ಹೀಗೊಂದು ದಿಟ್ಟ ಹೆಜ್ಜೆ
ಪ್ರಧಾನಿ ಮನಮೋಹನಸಿಂಗ್ ಹಾಗೂ ರಕ್ಷಣಾ ಮಂತ್ರಿ ಎ.ಕೆ.ಆಂಟನಿ ಅವರಿಬ್ಬರ "ಶೃಂಗ ಸಭೆಯ" ಅನಂತರ ಭಾರತ ಅಗಸ್ಟ ವೆಸ್ಟ್ಲ್ಯಾಂಡ್ ಸಂಸ್ಥೆಯ ಹೆಲಿಕಾಪ್ಟರ್ ಪೂರೈಕೆಯ ಗುತ್ತಿಗೆಯನ್ನು ರದ್ದು ಮಾಡುವ ನಿರ್ಧಾರ ಖಚಿತವಾಗಿದ್ದು, ಒಂದು ದಿಟ್ಟ ಹೆಜ್ಜೆಯೇ.
ಅತಿ ಪ್ರತಿಷ್ಠಿತರ ಬಳಕೆಗೆಂದೇ ವಿಶೇಷ ಹೆಲಿಕಾಪ್ಟರ್ಗಳನ್ನು ತಯಾರಿಸಿ, ಒದಗಿಸುವ ಸುಮಾರು 3600 ಕೋಟಿ ರುಪಾಯಿಗಳ ವ್ಯವಹಾರ ಇದು. ಈ ಗುತ್ತಿಗೆ ರದ್ದಾಗಲು ಕಾರಣ, ಇಟಲಿ ಮಾಲಿಕತ್ವದ ಅಗಸ್ಟ ಸಂಸ್ಥೆ, ಒಪ್ಪಂದಕ್ಕೆ ಸಹಿ ಬೀಳುವ ಮುನ್ನ ಹಲವು "ಅಧಿಕಾರಿಗಳಿಗೆ" ಲಂಚ ಕೊಟ್ಟಿದ್ದು ಪ್ರಕಟವಾಗಿದ್ದು. ಲಂಚದ ಪ್ರಕರಣ ಹೊರ ಬಿದ್ದಿದ್ದು, ಇಟಲಿಯ ಸರ್ಕಾರ ನಡೆಸಿದ ತನಿಖೆಯೊಂದರ ಪರಿಣಾಮವಾಗಿ. ಇಂತಹ ಬೃಹತ್ ಪ್ರಮಾಣದ ಗುತ್ತಿಗೆ ವ್ಯವಹಾರದ ಸಂಬಂಧದಲ್ಲಿ, ಯಾವ ಹಂತದಲ್ಲೇ ಆದರೂ ಪ್ರಮಾಣಿಕತೆಯ ಕೊರತೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ ಎನ್ನುವ ನಿಯಮವನ್ನು ಸೇರಿಸಲಾಗುತ್ತಿದೆ. ಆ ನಿಯಮದ ಜಾರಿಯಾದ ಪ್ರಕರಣ ಇಲ್ಲವೇ ಇಲ್ಲ ಎನ್ನಬಹುದು.
ಈ ಒಪ್ಪಂದಕ್ಕೆ ಸಹಿ ಬಿದ್ದಿದ್ದು 2010 ರಲ್ಲಿ. ಆಗಿನಿಂದಲೇ ಈ ವಿಚಾರದಲ್ಲಿ ಸಾಕಷ್ಟು ವಾದ-ವಿವಾದ, ಚರ್ಚೆ ಆರೋಪ-ಪ್ರತ್ಯಾರೋಪಗಳ ವಿನಿಮಯ ನಡೆದಿದೆ. ಇಟಲಿಯ ಸಂಸ್ಥೆ, ಈ ವ್ಯವಹಾರದಲ್ಲಿ ಕಂಡುಬಂದಿರುವ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಒಪ್ಪಂದದಿಂದ, ಪಂಚಾಯಿತಿಯ ಮೂಲಕ ಬಗೆ ಹರಿಸಿಕೊಳ್ಳಬೇಕೆನ್ನುವ ಒತ್ತಾಯವನ್ನು ಮಾಡಿದೆ.
ಈ ಹಿನ್ನೆಲೆಯಲ್ಲಿ ಮನಮೋಹನಸಿಂಗ್ - ಎ.ಕೆ.ಆಂಟನಿ ಅವರ ನಡುವೆ ವಿಚಾರ ವಿನಿಮಯ ನಡೆದಿದ್ದು, ಸರ್ಕಾರದ ಈಗಿನ ನಿರ್ಧಾರ ಸಂಬಂಧಪಟ್ಟ ಆಸಕ್ತ ಹಿತಗಳಿಗೆ ಸೂಕ್ತ ರೀತಿಯ ಸಂದೇಶವನ್ನೇ ಕಳಿಸುವಂತೆ ಆಗಬೇಕು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಇದೊಂದು ದಿಟ್ಟಕ್ರಮ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

