ಸಂಪಾದಕೀಯ

ದ್ರಾವಿಡ ಮುನ್ನೇಟ್ರ ಕಳಗಂ

Published On :

ತಮಿಳುನಾಡಿನ ದ್ರಾವಿಡ ಮುನ್ನೇಟ್ರ ಕಳಗಂನ ಭೀಕರ ಯಾದವೀ ಕದನ, ಕೇವಲ ಆ ರಾಜ್ಯದ ರಾಜಕೀಯದ ಮೇಲಷ್ಟೇ ಅಲ್ಲ, ದೇಶದ ರಾಜಕೀಯದ ಮೇಲೂ ತನ್ನ ಪರಿಣಾಮವನ್ನು ಬೀರುವುದರಲ್ಲಿ ಅನುಮಾನವೇ ಇಲ್ಲ.
  ಹಲವು ವರ್ಷಗಳಿಂದಲೂ, ಡಿಎಂಕೆಯ "ಮಹಾನಾಯಕ" ಮುತ್ತುವೇಲು ಕರುಣಾನಿಧಿ ಅವರ ಇಬ್ಬರು ಮಕ್ಕಳು-ಹಿರಿಯಮಗ ಎಂ.ಕೆ. ಅಳಗಿರಿ, ಕಿರಿಯಮಗ ಎಂ.ಕೆ. ಸ್ಟಾಲಿನ್ ನಡುವಣ ವೈಯಕ್ತಿಕ ಜಗಳ ಪಕ್ಷವನ್ನೇ ಚೆನ್ನೈ-ಮಧುರೆಗಳ ಕೇಂದ್ರಗಳ ನಡುವೆ ಪಕ್ಷವನ್ನೇ ಹೋಳು ಮಾಡಿರುವುದು ನಿಜ.
  ಇದುವರೆಗೂ ಅದನ್ನು ಕರುಣಾನಿಧಿ ಅವರು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಕರುಣಾನಿಧಿ ಅವರ ಆದೇಶದ ಮೇರೆಗೆ ಪಕ್ಷದ ಹಿರಿಯ ಅನ್ಬಳಗನ್, ಎಂ.ಕೆ. ಅಳಗಿರಿ ಅವರನ್ನು ಪಕ್ಷದ ಸದಸ್ಯತ್ವದಿಂದಲೇ ತೆಗೆದು ಹಾಕಿರುವ ಘೋಷಣೆ ಮಾಡಿದ ಅನಂತರ ಪಕ್ಷ  ಹೋಳಾದಂತೆಯೇ. ಅಳಗಿರಿ ಅವರ ರಾಜಕೀಯ ಮಧುರೆ ಹಾಗೂ ದಕ್ಷಿಣ ತಮಿಳುನಾಡಿಗೇ ಸೀಮಿತವಾಗಿತ್ತು. ಸ್ಟಾಲಿನ್ ಅವರನ್ನು ಕರುಣಾನಿಧಿ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಗುರ್ತಿಸಿದ್ದೂ ಆಗಿದೆ.
  ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಕೆಲವು ತಮಿಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ, ಕರುಣಾನಿಧಿ ಅವರು ಯಾವ ರಾಜಕೀಯ ಕೂಟವನ್ನು ಸೇರಿಕೊಂಡರೂ, ಅಳಗಿರಿ, ಅದರ ವಿರೋಧಿ ಕೂಟದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಈ ಬೆಳವಣಿಗೆಯಿಂದ ದಕ್ಷಿಣ ತಮಿಳುನಾಡಿನಲ್ಲಿ, ಲೋಕಸಭೆಯ ಚುನಾವಣೆಗೆ ಹೊಸ ಆಯಾಮವೇ ಸಿಗಬಹುದು. ಅದರ ಪರಿಣಾಮವಾಗಿ, ರಾಷ್ಟ್ರೀಯ ರಾಜಕೀಯದಲ್ಲಿ ಡಿಎಂಕೆಯ ಪ್ರಭಾವ ಕುಗ್ಗುವುದಂತೂ ಖಚಿತ. ಒಕ್ಕೂಟ ರಾಜಕೀಯದ ಸ್ವರೂಪವೂ ಬದಲಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.