ತಪ್ಪಾಯ್ತು ತಿದ್ಕೋತೀವಿ
ತುಮಕೂರು ಜಿಲ್ಲೆ ಕೊರಟಗೆರೆಯಿಂದ ಚಿಕ್ಕಣ್ಣ ಅವರು ಬರೆಯುತ್ತಾರೆ- 'ಫೆ.14ರಂದು ಪತ್ರಿಕೆಯ ಮುಖಪುಟದಲ್ಲಿ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಈ ಸಾಲಿನ ಕೆಳಗೆ ಪ್ರೋಫೆಸರ್ ಎಂದು ಅಚ್ಚಾಗಿದೆ. ಅದು ಅದರ ಕೆಳಗಿನ ಸಾಲಿನಲ್ಲಿರುವಂತೆ ಪ್ರೊಫೆಸರ್ ಎಂದು ಆಗಬೇಕಿತ್ತಲ್ಲವೇ?'
'4ನೇ ಪುಟದ 'ಮೋದಿ ತೇರು ತುರುವೇಕೆರೆಗೂ ಬಂತು' ತಲೆಬರಹದ ಸುದ್ದಿಯ 3ನೇ ಪ್ಯಾರಾದ ಕೊನೇ ಸಾಲಿನಲ್ಲಿ 'ಮದಲಾದವರು' ಎಂದಿದೆ. ಅದು ಮೊದಲಾದವರು ಅಥವಾ ಮುಂತಾದವರು ಎಂದಾಗಬೇಕಲ್ಲವೇ? 5ನೇ ಪುಟದ ಸುದ್ದಿ ಸಂಕ್ಷೇಪ (ಶ್ರೀ ಲಂಕಾದಲ್ಲಿ ರಾಮಾಯಣ ಪ್ರವಾಸಿ ತಾಣಗಳ ದರ್ಶನ)ದ 14ನೇ ಸಾಲಿನಲ್ಲಿ ಪ್ರವಾಸಿ ಎಂದಿದೆ. ಅದು ಪ್ರವಾಸ ಎಂದಾಗಬೇಕಲ್ಲವೇ?'
'5ನೇ ಪುಟದ 'ಭಾಷಾ ಮಾಧ್ಯಮ: 3ನೇ ದಿನವೂ ಮಂಗಳಾರತಿ' ತಲೆಬರಹದ ಸುದ್ದಿಯ 3ನೇ ಪ್ಯಾರಾದ ಕೊನೆಯಲ್ಲಿ 'ಸಂವಿಧಾನ ಪೀಠ' ಎಂಬುದು 'ವಿಧಾನ ಪೀಠವು' ಎಂದಿದೆ. ಅದು ಸರಿಯೇ? ಅದೇ ವಿಷಯಕ್ಕೆ ಸಂಬಂಧಿಸಿದ 'ಏನಿದು ವಿವಾದ' ತಲೆಬರಹದ ಸುದ್ದಿಯ ಕೊನೇ ಸಾಲಿನಲ್ಲಿ 'ವಿಭಾಗೀಯ ತೀರ್ಪು' ನೀಡಿತ್ತು ಎಂದಿದೆ. ವಿಭಾಗೀಯ ಮತ್ತು ತೀರ್ಪು ಪದಗಳ ನಡುವೆ 'ಪೀಠ' ಎಂಬ ಪದ ಇರಬೇಕಿತ್ತಲ್ಲವೇ?'
'6ನೇ ಪುಟದ ಪತ್ರಪ್ರಭ ಕಾಲಂನಲ್ಲಿ ಸಾಮಗ್ರ ದತ್ತಾತ್ರಿ ಎಂದಿದೆ. ಅದು ಸಾಮಗ ದತ್ತಾತ್ರಿ ಆಗಬೇಕಿತ್ತಲ್ಲವೇ?
7ನೇ ಪುಟದಲ್ಲಿ ಪ್ರಕಟವಾಗಿರುವ ಮಲ್ಲಿಕಾರ್ಜುನ ಗುಮ್ಮಗೋಳ ಅವರ 'ತಾಜ್ಮಹಲ್ ನಿಜಕ್ಕೂ ಪ್ರೇಮ ಸ್ಮಾರಕವೇ?' ಲೇಖನದ 3ನೇ ಪ್ಯಾರಾದ 24ನೇ ಸಾಲಿನಲ್ಲಿ 'ಹೆಕ್ಕಿಡುವ' ಎಂದಿದೆ. ಅದು 'ಹೆಕ್ಕಿರುವ' ಎಂದಿರಬೇಕಿತ್ತಲ್ಲವೇ?'
'12ನೇ ಪುಟದಲ್ಲಿ 'ದೇಶೀಗರೂ' ಎಂದು ತಲೆಬರಹ ಅಚ್ಚಾಗಿದೆ. ಅದು 'ದೇಶಿಗರೂ' ಎಂದಾಗಬೇಕಲ್ಲವೇ?
ಅದೇ ಪುಟದಲ್ಲಿ 'ದಕ್ಷಿಣ ಆಫ್ರಿಕೆಗೆ ಸ್ಥಳಾಂತರ ಸಾಧ್ಯತೆ' ಎಂದಿದೆ. ಇದರಲ್ಲಿ ಆಫ್ರಿಕೆ ಎನ್ನುವುದು 'ಆಫ್ರಿಕಾ' ಎಂದಾಗಬೇಕಿತ್ತಲ್ಲವೇ? ಅದೇ ತಲೆಬರಹದಡಿಯ 1ನೇ ಪ್ಯಾರಾದ 4ನೇ ಸಾಲಿನಲ್ಲಿ 'ಮಂಡಳಿ' ಎಂಬ ಪದ ತಪ್ಪಾಗಿ ಅಚ್ಚಾಗಿದೆ' ಎಂದಿದ್ದಾರೆ.
ಚಿಕ್ಕಣ್ಣ ಅವರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಎಲ್ಲ ಪ್ರಶ್ನೆಗೂ ಹೌದು ಎಂಬ ಒಂದೇ ಉತ್ತರ ಕೊಡಬೇಕಾಗುತ್ತದೆ. ಯಾಕೆಂದರೆ ಅವರ ಪ್ರಶ್ನೆಯಲ್ಲೇ ಉತ್ತರವಿದೆ.
ಬಾಗಲಕೋಟೆ ಜಿಲ್ಲೆ ಇಳಕಲ್ಲದಿಂದ ಶ್ರೀಕಾಂತ ಮುದಗಲ್ಲ ಅವರು ಬರೆಯುತ್ತಾರೆ- 'ಫೆ.11ರ ಸಂಚಿಕೆಯ ಪುಟ 2ರಲ್ಲಿಯ 'ರನ್ನ ಉತ್ಸವ ಲೆಕ್ಕ ಇನ್ನೂ ಆಗಿಲ್ಲ ಪಕ್ಕಾ!' ಸುದ್ದಿಯ ಉಪ ತಲೆಬರಹದಲ್ಲಿ '65 ಲಕ್ಷ ವೆಚ್ಚದ ಲೆಕ್ಕ ಪತ್ರ ಇನ್ನೆರಡು ದಿನಗಳ ಲಭ್ಯ...' ಎಂದಿದೆ. ಅದು 'ಇನ್ನೆರಡು ದಿನಗಳಲ್ಲಿ ಲಭ್ಯ' ಎಂದಾಗಬೇಕಿತ್ತು. ಪುಟ 10ರಲ್ಲಿಯ ಹೆಚ್ಚು ಪ್ರಶ್ನೆ ಕೇಳಿದವರು ಎಂಬ ಬಾಕ್ಸ್ನಲ್ಲಿ ರಾಯಚೂರು 'ಶಾಸಕ ಎಸ್. ಫಕೀರಪ್ಪ' ಎಂದಿದೆ. ಅದು ರಾಯಚೂರು 'ಸಂಸದ ಎಸ್. ಫಕೀರಪ್ಪ' ಎಂದಾಗಬೇಕಿತ್ತು.'
'ಇನ್ನು ಪುಟ 12(ಕ್ರೀಡಾಪುಟ) ರಣಜಿ ಮೆಲಕು ಅಂಕಣದಲ್ಲಿ 'ಸ್ಪಿನ್ನರ್ ಶ್ರೇಯಸ್ ಗೋಪಾಲ' ಬಗ್ಗೆ ಬರೆದಿದ್ದೀರಿ. ಆದರೆ ತಲೆಬರಹದಲ್ಲಿ ಅವರ ಹೆಸರನ್ನು ಹಾಕುವ ಬದಲು ಸಿ.ಎಂ. ಗೌತಮ್ರ ಹೆಸರನ್ನು ಪ್ರಕಟಿಸಿದ್ದೀರಿ' ಎಂದಿದ್ದಾರೆ. ಮೊದಲ ಆವೃತ್ತಿಯ ಪತ್ರಿಕೆಗಳಲ್ಲಿ ಈ ತಪ್ಪಾಗಿರುವುದು ನಿಜ. ನಂತರದ ಆವೃತ್ತಿಗಳಲ್ಲೇ ಈ ತಪ್ಪನ್ನು ತಿದ್ದಿಕೊಳ್ಳಲಾಗಿದೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

