ಸಂಪಾದಕೀಯ

ಪ್ರೀತಿಗೂ-ಸಾವಿಗೂ ಏನು ವ್ಯತ್ಯಾಸ?

Published On :

ಫ್ಯಾಷನ್ ಡಿಸೈನರ್ ಮಧು, 9945737427
ಮೊದಲೆರಡು ಪ್ರೇಮದಲ್ಲಿ ಸೋಲು ಅನುಭವಿಸಿದವರು ಮೂರನೇ ಪ್ರೇಮದಲ್ಲಿ ಯಶಸ್ವಿಯಾಗುತ್ತಾರಂತೆ?
ಅನುಭವ ಬೇಕು ಎನ್ನುವುದು ಅದಕ್ಕೇ ಅಲ್ಲವೇ.



ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಹಿಂದಿನ ದಿನಗಳಲ್ಲಿ ಬಂದ ಅತಿಥಿಗಳಿಗೆ ತಿಂಡಿ ತಿನ್ನಿ, ಕಾಫಿ ಕುಡಿಯಿರಿ, ಊಟಮಾಡಿ ಅಂತಿದ್ರು. ಈಗಿನ ಕಾಲದಲ್ಲಿ?
ರಾಹುಲ್ ಗಾಂಧಿ ಸಂದರ್ಶನ ಹಚ್ಲಾ ಅಂತ ಕೇಳಿದ್ರಂತೆ ಒಬ್ರು!


ತಲವಾಟ ಮಂಜುನಾಥ, ಸಾಗರ, 9480931611
ಪ್ರೀತಿಗೂ-ಸಾವಿಗೂ ಏನು ವ್ಯತ್ಯಾಸ?
ಸಾವು ಒಂದೇ ಸಾರಿ ಬರುತ್ತದೆ. ಪ್ರೀತಿ ಹಾಗಲ್ಲ!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಸ್ವಾತಂತ್ರ್ಯ ದಿನಾಚರಣೆಗೂ ಪ್ರೇಮಿಗಳ ದಿನಾಚರಣೆಗೂ ಏನು ವ್ಯತ್ಯಾಸ?
ಒಂದು ಸ್ವಾತಂತ್ರ್ಯ ಪಡೆದಿದ್ದಕ್ಕೆ, ಇನ್ನೊಂದು ಸ್ವಾತಂತ್ರ್ಯ ಕಳೆದುಕೊಳ್ಳುವುದಕ್ಕೆ!

ಸಂತೆಬೆನ್ನೂರು ಫೈಜ್ನಟ್ರಾಜ್
ಪ್ರೀತಿ ಕಾಣಂಗೆ ಮಾಡಬೇಕಾ?
ಕಾಣಂಗೆ ಮಾಡದಿದ್ರೂ, ಪ್ರೀತಿ ಮಾಡೋವಾಗ ಕಾಣದೇ ಇರಂಗೆ ನೋಡ್ಕೊಳ್ಳೋದು ಒಳ್ಳೇದು!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.