ಸಂಪಾದಕೀಯ

ಪ್ರೇಮಿಗಳನ್ನು 'ಲವ್ ಬರ್ಡ್ಸ್‌' ಎಂದೇಕೆ ಕರೆಯುತ್ತಾರೆ?

Published On :

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಪ್ರೇಮಿಗಳನ್ನು 'ಲವ್ ಬರ್ಡ್ಸ್‌'  ಎಂದೇಕೆ ಕರೆಯುತ್ತಾರೆ?
ಹಾರಿ ಹೋಗುವ ಸಾಧ್ಯತೆ ಜಾಸ್ತಿ ಇರುವುದರಿಂದ!

ಜಿ.ಎಂ. ರಾಜಶೇಖರ, ದಾವಣಗೆರೆ
ಟಿ.ವಿ. ಸೀರಿಯಲ್‌ನಲ್ಲಿ ಯಾಕೆ ನಿಕ್ಕರ್, ಬನಿಯನ್ ಸೂಟ್ ಕೇಸ್‌ನಲ್ಲಿ ಪ್ಯಾಕ್ ಮಾಡಲ್ಲ?
ಸದ್ಯ, ಟಾಯ್ಲೆಟ್‌ಗೆ ಹೋಗೋದು ಯಾಕೆ ತೋರ್ಸೋಲ್ಲ ಅಂತ ಕೇಳಲಿಲ್ಲವಲ್ಲ!

ಸಿ. ನಾಗರಾಜ, ಅರದೋಟ್ಲು ಭದ್ರಾವತಿ
ಹೆಣ್ಣಿನ ತುಟಿಗಳ ಸೌಂದರ್ಯದ ಮುಂದೆ ಗುಲಾಬಿ ಏನು?
ಏನೇನೂ ಅಲ್ಲ ಅನ್ನುವುದರಲ್ಲೇ ಲಾಭವಿದೆ!

ಓಂ ಚನ್ನೇಶ, ಅರಬಿಳಚಿ ಕ್ಯಾಂಪ್
ಬಾಯಿ ಮುಚ್ಚಿ ನಗುವವನಿಗೂ, ಹಲ್ಲು ಕಿರಿದು ನಗುವವನಿಗೂ ವ್ಯತ್ಯಾಸವೇನು?
ಬಾಯಿ ಮುಚ್ಚಿ ನಗುವವನಿಗೆ ಹಲ್ಲು ಉದುರಿಸಿಕೊಳ್ಳುವ ಅಪಾಯವಿರುವುದಿಲ್ಲ!


ಚಿರಪ್ರಭ, ನಂಜನಗೂಡು, 8553793107
ನಿವೃತ್ತರಾದ ಮೇಲಾದರೂ ಸಿಂಗ್ ಮೌನ ಮುರಿಯುವರೇ?
ಆಗ ಮಾತನಾಡಿ ಏನು ಉಪಯೋಗ?!


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.