ರಾಹುಲಗಾಂಧಿ: ಕೆಲಸ ಆರಂಭ
ಕಾಂಗ್ರೆಸ್ ಸಂಘಟನೆಯ ಜವಾಬ್ದಾರಿಯನ್ನು ನೇರವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಪಕ್ಷದ ಉಪಾಧ್ಯಕ್ಷ ರಾಹುಲಗಾಂಧಿ ವೃಥಾ ಕಾಲಹರಣ ಮಾಡದೇ, ಟೀಕೆಗಳಿಗೆ ಹೆದರದೇ ಕ್ಷಿಪ್ರ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದಾರೆ. ಕಾಂಗ್ರೆಸ್ಸಿನ ಸ್ವರೂಪದ ಬದಲಾವಣೆಯ ಕೆಲಸ ಆರಂಭವಾಗಿದೆ ಎಂದು ಭಾವಿಸಬಹುದು.
ಕೇರಳದಲ್ಲಿ ಕಳೆದ ವಾರ ಯುವ ಕಾಂಗ್ರೆಸ್ ಮೋರ್ಚಾದಲ್ಲಿ ಪಾಲುಗೊಂಡಿದ್ದ ಅವರು ಯುವಕರಿಗೆ ಸಂಘಟನೆಯಲ್ಲಿ ಹೆಚ್ಚು ಜವಾಬ್ದಾರಿಯನ್ನು ವಹಿಸುವ ಭರವಸೆ ನೀಡಿದ್ದರು. ದೆಹಲಿಗೆ ಹಿಂತಿರುಗಿದ ಕೂಡಲೇ ರಾಹುಲಗಾಂಧೀ ರಾಜಾಸ್ಥಾನಕ್ಕೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಮೂವತ್ತಾರು ವರ್ಷದ ಸಚಿನ್ ಪೈಲಟ್ ಅವರನ್ನು ನೇಮಿಸಿದ್ದಾರೆ. ಅದೇ ಸಮಯದಲ್ಲೇ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಮೂವತ್ತೊಂಬತ್ತು ವರ್ಷದ ಲೋಕಸಭೆ ಸದಸ್ಯ ಅರುಣ್ ಯಾದವ್ ಅವರ ನೇಮಕವೂ ಪ್ರಕಟವಾಗಿದೆ. ನಿಜ. ಸಚಿನ್ ಫೈಲಟ್, ಅಪಘಾತದಲ್ಲಿ ನಿಧನರಾದ ಗುಜ್ಜರ್ ನಾಯಕ ರಾಜೇಶ ಫೈಲಟ್ ಅವರ ಪುತ್ರ. ಅದೇ ರೀತಿಯಲ್ಲೇ ಅರುಣ್ ಯಾದವ್, ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಉಪಮುಖ್ಯಮಂತ್ರಿ ಸುಭಾಷ್ಯಾದವ್ ಅವರ ಪುತ್ರ. ಪ್ರತಿಷ್ಠಿತ ಕುಟುಂಬಗಳಿಗೇ ಪದವಿ ಸಿಕ್ಕಿದೆ.
ಇಡೀ ಮಧ್ಯಪ್ರದೇಶದಲ್ಲಿ ಭಾರತೀಯ ಜನತಾಪಾರ್ಟಿಯ ಧ್ವಜ ಎಲ್ಲ ಕಡೆ ಹಾರಾಡುತ್ತಿರುವಾಗ ಅರುಣ್ ಯಾದವ್ ಭದ್ರವಾಗಿಯೇ ನಿಂತಿರುವಂತಿದೆ. ರಾಹುಲ ಗಾಂಧಿಯವರು ಆರಿಸಿರುವ ಇಬ್ಬರೂ ಯುವಕರು ಇತರೆ ಹಿಂದುಳಿದ ಜಾತಿಗಳಿಗೆ ಸೇರಿದ ಸುಶಿಕ್ಷಿತ ಕಾರ್ಯಕರ್ತರು. ಆಡಿದ ಮಾತನ್ನು ರಾಹುಲ್ ಉಳಿಸಿಕೊಂಡಿದ್ದು ಅವರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

