ತಪ್ಪಾಯ್ತು ತಿದ್ಕೋತೀವಿ
ತಾಳಿಕೋಟೆಯ ಎಸ್.ಕೆ. ಮಹಾವಿದ್ಯಾಲಯದಿಂದ ವಿರೇಶ ಶ. ಸಿಂದಗಿ ಅವರು ಬರೆಯುತ್ತಾರೆ- 'ಜ.29ರಂದು 'ಕನ್ನಡಪ್ರಭ'ದಲ್ಲಿನ ಪುಟ 3ರ (ಸ್ಥಳೀಯ ಆವೃತ್ತಿ) 'ವ್ಯಕ್ತಿಯ ಶವಪತ್ತೆ' ಎಂಬ ವರದಿಯ ಕೊನೆಯಲ್ಲಿ 'ಹೆಟ್ಟಾಗಿ' ಎಂದಾಗಿದೆ. ಅದು 'ಪೆಟ್ಟಾಗಿ' ಎಂದಾಗಬೇಕಿತ್ತು. ಪುಟ 5ರ "ಶಿ'ರಾಡಿ ರಸ್ತೆ ಅಭಿವೃದ್ಧಿಗೆ 95 ಕೋಟಿ ಮಂಜೂರು' ಎಂಬ ವರದಿಯ 'ಚತುಷ್ಪಥ ನಿರ್ಮಾಣ ಯೋಜನೆ' ಎಂಬ ಉಪಶೀರ್ಷಿಕೆಯಲ್ಲಿ- 'ಈ ಹಿನ್ನೆಲೆಯಲ್ಲಿ ಸಂಪೂರ್ಣ ಘಾಟ್ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ' ಎಂದಿದೆ. ಇಲ್ಲಿ ಸಂಪೂರ್ಣ ಘಾಟ್ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಎಂಬುದರ ಬದಲಾಗಿ 'ಘಾಟ್ನಲ್ಲಿ ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಿಸಲು' ಎಂದಾಗಬೇಕಿತ್ತು.'
'ಜ.30ರ ದಿನಪತ್ರಿಕೆಯ ಪುಟ 2ರಲ್ಲಿ (ಸ್ಥಳೀಯ ಆವೃತ್ತಿ) 'ಸಿಂದಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 25ಕೋಟಿ ಯೋಜನೆ' ಎಂದಿದೆ. ಆದರೆ ವರದಿಯ ವಿವರಣೆಯಲ್ಲಿ 54 ಕೋಟಿ ಯೋಜನೆ ಎಂದಾಗಿದೆ. ಇವೆರಡರಲ್ಲಿ ಯಾವುದು ಸರಿಯಾದ್ದು?'
'ಪುಟ 4ರಲ್ಲಿ 'ಕೆಬಿಜೆಎನ್ಎಲ್ ಲೆಕ್ಕಾಧಿಕಾರಿ ಮನೆ ಮೇಲೆ ಲೋಕಾ ದಾಳಿ' ಎಂಬ ವರದಿಯ 'ಲೋಕಾಯುಕ್ತ ದಾಳಿ: ಗಾಬರಿಗೊಂಡ ಮನೆ ಸದಸ್ಯರು' ಎಂಬ ಉಪಶೀರ್ಷಿಕೆಯ ಕೊನೆಯಲ್ಲಿ 'ಲೋಕಾಯುಕ್ತರ ಹಠಾತ್ ದಾಳಿಯಿಂದ ಮಹಾಂತೇಶ ಅವರ ಕುಟುಂಬದ ಸದಸ್ಯರು ಮತ್ತು ಬಡಾವಣೆಯ ನಿವಾಸಿಗಳು ಸ್ವಲ್ಪ ಗಾಬರಿಕೊಂಡರು' ಎಂದಾಗಿದೆ. 'ಗಾಬರಿಗೊಂಡರು' ಎಂದಾಗಬೇಕಿತ್ತು.'
'ಪುಟ10ರ 'ಒಡಿಶಾ ಗಣಿ ಅಕ್ರಮ 60ಸಾವಿರ ಕೋಟಿ' ಎಂಬ ವರದಿಯ 'ವರದಿಯಲ್ಲಿನ ಅಂಶಗಳೇನು?' ಎಂಬ ಉಪಶೀರ್ಷಿಕೆಯಲ್ಲಿ '164 ಪ್ರಕರಣಗಳು' ಎಂದು ಮೊದಲು ಪ್ರಕಟಿಸಿ ಆನಂತರ '146 ಪ್ರಕರಣಗಳು' ಎಂದು ತಪ್ಪಾಗಿ ಮುದ್ರಿಸಲಾಗಿದೆ. ಪುಟ 11ರ ಕ್ರೀಡಾ ಪುಟದ 'ಟಿ20ರಲ್ಲೂ ಆಂಗ್ಲರಿಗೆ ಕಹಿ' ಎಂಬ ವರದಿಯಲ್ಲಿ ಸಂಕ್ಷಿಪ್ತ ಸ್ಕೋರ್ನಲ್ಲಿ- 'ಆಸ್ಟ್ರೇಲಿಯಾ 20 ಓವರ್ಗಳಲ್ಲಿ 4 ವಿಕೆಟ್ಗೆ 213 ರನ್ ಗಳಿಸಿದೆ' ಎಂದಿದ್ದರೆ, ವಿವರಣೆಯಲ್ಲಿ '4 ವಿಕೆಟ್ಗೆ 113ರನ್ಗಳ ಬೃಹತ್ ಮೊತ್ತ ಕಲೆಹಾಕಿತು' ಎಂದು ತಪ್ಪಾಗಿ ಮುದ್ರಣಗೊಂಡಿದೆ' ಎಂದಿದ್ದಾರೆ.
ಒಡಿಶಾ ಗಣಿ ಅಕ್ರಮದಲ್ಲಿ 164 ಪ್ರಕರಣಗಳು ಎಂಬುದು ಸರಿ. '146' ಎಂಬುದು ಕಂಪ್ಯೂಟರ್ನಲ್ಲಿ ಅಳವಡಿಸುವಾಗ ಮಾಡಿದ ತಪ್ಪನಿಂದ ಆಗಿದ್ದು. ಘಾಟ್ನಲ್ಲಿ ಸಂಪೂರ್ಣ ಕಾಂಕ್ರೀಟ್ ರಸ್ತೆ ಎಂಬುದಕ್ಕೂ ಸಂಪೂರ್ಣ ಘಾಟ್ನಲ್ಲಿ ಕಾಂಕ್ರೀಟ್ ರಸ್ತೆ ಎಂಬುದಕ್ಕೂ ವ್ಯತ್ಯಾಸವಿದೆಯಾದರೂ, ಭಾರೀ ಅಪಾರ್ಥವನ್ನಂತೂ ಕೊಡುವುದಿಲ್ಲ.
ಸಿಂದಗಿ ಕುಡಿಯುವ ನೀರಿನ ಯೋಜನೆಯಲ್ಲಿ ಸುದ್ದಿ ವಿವರಣೆಯಲ್ಲಿ ಪ್ರಕಟವಾದಂತೆ 54 ಕೋಟಿಯೇ ಸರಿಯಾದ ಮೊತ್ತ. ಶೀರ್ಷಿಕೆಯಲ್ಲಿ ತಪ್ಪಾಗಿ ಪ್ರಕಟವಾಗಿದೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

