ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ತಾಳಿಕೋಟೆ ಎಸ್.ಕೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಿಂದ ವಿರೇಶ ಶ. ಸಿಂದಗಿ ಅವರು ಬರೆಯುತ್ತಾರೆ- 'ಡಿ.27ರಂದು ಪತ್ರಿಕೆಯಲ್ಲಾದ ಕೆಲವು ಮುದ್ರಣ ದೋಷಗಳು ಇಂತಿವೆ...'
'ಪುಟ 3ರಲ್ಲಿ 'ರೈತರ ಪ್ರತಿಭಟನೆ ಬೆಂಬಲಿಸುವೆ: ಎಚ್ಡಿಕೆ' ಎಂಬ ವರದಿಯ ಪ್ರಾರಂಭದಲ್ಲಿ 'ಟನ್ ಕಬ್ಬಿಗೆ 2500 ನೀಡದ 'ಸಕ್ಕರೆ' ವಿರುದ್ಧ ಕ್ರಮಕೈಗೊಳ್ಳುವಂತೆ...' ಎಂಬಲ್ಲಿ ಸಕ್ಕರೆ ವಿರುದ್ಧ ಹೇಗೆ ಕ್ರಮ ಕೈಗೊಳ್ಳುತ್ತಾರೆ? ಅದು 'ಸಕ್ಕರೆ ಕಾರ್ಖಾನೆ' ವಿರುದ್ಧ ಎಂದಾಗಬೇಕಿತ್ತಲ್ಲವೇ?'
'ಡಿ.24ರಂದು 'ಕಿರುನಗೆ'ಯಲ್ಲಿ ಪ್ರಕಟವಾದ ಜೋಕ್ಸ್ ಪುನಃ ಡಿ.27ರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪುಟ 10ರ 'ಆಪ್ ಆಕೌಂಟ್ ಬುಕ್ ಪರಿಶೀಲನೆ' ಎಂಬ ವರದಿಯ 'ನನ್ನಲ್ಲಿ ಮಂತ್ರದಂಡವಿಲ್ಲ, ಆದ್ರೆ ಯಾವುದೂ ಅಸಾಧ್ಯವಲ್ಲ' ಎಂಬ ಉಪಶೀರ್ಷಿಕೆಯಲ್ಲಿ 'ಪ್ರಾಮಾಣಿಕ ವ್ಯಕ್ತಿಗಳು' ಎಂಬುದು 'ಪ್ರಾಮಾಜಿಕ ವ್ಯಕ್ತಿಗಳು' ಎಂದು ತಪ್ಪಾಗಿ ಮುದ್ರಣಗೊಂಡಿದೆ.'
'ಪುಟ 11ರ ಕ್ರೀಡಾ ಪುಟದ 'ಏಷ್ಯಾಕಪ್: ಬಾಂಗ್ಲಾ ಆತಿಥ್ಯ ಕುರಿತು ಶೀಘ್ರದಲ್ಲೇ ತೀರ್ಮಾನ' ಎಂಬ ವರದಿಯ ಪ್ರಾರಂಭದಲ್ಲಿ ಮೊದಲನೇ ಪ್ಯಾರಾವನ್ನು ಸಂಪೂರ್ಣವಾಗಿ ಅದೇ ರೀತಿ ಕೊನೆಯಲ್ಲಿ ಮತ್ತೊಮ್ಮೆ ಪ್ರಕಟಿಸಿದ್ದೀರಿ. ಹೀಗೆ ಮೊದಲನೇ ಪ್ಯಾರಾದಲ್ಲಿ ಪ್ರಕಟಿಸಿದ ವಿಷಯವನ್ನು ಕೊನೆಯ ಪ್ಯಾರಾದಲ್ಲಿ ಮತ್ತೊಮ್ಮೆ ಅವಶ್ಯಕತೆಯಾದರೂ ಏನಿತ್ತು?'
'ಪುಟ 12ರಲ್ಲಿ 'ಅಶ್ವಿನ್‌ಗೆ ಪಾಲಿ ಉಮ್ರಿಗಾರ್ ಪ್ರಶಸ್ತಿ' ಎಂಬ ವರದಿಯ 5ನೇ ಪ್ಯಾರಾದ ಪ್ರಾರಂಭದಲ್ಲಿ '2012-13ರ ರಣಜಿ ಟ್ರೋಫಿಯಲ್ಲಿ ಶ್ರೇಷ್ಠ ಆಲ್ರೌಂಡ್ ಪ್ರದರ್ಶನ ನೀಡಿದ ಮುಂಬೈ ತಂಡದ 'ಭಿಷೇಕ್ ನಾಯರ್‌' ಅವರು ಲಾರಾ ಅಮರನಾಥ ಪ್ರಶಸ್ತಿ ಪಡೆಯಲಿದ್ದಾರೆ' ಎಂದಿದೆ. ಇಲ್ಲಿ 'ಭಿಷೇಕ್ ನಾಯರ್‌' ಎಂಬುದು 'ಅಭಿಷೇಕ್ ನಾಯರ್‌' ಎಂದಾಗಬೇಕಿತ್ತು' ಎಂದಿದ್ದಾರೆ.
ಸುದ್ದಿಯ ಮೊದಲ ಪ್ಯಾರಾದಲ್ಲಿ ಪ್ರಕಟಿಸಿದ್ದನ್ನು ಕೊನೆಯ ಪ್ಯಾರಾದಲ್ಲಿ ಪ್ರಕಟಿಸುವ ಯಾವ ಅಗತ್ಯವೂ ಇಲ್ಲ. ಇದು ಹೇಗೋ ಕೊನೆಯಲ್ಲಿ ಸೇರಿಕೊಂಡಿದೆ. ಸಾಮಾನ್ಯವಾಗಿ ಪುಟ ಮಾಡಿಸುವಾಗ ಮತ್ತು ತಪ್ಪುಗಳಿವೆಯೇ ಎಂದು ಪರಿಶೀಲಿಸುವಾಗ ಬಹುತೇಕ ಮಂದಿ ಸುದ್ದಿಯ ಆರಂಭದತ್ತ ಹೆಚ್ಚು ಗಮನಹರಿಸುತ್ತಾರೆ. ಸುದ್ದಿಯ ಕೊನೆ ತಲುಪುವ ಹೊತ್ತಿಗೆ ಗಮನ ಬೇರೆ ಸುದ್ದಿಯತ್ತ ಹರಿದಿರುತ್ತದೆ. ಇದರಿಂದಾಗಿ ಬಹುತೇಕ ಸುದ್ದಿಗಳ ಕೊನೆಯಲ್ಲೇ ಹೆಚ್ಚು ತಪ್ಪುಗಳಾಗುತ್ತವೆ.
ಇನ್ನು ಅಭಿಷೇಕ್ ನಾಯರ್ ಆಗಬೇಕಿತ್ತು ಎಂಬ ವೀರೇಶ್ ಅವರ ಮಾತನ್ನು ಒಪ್ಪಬಹುದು. ಆದರೆ ವೀರೇಶ್ ಅವರು 'ಲಾರಾ ಅಮರನಾಥ್ ಪ್ರಶಸ್ತಿ ಪಡೆಯಲಿದ್ದಾರೆ' ಎಂದು ಬರೆದಿದ್ದಾರೆ. ಅದು 'ಲಾಲಾ ಅಮರನಾಥ್ ಪ್ರಶಸ್ತಿ ಪಡೆಯಲಿದ್ದಾರೆ' ಎಂದು ಆಗಬೇಕಿತ್ತು.



 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.