ಸಂಸತ್ತಿನ ಕೊನೆಯ ಅಧಿವೇಶನ
ಮುಂದಿನ ತಿಂಗಳ ಮಧ್ಯಭಾಗದಲ್ಲಿ ಈಗಿನ ಸಂಸತ್ತಿನ ಕಟ್ಟ ಕಡೆಯ ಅಧಿವೇಶನ ನಡೆಯಲಿದ್ದು, ಮುಂದಿನ ವರ್ಷದ ಬಜೆಟ್ನ ಲೇಖಾನುದಾನಕ್ಕೆ ಅಂಗೀಕಾರದ ಮುದ್ರೆ ಬೀಳಬೇಕಾಗಿದೆ. ಪೂರ್ಣ ಪ್ರಮಾಣದ ಬಜೆಟ್ ಮಂಡನೆಯ ಜವಾಬ್ದಾರಿ ಮುಂದಿನ ಸರ್ಕಾರದ ಹೊಣೆ. ಫೆಬ್ರವರಿ ಹದಿನೇಳರಂದು ನಡೆಯುವ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ರಾಹುಲ ಗಾಂಧಿ ಅವರನ್ನು ಪಕ್ಷದ ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಬಿಂಬಿಸಬೇಕೆನ್ನುವುದು ಪಕ್ಷದ ಪ್ರಮುಖರ ಅನಿಸಿಕೆ. ಈಗಾಗಲೇ ರಾಹುಲ ಗಾಂಧಿ ಆ ಪಾತ್ರವನ್ನು ನಿರ್ವಹಿಸುವ ಪ್ರಯತ್ನ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಪಕ್ಷದ ಪದಾಧಿಕಾರಿಗಳು ಈಗಲೇ ತಮ್ಮ ರಾಜಕೀಯ ಅಧಿಕಾರವನ್ನು ಬಿಟ್ಟುಕೊಟ್ಟು ಚುನಾವಣೆಯತ್ತ ಗಮನ ಹರಿಸಬೇಕೆನ್ನುವ ಆದೇಶ ಎಲ್ಲಾ ಕಾಂಗ್ರೆಸ್ ಸಮಿತಿಗಳಿಗೂ ರವಾನೆಯಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆಸೆ ಇರುವ ಅನೇಕರಿಗೆ ತಮ್ಮ ಗೆಲವಿನಲ್ಲಿ ಪೂರ್ಣ ವಿಶ್ವಾಸ ಇದ್ದಂತಿಲ್ಲ. ಅದಕ್ಕೇ ಅವರು ಇನ್ನೂ ಒಂದು ವಾರದ ಅವಕಾಶವನ್ನು ಕೇಳಿದ್ದಾರೆ. ಅದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ವಿಚಾರ.
ಸಂಸತ್ತಿನ ಅಧಿವೇಶನದಲ್ಲಿ ಲೋಕಪಾಲ ವ್ಯವಸ್ಥೆಗೆ ಪೂರಕವಾಗುವಂತೆ ಕೆಲವು ವಿಧೇಯಕಗಳನ್ನು ಅಂಗೀಕರಿಸುವುದೂ ಸರ್ಕಾರದ ಉದ್ದೇಶ. ಆದರೆ ಅದು ಈಡೇರತ್ತೋ ಇಲ್ಲವೋ ಗೊತ್ತಿಲ್ಲ. ತೆಲಂಗಾಣ ರಾಜ್ಯ ರಚನೆಗೆ ಆಂಧ್ರಪ್ರದೇಶವನ್ನು ವಿಭಜಿಸುವ ಸಂವಿಧಾನದ ಬದಲಾವಣೆಗೂ ಮುಂದಿನ ಅಧಿವೇಶನವೇ ಕಟ್ಟ ಕಡೆಯ ಅವಕಾಶ. ಆಂಧ್ರಪ್ರದೇಶದ ವಿಧಾನ ಮಂಡಲದ ಒಪ್ಪಿಗೆ ಇಲ್ಲದಿದ್ದರೂ, ಸಂವಿಧಾನದ ಮಾರ್ಪಾಟಿನ ವಿಧೇಯಕವನ್ನು ಸಂಸತ್ತು ಅಂಗೀಕರಿಸಬಹುದು. ಆದರೆ ಆಂಧ್ರಪ್ರದೇಶದ ಇಂದಿನ ರಾಜಕೀಯ ಸ್ಥಿತಿಯಲ್ಲಿ ಇದು ಸಾಧ್ಯವೇ? ಸಾಧುವೇ? ಅಂತಿಮ ತೀರ್ಮಾನ ಸಾರ್ವಭೌಮಾಧಿಕಾರ ಹೊಂದಿರುವ ಸಂಸತ್ತಿನದ್ದೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

