ನರೇಂದ್ರಮೋದಿ...ಜಯಂತಿ ನಟರಾಜನ್
ಭಾರತೀಯ ಜನತಾ ಪಾರ್ಟಿಯ ಪ್ರಧಾನಿ ಪೀಠದ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿಯೂ ಆಗಿರುವ ನರೇಂದ್ರ ಮೋದಿ ಅವರಿಗೆ ತಮ್ಮ ರಾಜ್ಯದಲ್ಲಿ ಹಲವಾರು ಉದ್ಯಮಗಳಿಗೆ ಪರಿಸರ ರಕ್ಷಣೆ ಇಲಾಖೆಯ ಅನುಮತಿ ಸಿಗದೇ, ಆ ಉದ್ಯಮಗಳ ಸ್ಥಾಪನೆಯಾಗದೇ ಇರುವ ವಿಚಾರದಲ್ಲಿ ಎಲ್ಲಾ ವಿವರಗಳೂ ಚೆನ್ನಾಗಿಯೇ ಗೊತ್ತಿರಬೇಕು. ಆ ಜ್ಞಾನವನ್ನು ಬಳಸಿಕೊಂಡೇ ಅವರು ಕಾಂಗ್ರೆಸ್ಸಿನ ಭ್ರಷ್ಟಾಚಾರದ ಪ್ರಕರಣಗಳನ್ನು ಆಗೀಗ ಪ್ರಕಟಿಸಿದ್ದುಂಟು. ಜಯಂತಿ ನಟರಾಜನ್ ಪರಿಸರ ರಕ್ಷಣಾ ಇಲಾಖೆಯ ಮಂತ್ರಿಯಾಗಿದ್ದ ಸಮಯದಲ್ಲಿ ಹಲವಾರು ಉದ್ಯಮಗಳಿಗೆ ಅನುಮತಿ ಸಿಗುವುದರಲ್ಲಿ ವಿಳಂಬವಾಗಿ, ಪ್ರಗತಿಯಲ್ಲಿ ಹಿನ್ನಡೆ ಕಂಡುಬಂದಿತ್ತು ಎನ್ನುವ ದೂರು ಉದ್ಯಮವಲಯದಲ್ಲೂ ಪ್ರಕಟವಾಗಿತ್ತು. ಆ ವಿಚಾರದಲ್ಲಿ ವಾದ-ವಿವಾದಕ್ಕೆ ಅವಕಾಶವಿತ್ತು.
ಆದರೆ, ಈಗ ನರೇಂದ್ರ ಮೋದಿ ನೇರವಾಗಿ ಮಾಜಿ ಕೇಂದ್ರಮಂತ್ರಿ "ಜಯಂತಿ ನಟರಾಜನ್ ಶುಲ್ಕ" ಪಾವತಿಯಾಗದೇ ಯೋಜನೆಗಳಿಗೆ ಇಲಾಖೆಯ ಅನುಮತಿ ಉದ್ಯಮಗಳಿಗೆ ಸಿಗುತ್ತಿರಲಿಲ್ಲವೆಂದು ಗುರುತರವಾದ ಆರೋಪವನ್ನೇ ಹೊರಿಸಿದ್ದಾರೆ. ಅವರು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡುವುದಕ್ಕೆ ಜಯಂತಿ ಶುಲ್ಕವೇ ಕಾರಣ ಎನ್ನುವುದು ಆರೋಪ.
ಅದನ್ನು ಜಯಂತಿ ನಟರಾಜನ್ ಉಗ್ರವಾಗಿ ಖಂಡಿಸಿದ್ದಾರೆ. ಹಲವು ಉದ್ಯಮಗಳಲ್ಲಿ ನರೇಂದ್ರ ಮೋದಿ ಅವರಿಗೇ ನೇರವಾದ ಆಸಕ್ತಿ ಇದ್ದಂತಿತ್ತು ಎನ್ನುವ ಆರೋಪವೂ ಕೇಳಿ ಬಂದಿದೆ. ಈಗ ಜಯಂತಿ ನಟರಾಜನ್, ಮೋದಿ ಅವರನ್ನು ಟೀಕಿಸಿದ್ದಕ್ಕೆ ಅವರು ತಮ್ಮ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎಂದಿದ್ದಾರೆ. ಇದು ಆರೋಪ-ನಿರಾಕರಣೆಯ ಹಂತದಲ್ಲೇ ಮುಕ್ತಾಯವಾಗಬಾರದು. ಚುನಾವಣೆ ಕಾಲದಲ್ಲಿನ ಏಟಿಗೆ-ಪ್ರತಿ ಏಟು ಎಂದು ಸುಮ್ಮನಾಗಬಾರದು. ಕೇಂದ್ರ ಸರ್ಕಾರ ಯಾವುದಾದರೊಂದು ರೀತಿಯ ತನಿಖೆಯನ್ನು ನಡೆಸಲೇಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

