ಸಂಪಾದಕೀಯ

ಬಾಡಿಗೆ ನಿಯಂತ್ರಣ ಏಕಿಲ್ಲ?

Published On :

ಈ ಹಿಂದೆ ಬಾಡಿಗೆ ನಿಯಂತ್ರಣ ಕಾಯಿದೆ ಜಾರಿಯಲ್ಲಿತ್ತು. ಈಗ ಕಾಯಿದೆ ಏಕೆ ಇಲ್ಲವೋ ಗೊತ್ತಿಲ್ಲ. ಈಗ ಮನೆಯ ಮಾಲಿಕರ ದೌರ್ಜನ್ಯ ಮುಗಿಲು ಮುಟ್ಟಿದೆ. ಬಾಡಿಗೆದಾರರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಮನೆಯಮಾಲೀಕರು, ಬಾಡಿಗೆದಾರರು ಆ ಮನೆಯಲ್ಲಿ ಕೇವಲ ಒಂದು ವರ್ಷ ಅಥವಾ ಅದಕ್ಕಿಂತಲೂ ಕಡಿಮೆ ಅವಧಿಗೆ ಇದ್ದರೂ ಮನೆ ಬಿಟ್ಟಾಗ ಸುಣ್ಣ ಬಣ್ಣದ ಹೆಸರಲ್ಲಿ, ಇದು ಹಾಳಾಗಿದೆ ಅದು ಹಾಳಾಗಿದೆ ಎಂದು ಹೇಳಿ   ಮನೆ ಬಿಡುವಾಗ ಮುಂಗಡ ಹಣವನ್ನು ಕೊಡದೆ ಸತಾಯಿಸುವುದು, ಒಂದು ತಿಂಗಳ ಬಾಡಿಗೆಯನ್ನು ಹಿಡಿದುಕೊಳ್ಳುವುದು ಮಾಡುತ್ತಾರೆ. 11 ತಿಂಗಳ ಒಪ್ಪಂದ ಆಗಿದ್ದರೂ ಬಾಡಿಗೆ ಜಾಸ್ತಿ ಮಾಡುತ್ತೇವೆಂದು ಗಲಾಟೆ ಮಾಡುತ್ತಾರೆ. ಈ ಹಿಂದೆ ಬಾಡಿಗೆ ನಿಯಂತ್ರಣ ಕಾಯಿದೆ ಜಾರಿಯಲ್ಲಿರುವಾಗ ಮನೆಯ ಮಾಲೀಕರು ಸ್ವಲ್ಪ ಮಟ್ಟಿಗೆ ಹೆದರುತ್ತಿದ್ದರು. ಈಗ ಆ ಕಾನೂನು ಏಕೆ ಜಾರಿಯಲ್ಲಿಲ್ಲ?
- ಕೆ.ಎಸ್. ಸತ್ಯನಾರಾಯಣ ವೈದ್ಯ, ಬೆಂಗಳೂರು
ನ್ಯಾಯಾಲಯ ಗಮನಿಸಲಿ
ಘನ ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶವನ್ನೇ ಧಿಕ್ಕರಿಸಿ ಪಾರ್ಕ್ಗಳಲ್ಲಿ, ಅಲ್ಲದೆ, ಸರ್ಕಾರಿ ಕಚೇರಿಗಳ ಆವರಣದಲ್ಲಿಯೂ ದೇವಸ್ಥಾನಗಳ ನಿರ್ಮಾಣ ಆಗುತ್ತಲೇ ಇದೆ. ಹೆಸರುಘಟ್ಟ ರಸ್ತೆಯ ಬಾಗಲಗುಂಟೆಯಲ್ಲಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲೇ ಗುಡಿಯ ನಿರ್ಮಾಣ ಆಗುತ್ತಿದೆ. ಕಚೇರಿ ಕೋಣೆಗಳಲ್ಲಿನ ಪೂಜೆಗಳ ಜತೆಗೆ ಪಕ್ಕದ ಉದ್ಯಾನ, ಎದುರಿನ ಹೆದ್ದಾರಿ ಪಕ್ಕದ ಅಕ್ರಮ ಗುಡಿಗಳು ಸಾಲದೆಂಬಂತೆ, ಈಗ ಕಚೇರಿ ಆವರಣದಲ್ಲಿಯೂ ಹೆಚ್ಚಿನ ಮಂದಿರಗಳ ನಿರ್ಮಾಣ! ಇದರ ಬಗ್ಗೆ ಸಾರ್ವಜನಿಕರು ಗುಸುಗುಸು ಮಾತಾಡಿಕೊಳ್ಳುತ್ತಿದ್ದರೂ ಅಧಿಕಾರಿಗಳೇ ಪ್ರೋತ್ಸಾಹ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಘನ ನ್ಯಾಯಾಲಯವೇ ಸೂಕ್ತ ಕ್ರಮ ಜರುಗಿಸಬಹುದೇ?
- ಸ್ಥಳೀಯ ನಾಗರಿಕರು, ಬೆಂಗಳೂರು
ಮುಖ್ಯಮಂತ್ರಿಗಳೇ ಉದ್ಯೋಗಭಾಗ್ಯ ಯಾವಾಗ?
ಕಾಂಗ್ರೆಸ್ ಸರ್ಕಾರ ನಿರುದ್ಯೋಗಿಗಳ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಇಂತಹ ಹಲವಾರು ಯೋಜನೆಗಳ ತಂದ ಅದು, ಉದ್ಯೋಗ ಭಾಗ್ಯ ಯಾವಾಗ ನೀಡುತ್ತದೋ ತಿಳಿಯುತ್ತಿಲ್ಲ. ರಾಜ್ಯದಲ್ಲಿ 1.81 ಲಕ್ಷ ಸರ್ಕಾರಿ ಹುದ್ದೆಗಳು ಹಲವಾರು ಇಲಾಖೆಗಳಲ್ಲಿ ಖಾಲಿ ಇದ್ದರೂ ಸಹ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ರಾಜ್ಯವು ಪ್ರಗತಿಯತ್ತ ಸಾಗುವುದು ಅಸಾಧ್ಯವಾದ ಮಾತು. ಕೇವಲ ಆಶ್ವಾಸನೆ ನೀಡದೆ ನೀತಿಸಂಹಿತೆ ಜಾರಿಗೆ ಬರುವುದರೊಳಗಾಗಿ ಹೊಸ ಹುದ್ದೆಗಳನ್ನು ತುಂಬಲು ಪ್ರಕಟಣೆ ಹೊರಡಿಸಬೇಕು. ಹೀಗೆ ನಿರ್ಲಕ್ಷ್ಯ ವಹಿಸುತ್ತಾ ಕುಳಿತರೆ ನಿರುದ್ಯೋಗಿಗಳಿಂದ ಬೃಹತ್ ಪ್ರತಿಭಟನೆಯನ್ನು ಎದುರಿಸಬೇಕಾಗುವುದು ಅನಿವಾರ್ಯ. ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿರುದ್ಯೋಗಿ ಯುವಕರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ.
- ಶ್ರೀಕಾಂತ ಹಿರೇಮಠ, ಮಂಜುನಾಥ ಪತ್ತಾರ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.