ಸಂಪಾದಕೀಯ

ತೆಲಂಗಾಣದ ರಚನೆ ವಿಚಾರ

Published On :

ಆಂಧ್ರಪ್ರದೇಶವನ್ನು ವಿಭಜಿಸಿ, ಹೈದರಾಬಾದ್ ನಗರವನ್ನು ಒಳಗೊಂಡ ತೆಲಂಗಾಣ ರಾಜ್ಯ ನಿರ್ಮಾಣದ ವ್ಯವಸ್ಥೆಗೆ ಆಂಧ್ರಪ್ರದೇಶ ವಿಧಾನ ಸಭೆಯಲ್ಲಿ ಬೆಂಬಲ ಸಿಗದೇ ಹೋಗಬಹುದು. ಆದರೂ ವಿಧಾನ ಸಭೆಯಲ್ಲಿ, ಕೇಂದ್ರ ಸಚಿವ ಸಂಪುಟದ ನಿರ್ಧಾರ ಕುರಿತ ಚರ್ಚೆಯ ಅನಂತರ ರೂಪುಗೊಳ್ಳುವ ಪ್ರತಿಕ್ರಿಯೆಯನ್ನು ಸಂಸತ್ತು ಪರಿಗಣಿಸಿದ ಅನಂತರವೇ ನೂತನ ರಾಜ್ಯದ ನಿರ್ಮಾಣ ಸಾಧ್ಯ.
ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಂಧ್ರ ಪ್ರದೇಶ ವಿಧಾನಸಭೆ ಸ್ಪೀಕರ್ಗೆ ಕಳಿಸಿಕೊಟ್ಟು ಸದನದ ಅಭಿಪ್ರಾಯ ಹಾಗೂ ಪ್ರತಿಕ್ರಿಯೆಯನ್ನು ಕಳಿಸಿಕೊಡಲು ನಿಗದಿಪಡಿಸಿದ್ದ ಅವಧಿ ಮುಗಿಯುತ್ತಿದೆ.
ಆದರೂ, ವಿಧಾನಸಭೆ ಈ ವಿಷಯವನ್ನು ಇನ್ನೂ ಪರಿಶೀಲಿಸಿಲ್ಲ. ಸೀಮಾಂಧ್ರ ಪ್ರದೇಶದ ಶಾಸಕರೆಲ್ಲರೂ ಹೆಚ್ಚು ಕಡಿಮೆ ವಿಭಜನೆಯ ಪ್ರಸ್ತಾಪವನ್ನು ವಿರೋಧಿಸುವವರೇ. ಕಾಂಗ್ರೆಸ್ ಮುಖ್ಯಮಂತ್ರಿ ಕಿರಣ್ ಕುಮಾರ ರೆಡ್ಡಿ ಅವರೇ ವಿಭಜನೆಯ ವಿರೋಧಿಯಾಗಿದ್ದಾರೆ. ಆದ್ದರಿಂದ ವಿಧಾನಸಭೆಯಲ್ಲಿ ವಿಳಂಬ ರಾಕ್ಷಸನ ಹಾವಳಿಗೆ ಅವಕಾಶವಾಗಿದೆ. ಮುಖ್ಯಮಂತ್ರಿಯ ಮನವಿಯ ಮೇರೆಗೆ ರಾಷ್ಟ್ರಪತಿ ನೀಡಿರುವ ಗಡವನ್ನು ಒಂದು ವಾರ ಕಾಲ ವಿಸ್ತರಿಸಲಾಗಿದೆ. ಆಗಲೂ ಆಂಧ್ರ ಪ್ರದೇಶ ವಿಧಾನಸಭೆ, ಪ್ರಸ್ತಾಪವನ್ನು ಪರಿಶೀಲಿಸದೇ ಹೋದರೂ, ಸಂಸತ್ತೇ ಸ್ವಯಂ ಪ್ರೇರಣೆಯಿಂದ ರಾಷ್ಟ್ರಪತಿಯ ಒಪ್ಪಿಗೆಯನ್ನು ಪಡೆದು ಮುಂದಿನ ಸಂವಿಧಾನ ಕ್ರಮವನ್ನು ಕೈಗೊಳ್ಳಬಹುದು. ಆಂಧ್ರಪ್ರದೇಶದ ಶಾಸಕರು, ವಿಧಾನಸಭೆಯಲ್ಲೇ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿ (ಅದು ಏನಾದರೂ ಆಗಿರಲಿ) ಸಂವಿಧಾನವನ್ನು ಎತ್ತಿ ಹಿಡಿದರೆ ಒಳ್ಳೆಯದು. ಅದು ಸಾಧ್ಯವಾಗದಿದ್ದರೆ, ಅನಿವಾರ್ಯವಾಗಿ ಸಂಸತ್ತು ತನ್ನ ಕರ್ತವ್ಯವನ್ನು ನಿರ್ವಹಿಸಲೇ ಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.