ತಪ್ಪಾಯ್ತು ತಿದ್ಕೋತೀವಿ
ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಪತ್ರ ಬರೆದಿದ್ದಾರೆ. ಅವರ ಹೆಸರಿನ ಬಗ್ಗೆ ನನ್ನ ಬಳಿ ಸಾಕಷ್ಟು ಜನ ಪ್ರಶ್ನಿಸಿದ್ದರು ಕೂಡ. ಹೆಸರು ವಿಚಿತ್ರವಾಗಿದೆಯಲ್ಲ ಎಂದು ಅಚ್ಚರಿಪಟ್ಟವರು ಸಾಕಷ್ಟು ಜನ. ಅವರು ಬರೆಯುತ್ತಾರೆ- 'ಡಿ.30ರ 'ಬೈಟುಕಾಫಿ'ಯ 2ನೇ ಪುಟದಲ್ಲಿ ನನ್ನ ಹನಿಗವನ ಪ್ರಕಟವಾಗಿದೆ. ಆದರೆ ನನ್ನ ಹೆಸರೇ ತಪ್ಪಾಗಿ ಮುದ್ರಿತವಾಗಿದ್ದು ಪಿಚ್ಚೆನಿಸಿತು.ಬಹುಶಃ ನನ್ನ ಹೆಸರ ಪ್ರಭಾವವೋ ಏನೋ ನಾನು ಫೈಜ್ನಟ್ರಾಜ್.
ಅದು ಫೈಜ್ನಟ್ರಾಸ್ ಅಂತ ಮುದ್ರಿತವಾಗಿದೆ. ಅಗಲಿದ ಮಿತ್ರನಟರಾಜನನ್ನು ನನ್ನ ಹೆಸರಾದ ಫೈಜ್ನಲ್ಲಿ ಪೋಣಿಸಿ ಹುಟ್ಟೂರು ಸೇರಿಸಿ ಸಂತೆಬೆನ್ನೂರು ಫೈಜ್ನಟ್ರಾಜ್ ಮಾಡಿಕೊಂಡಿದ್ದೇನೆ' ಎಂದಿದ್ದಾರೆ.
ಉತ್ತಮ ಸ್ನೇಹಿತರೇ ಕಡಿಮೆಯಾಗಿರುವ ಈಗಿನ ಕಾಲದಲ್ಲಿ ಅಗಲಿದ ಸ್ನೇಹಿತನನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡು, ನಿಜವಾದ ಸ್ನೇಹ ಮೆರೆದಿರುವವರು ಫೈಜ್ನಟ್ರಾಜ್. ಅವರು ಸ್ನೇಹಿತನ ಬಗೆಗೆ ಇಟ್ಟಿರುವಷ್ಟೇ ಕಾಳಜಿಯನ್ನು ನಾವು ಪ್ರಕಟಿಸುವ ಹೆಸರುಗಳ ಕುರಿತೂ ಇಡಲು ಪ್ರಯತ್ನಿಸೋಣ.
ಬೆಂಗಳೂರಿನ ವಿಜಯನಗರದಲ್ಲಿರುವ ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಪ್ರಾಧ್ಯಾಪಕ ಡಾ. ಆರ್.ಕೆ. ಶ್ರೀಕಾಂತ್ ಅವರು ಬರೆಯುತ್ತಾರೆ-"ತಪ್ಪಾಯ್ತು ತಿದ್ಕೋತೀವಿ' ಅನ್ನೋ ಕಾಲಂ ಇದೆ, ಪರವಾಗಿಲ್ಲ ಅಂತೇನಾದ್ರು ಸ್ವಲ್ಪ ಯಾಮಾರಿದಿರೋ ಏನೊ. ಡಿ.25ರಂದು ಹಾಗೂ ಡಿ.28ರಂದು ಎರಡೂ ದಿನಗಳ ಸಂಪಾದಕೀಯ ಒಂದೇ ಇದೆ. ಬಹಶಃ ಈಗಾಗಲೇ ಇದನ್ನು ಹಲವರು ನಿಮ್ಮ ಗಮನಕ್ಕೆ ತಂದಿರಬಹುದು.'
'ಡಿ.24ರಂದು ಪುಟ 9 ರಲ್ಲಿ ಸೆರೆಸಿಕ್ಕ ಹುಲಿ ನರಭಕ್ಷಕನಲ್ಲ ಎಂಬ ವರದಿಗೆ 'ಶಿವ ನರಭಕ್ಷಕನಲ್ಲ' ಎಂಬ ಶಿರೋನಾಮೆ ನೀಡುವಂತಹ ಕೀಟಲೆಯನ್ನು ನಿಮ್ಮ ಸಹಾಯಕ ಸಂಪಾದಕರು ಅಥವಾ ಉಪ ಸಂಪಾದಕರು ಅಥವಾ ವರದಿಗಾರರು ಮಾಡದಿರುವುದು ಒಳಿತು' ಎಂದಿದ್ದಾರೆ.
ಸೆರೆ ಸಿಕ್ಕ ಹುಲಿಗೆ ವೈದ್ಯರ ತಂಡ ಗುರುತಿಗಾಗಿ 'ಶಿವ' ಎಂದು ನಾಮಕರಣ ಮಾಡಿದ್ದರು. ಅದರ ಹೆಸರನ್ನೇ ಶೀರ್ಷಿಕೆಯಲ್ಲಿ ಬಳಸಲಾಗಿದೆ.
ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಡಿ.23ರಂದು 'ಬೈಟುಕಾಫಿ'ಯ ಪುಟ 2ರಲ್ಲಿ ಎರಡು ಕಡೆ ತಪ್ಪುಗಳಾಗಿವೆ. ನ್ಯಾನೋ ಕಥೆ ಕಲಂ 10ರಲ್ಲಿ, 'ಮನೆಯ ಹಿಂದೆ ನಾಯಿಯೊಂದು ಮರಿ ಹಾಕಿತ್ತು. ಮರಿಗಳನ್ನು ನೋಡಿಕೊಂಡು ಬರಲುಹೋದ ಯಜಮಾನನಿಗೆ ಗೊಣಗುತ್ತಾ ಬಂದಳು. ಥೂ ಎಲ್ಲಾ ಹೆಣುಗಳೇ' ಎಂದಿದೆ. ಇದು ಎಲ್ಲಾ ಹೆಣ್ಣು ನಾಯಿಮರಿಗಳು ಎಂದಾಗಬೇಕಿತ್ತು.'
'ಬೆಂಗಳೂರಿನ ನಗರ ಪೊಲೀಸರು ಬಡಾವಣೆಗಳಲ್ಲಿ ತಿಂಗಳ ಪ್ರತಿ ಶನಿವಾರ ಸಾರ್ವಜನಿಕ ಸಭೆ ನಡೆಸುತ್ತಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಕಲಂ 24ರಲ್ಲಿ ಹಿರಿಯ ನಾಗರಿಕರ ಸಮಸೆಯೂ ಸೇರಿದಂತೆ ಆ ಭಾಗದ ಜನರ ಸಮಸ್ಯೆಗಳನ್ನು ತಿಳಿಸಬಹುದು ಎಂದಿದೆ. ಅಲ್ಲಿ ಹಿರಿಯ ನಾಗರಿಕರ ಸಮಸ್ಯೆಯೂ ಎಂದಾಗಬೇಕಿತ್ತು' ಎಂದಿದ್ದಾರೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

