ತಪ್ಪಾಯ್ತು ತಿದ್ಕೋತೀವಿ
ಶಿವಮೊಗ್ಗದಿಂದ ಎಲ್.ಎಂ.ಮಾಧವ ಶಾಸ್ತ್ರಿ ಪತ್ರ ಬರೆದಿದ್ದಾರೆ. 'ಡಿ.27ರ ಪುಟ 12ರಲ್ಲಿ ಒಂದು ಸುದ್ದಿ ಪ್ರಕಟವಾಗಿದೆ. 'ಜ.11ರಂದು ಮುಂಬೈನಲ್ಲಿ ಬಿಸಿಸಿಐ ಪ್ರಶಸ್ತಿ ವಿತರಣಾ ಸಮಾರಂಭ ನಡೆಸಲಾಗುವುದು. ಈ ಸಭೆಯಲ್ಲಿ ದಿವಂಗತ ಏಕ್ನಾಥ್ ಸೋಲ್ಕರ್ ಅವರಿಗೆ ಒಂದು ಸ್ಮರಣಿಕೆ ಹಾಗೂ 15 ಲಕ್ಷ ನಗದು ಹಣ ನೀಡಲಾಗುವುದು' ಎಂಬರ್ಥ ಬರುವ ಸುದ್ದಿಯಿದೆ. ಇದು ಸಾಧ್ಯನಾ?' ಎಂದು ಪ್ರಶ್ನಿಸಿದ್ದಾರೆ.
ಮಾಧವ ಶಾಸ್ತ್ರಿ ಬರೆದಂತೆ ಸಂಪೂರ್ಣವಾಗಿ ತಪ್ಪಾಗಿಲ್ಲ. ಆದರೆ ಸ್ವಲ್ಪ ಗೊಂದಲ ಮೂಡಿಸುವಂತಿದೆ. ಏಕ್ನಾಥ್ ಸೋಲ್ಕರ್ ಅವರ ಸೇವೆಯನ್ನು ಪರಿಗಣಿಸಿ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಬರೆದಿದ್ದರೇ ಹೆಚ್ಚು ಸೂಕ್ತವಾಗುತ್ತಿತ್ತು.
ದಾವಣಗರೆಯೆ ಹರಪನಹಳ್ಳಿಯಿಂದ ಕೆ.ಶ್ರೀನಿವಾಸ ರಾವ್ ಪತ್ರ ಬರೆದಿದ್ದಾರೆ. 'ಡಿ.21ರ 'ಕನ್ನಡಪ್ರಭ'(ಶಿವಮೊಗ್ಗ ಆವೃತ್ತಿ)ದಲ್ಲಿ ಪ್ರಕಟವಾದ ದಾವಣಗೆರೆಯಲ್ಲಿ ನಡೆಯಲಿರುವ ಶ್ರವಣ ದೋಷವುಳ್ಳವರ ಸಮ್ಮೇಳನ ಕುರಿತ ವರದಿಯಲ್ಲಿ ಹಲವೆಡೆ 'ನ್ಯೂನತೆ' ಬದಲಾಗಿ 'ನೂನ್ಯತೆ' ಶಬ್ದ ಉಪಯೋಗಿಸಿದ್ದೀರಿ. 'ನ್ಯೂನತೆ' ಎಂದರೆ ಕುಂದು ಅಥವಾ ಕೊರತೆ ಎಂದರ್ಥ. 'ನ್ಯೂನ' ಎಂದರೆ ಕೊರತೆಯಳ್ಳವ ಎಂದರ್ಥ. ಇದೇ ಪುಟದ ಚಳ್ಳಕೆರೆಯ ವರದಿಯಲ್ಲಿ 'ಆಹಾರ ಸೇವಿಸಿ' ಎಂದು ಮುದ್ರಿಸಿದ್ದೀರಿ. ಇದು 'ಸೇವನೆ' ಎಂದಾಗಬೇಕಿತ್ತು' ಎಂದಿದ್ದಾರೆ.
ಹುಬ್ಬಳ್ಳಿಯಿಂದ ಇಳಿಮನೆ ಸುಭಾಶ್ಚಂದ್ರ ಹೆಗಡೆ ಪತ್ರ ಕಳುಹಿಸಿದ್ದಾರೆ. 'ಜ.2ರ ಕ.ಪ್ರ.ದಲ್ಲಿ 'ದಕ್ಷಿಣ ಸುಡಾನ್ ಏಕೆ ಸುಡುಗಾಡಾಗುತ್ತಿದೆ?' ಲೇಖನದ ಮಧ್ಯದ ಕಾಲಂನ ಕೊನೆಯಲ್ಲಿ, 'ಉಗಾಂಡಾದ ನಾಯಕ(ಅಧ್ಯಕ್ಷ?) ಬೋಯೇರಿ ಮುಸೋವೇನಿ ಮಾ' ಅಂತ ಬರೆದಿದೆ. ಇದು 'ಯೋವೇರಿ ಮುಸೆವೇನಿ'(ಮಾ ಇರಬಾರದು) ಎಂದು ಆಗಬೇಕು. ಇದು ಮೂಲ ವಾಷಿಂಗ್ಟನ್ ಪೋಸ್ಟ್ನ ತಪ್ಪೋ, ಕನ್ನಡ ತುರ್ಜುಮೆದಾರರದೋ ಅಥವಾ ಕ.ಪ್ರ?' ಎಂದು ಪ್ರಶ್ನಿಸಿದ್ದಾರೆ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಹೆಸರು ಸರಿಯಾಗಿಯೇ ಇದೆ. ತುರ್ಜುಮೆ ಮಾಡುವಾಗ ಆದ ತಪ್ಪಿನಿಂದ ಹೀಗಾಗಿದೆ.
ಬೆಂಗಳೂರಿನಿಂದ ವಿ.ಹೇಮಂತಕುಮಾರ್ ಪತ್ರ ಬರೆದಿದ್ದಾರೆ. 'ಜ.3ರ ಸಂಚಿಕೆಯ ಪುಟ 3ರಲ್ಲಿ 'ಬಸ್ ಹಿಂದಿಕ್ಕಲು ಹೋಗಿ ಸಾವು ತಂದುಕೊಂಡ ಬಾಲಕ' ಶೀರ್ಷಿಕೆಯ ಲೇಖನದಲ್ಲಿ 'ದ್ವಿಚಕ್ರ ವಾಹನದಲ್ಲಿ ಶಾಲಾ ಬಸ್ ಹಿಂದಿಕ್ಕಲು ಹೋಗಿ ಕೆಳಗೆ ಬಿದ್ದ ಶಾಲಾ ಬಾಲಕನ ಮೇಲೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆರ್ಪಿಸಿ ಬಡಾವಣೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ' ಎಂದು ಪ್ರಕಟವಾಗಿದೆ. ಲೇಖನ ಮುಂದುವರೆದು 'ರಾಜಾಜಿನಗರದ ಸರ್ದಾರ್ ಪಟೇಲ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ ಸುಮುಖ ಗುರುವಾರ ಬೆಳಗ್ಗೆ ಇಡ್ಲಿ ತರಲು ತಂದೆಯ ಹೋಂಡಾ ಆ್ಯಕ್ಟೀವಾ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಗೆ ಹೋಗಿದ್ದ' ಎಂದಿದೆ. ಹಾಗಿದ್ದರೆ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ ಎಂದು ಬರೆಯುವುದು ಎಷ್ಟು ಸಮಂಜಸ? ಶುಕ್ರವಾರ ಬೆಳಗ್ಗೆ ನಡೆದ ಘಟನೆ ಶುಕ್ರವಾರದ ಪತ್ರಿಕೆಯಲ್ಲಿಯೇ ಪ್ರಕಟಗೊಳ್ಳಲು ಸಾಧ್ಯವೇ? ಅದು ಗುರುವಾರ ಬೆಳಗ್ಗೆ ನಡೆದ ಘಟನೆ ಎಂದು ಪ್ರಕಟವಾಗಬೇಕಿತ್ತು' ಎಂದಿದ್ದಾರೆ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

