅಧ್ಯಯನಕ್ಕೆ ಸರ್ಕಾರದ ನೆರವಿನ ಕೊರತೆ ಅಡ್ಡಿ ಬರಬಾರದು. ಇದು ಕೇವಲ ಅಂತಾರಾಷ್ಟ್ರೀಯ ವ್ಯವಹಾರದ ಪ್ರಶ್ನೆ ಅಲ್ಲ, ಜನರ ಆರೋಗ್ಯದ ಪ್ರಶ್ನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

