ಸಂಪಾದಕೀಯ

ಹೆಂಗಸರ ವ್ಯಾಮೋಹ ಪಕ್ಷಾತೀತ

Published On :

ತುಮಕೂರಿನಲ್ಲಿ  ನಡೆದ ಕಾಂಗ್ರೆಸ್ ಸಮಾವೇಶದಲ್ಲಿ 'ಬಿಜೆಪಿಯವರಿಗೆ ಹೆಂಗಸರದೆ ಚಿಂತೆ' ಎಂದು ಉಮಾಶ್ರೀಯವರು ಮಾತನಾಡಿರುವುದು ವರದಿಯಾಗಿದೆ. ಪ್ರಚಲಿತ ವಿದ್ಯಮಾನವನ್ನು ಗಮನಿಸಿದರೆ ಆತಿಶಯೋಕ್ತಿ ಇಲ್ಲ. ಇದೇ ಸಮಯದಲ್ಲಿ ಈ ಹಿಂದೆ ಕಾಂಗ್ರೆಸ್ ನಾಯಕರು ಮಾಡಿದ ಘನ ಕಾರ್ಯವನ್ನು ಉಲ್ಲೇಖಿಸದಿದ್ದರೆ ಈ ಹೇಳಿಕೆಗಳು ಅಪೂರ್ಣವಾಗಿ ಮತ್ತು ಏಕಮುಖವಾಗಿ ಬಿಡುತ್ತವೆ. ಇದೇ ಪಟ್ಟಿಗೆ  ದಿ. ನೆಹರು, ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಗುಂಡೂರಾಯರು ಇತ್ಯಾದಿ ಸೇರಿಸಿದ್ದರೆ ಒಂದು ತೂಕ ಬರುತ್ತಿತ್ತು. ಪ್ರಮುಖವಾಗಿ  ನೆಹರೂ ಮತ್ತು ಲೇಡಿ  ಮೌಂಟ್ ಬ್ಯಾಟನ್‌ರ ಪಾತ್ರ ಲಂಪಟ- ಲಾಲಸೆಗೆ ಸೀಮಿತವಾಗಿದ್ದರೆ ಇದನ್ನು  ಲಘುವಾಗಿ ಪರಿಗಣಿಸಿ ಮರೆತುಬಿಡಬಹುದಿತ್ತು. ಆದರೆ ಈ ಸರಸ ದೇಶವನ್ನು  ಇಬ್ಭಾಗ ಮಾಡುವುದರಲ್ಲಿ ಪರಿಸಮಾಪ್ತಿಯಾಯಿತು. ನೆಹರೂ ದೇಶವನ್ನು ಒಡೆಯಲು ಸಮ್ಮತಿಸಿದ್ದಾರೆ ಎಂಬುದನ್ನು ಆರಗಿಸಿಕೊಳ್ಳಲು ಸ್ವತಃ ಲಾರ್ಡ್ ಮೌಂಟ್ ಬ್ಯಾಟನ್ ಆವರಿಗೆ ಕಷ್ಟವಾಯಿತು ಎಂಬುದು ಈಗ ಇತಿಹಾಸದಿಂದ ಮರೆಮಾಚುವ ಪ್ರಯತ್ನ ಸಫಲವಾಗದೆ ಜಗ್ಗಜಾಹಿರಾಗಿದೆ.  ಕಾಂಗ್ರೆಸಿನ ನಾಯಕ ಶಿಖಾಮಣಿಗಳು ಚರಿತ್ರೆಯನ್ನು ತಿಳಿದುಕೊಳ್ಳುವುದು ಅಪೇಕ್ಷಣೀಯ.
ಇನ್ನು, ಬಿಜೆಪಿಯವರ ಮನೆ ನಾಯಿಯೂ ತ್ಯಾಗ ಮಾಡಿಲ್ಲ ಎನ್ನುತ್ತ, ದೇಶಕ್ಕಾಗಿ ಇಂದಿರಾಗಾಂಧಿ ಮತ್ತು ರಾಜೀವರ ಹತ್ಯೆಗಳನ್ನು ಉದಾಹರಿಸಿದ್ದಾರೆ. ಈ ಎರಡು ಘಟನೆಗಳು ಸ್ವಯಂಕೃತ ಆಪರಾಧಗಳು ಹೊರತು ಬಲಿದಾನವಲ್ಲ. ಸಿಖ್ಖರಲ್ಲಿ  ಒಡಕನ್ನುಂಟು ಮಾಡಲು  ಭಿಂದ್ರನವಾಲೆ ಯನ್ನು ಎತ್ತಿಕಟ್ಟಿದ್ದೆ ಇಂದಿರಾಗಾಂಧಿ. ಅದೇ ದೇಶಕ್ಕೆ  ಮುಳುವಾಯಿತು, ಇಂದಿರಾ ಗಾಂಧಿ ಪ್ರಾಣ ತೆರಬೆಕಾಯಿತು. ರಾಜೀವ ಗಾಂಧಿ ಶ್ರೀಲಂಕನ್ನರ ಸಂಚಿಗೆ ಸಿಕ್ಕು ತಮಿಳರ ವಿರುದ್ಧ ಯುದ್ಧ ಸಾರಿ ಭಾರತದ ವಿದೇಶಾಂಗ ನೀತಿಯನ್ನು ಕುಲಗೆಡಿಸಿದರು, ಪ್ರಾಣಬಿಟ್ಟರು.  ಇಲ್ಲಿ ನಾಯಿ -ಕುರಿ -ಹುಲಿ ಪ್ರಶ್ನೆ ಉದ್ಭವಿಸುವುದಿಲ್ಲ. ವೇದಿಕೆ ಸಿಕ್ಕಾಕ್ಷಣ ಬಾಯಿಬಡುಕತನ ಬೇಡ, ಇದು ನಿಮ್ಮ ಸ್ಥಾನಕ್ಕೆ ಶೋಭಿಸದು.          
- ಪ್ರಕಾಶ ವಾಟ್ವೆ

ಉತ್ತಮ ಚಿಂತನೆ
ತಾ.11.2.14ರ ಪತ್ರಿಕೆಯಲ್ಲಿ ಪ್ರಕಟವಾದ ಪ.ಪೂ. ಕಾಲೇಜಿನ ಮಕ್ಕಳಿಗೂ ಸಹ ಬಿಸಿಯೂಟ ಯೋಜನೆ ವಿಸ್ತರಿಸುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವರಾದ ಮಾನ್ಯ ವಿ. ಶ್ರೀನಿವಾಸಪ್ರಸಾದ್‌ರವರ ಚಿಂತನೆ ತುಂಬಾ ಉಪಯುಕ್ತವಾಗಿದೆ. ಬಹುದೂರ ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಊಟದ ವ್ಯವಸ್ಥೆ ಅನಾನುಕೂಲವಾಗುತ್ತಿರುವುದು ಸತ್ಯದ ಸಂಗತಿಯಾಗಿದೆ. ಬೆಳಿಗ್ಗೆಯೇ ಕಾಲೇಜಿಗೆ ಹೋಗುವ ಧಾವಂತದಲ್ಲಿ ಏನೂ ತಿನ್ನದೇ ಹಸಿದು ಬಳಲಿದಾಗ, ಹೋಟೆಲ್ ತಿಂಡಿ ಊಟ ಬಲು ದುಬಾರಿಯಾಗಿರುವುದರಿಂದ ಓದುವ ಮಕ್ಕಳ ವ್ಯಾಸಂಗಕ್ಕೆ ದುಬಾರಿ ಖರ್ಚಿನ ಹೊರೆ ಪೋಷಕರ ಮೇಲೆ ಬಿದ್ದಿದೆ. ಸರ್ಕಾರ ತಕ್ಷಣ ಕ್ರಮ ತೆಗೆದುಕೊಂಡು ಬಹುಬೇಗ ಬಿಸಿಯೂಟದ ಯೋಜನೆಯನ್ನು ಕಾಲೇಜ್ ಮಟ್ಟಕ್ಕೂ ವಿಸ್ತರಿಸಬೇಕೆಂದು ಕಳಕಳಿಯ ಮನವಿಯಾಗಿದೆ.
- ಹಾ.ರಾ. ರಂಗನಾಥ, ಅಂಚೆ ನೌಕರ, ಬಿನ್ನಿಕಟ್ಟೆ, ಹೊನ್ನಾಳಿ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.