ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಪತ್ರಿಕೆಯ 'ಲೆಕ್ಕರಾಜರಾಣಿ' ಅಂಕಣದಲ್ಲಿ ಮತ್ತೆ ಮತ್ತೆ ಏರುಪೇರಾಗುತ್ತಿದೆ. ಡಿ.18ರಂದು 'ಚಿತ್ರಮೂಲ'ದ ಬಗೆಗೆ ಮಾಹಿತಿಯನ್ನು ಸಚಿತ್ರವಾಗಿ ನೀಡಿದ್ದರೂ ಶೀರ್ಷಿಕೆ ಮಾತ್ರ 'ಅಳಲೆಕಾಯಿ' ಎಂದೇ ಇದೆ. ನಗುವುದೋ? ಅಳುವುದೋ?'
"ಜೇಷ್ಠಮಧು' ಎಂದು ರೂಢಿಯಲ್ಲಿ ಹೇಳುತ್ತಿದ್ದರೂ ಅದರ ಹೆಸರು 'ಜ್ಯೋಷ್ಠಮಧು' ಎಂಬುದೇ ಸರಿ. ಕುವೆಂಪು ಜನಿಸಿದ ಊರಿನ ಹೆಸರು ಹಿರೇಕೊಡಿಗೆಯೋ? ಅಥವಾ ಹಿರೇಕೂಡಿಗೆಯೋ? ಅನಾಥಭವನ ಲೇಖನದಲ್ಲಿ ಎರಡೂರೀತಿಯಲ್ಲಿ ಲೇಖಿಸಿರುವಂತೆ ಕಾಣುತ್ತಿದೆ. ಹಿರೇಕೂಡಿಗೆ ಎಂದು ನಾನು ಓದಿದ ನೆನಪು.'
'ದೇ.ಜವರೇಗೌಡರ ಹೆಸರನ್ನು ಡಾ.ಡಿ. ಜವರೇಗೌಡ ಎಂದು ಬರೆಯುವುದೂ ಸರಿಯಲ್ಲವೆನ್ನಿಸಿತು. 1ಕೋಟಿ ರು.ನಲ್ಲಿ ಎಂಬ ಬಳಕೆಯೂ ಸಹ್ಯವಲ್ಲ. ಒಂದು ಕೋಟಿ ರುಗಳಲ್ಲಿ ಎಂದು ಬಳಸುವುದೇ ಹಿತ. ಕಾರಣ ಎರಡು. 'ನಲ್ಲಿ' ಎಂದಾಗ 'ನಳ' (ಖಿಛಠ) ಎಂಬ ಪದ ನೆನಪಾಗುತ್ತದೆ. ಮಾತ್ರವಲ್ಲ 1 ಕೋಟಿ ರುಪಾಯಿಗಳು ಎಂಬುದೇ ವ್ಯಾಕರಣ ದೃಷ್ಟಿಯಿಂದಲೂ ಸರಿ. ರುಪಾಯಿಅ ರುಪಾಯಿಯ ಎಂದಾಗುತ್ತಯೇ ವಿನಾ, ರುಪಾಯಿನ ಎಂದಾಗುವುದಿಲ್ಲ. ರುಪಾಯಿಅಲ್ಲಿ = ರುಪಾಯಿಯಲ್ಲಿ ಎಂದಾಗಬೇಕೇ ವಿನಾ ರುಪಾಯಿನಲ್ಲಿ ಎಂಬುದು ವ್ಯಾಕರಣ ದೃಷ್ಟಿಯಿಂದ ಸಾಧುವಲ್ಲ.'
'ಕುವೆಂಪು ಎಂಬುದು ಪದನಾಮವಾದರೆ (ಪದವಲ್ಲ ಸಂಕ್ಷಿಪ್ತನಾಮ/ಕಾವ್ಯನಾಮ) ಕುವೆಂಪುಗೆ ಕುವೆಂಪುವಿಗೆ ಎಂದಾಗಬೇಕೇ ಹೊರತು 'ಕುವೆಂಪುಗೆ' ಎಂಬ ಬಳಕೆ ತಪ್ಪು. ಮಹಾಕವಿ ಕುವೆಂಪು ಅವರನ್ನು ಗೌರವಪೂರ್ವಕವಾಗಿ ಕುವೆಂಪುಅವರುಗೆ ಕುವೆಂಪುರವರಿಗೆ ಎಂದು ಬಳಸುವುದು ಸುಸಂಸ್ಕೃತವಲ್ಲವೇ?' ಎಂದಿದ್ದಾರೆ.
ಭದ್ರಾವತಿಯ ಅರಬಿಳಚಿಕ್ಯಾಂಪ್ನಿಂದ ಓಂಚನ್ನಪ್ಪಸ್ವಾಮಿ ಅವರು ಬರೆಯುತ್ತಾರೆ- 'ಡಿ.12ರಂದು 'ಬೈಟು ಕಾಫಿ'ಯಲ್ಲಿ 'ಮಾಹಿತಿ.ಕಾಂ'ನಲ್ಲಿ ಶೀರ್ಷಿಕೆ 'ಕಲ್ಲಂಗಡಿ ಹಣ್ಣು' ಆದರೆ ಮಾಹಿತಿ ಮತ್ತು ಚಿತ್ರ ಹಲಸಿನದು. ಈ ತರಹ ಶೀರ್ಷಿಕೆ ಮತ್ತು ಚಿತ್ರಮಾಹಿತಿಗಳ ಅದಲು-ಬದಲು 'ಮಾಹಿತಿ.ಕಾಂ'ನಲ್ಲಿ ಸಹಜವಾಗಿಬಿಟ್ಟಿದೆ.'
'ಇದಕ್ಕೆ ಕಾರಣ ಪತ್ರಿಕೆ ಮುದ್ರಣಕ್ಕೆ ಕಳುಹಿಸುವ ಅವಸರವೋ? ನಿರ್ಲಕ್ಷ್ಯವೋ ಒಂದೂ ತಿಳಿಯುತ್ತಿಲ್ಲ. ದಯವಿಟ್ಟು ಸರಿಪಡಿಸಿಕೊಳ್ಳಿ' ಎಂದಿದ್ದಾರೆ.
ಸಾಕಷ್ಟು ಸಂದರ್ಭದಲ್ಲಿ ಇಂತಹ ತಪ್ಪುಗಳಾಗುವುದು ಕಂಪ್ಯೂಟರ್ನಲ್ಲಿ ಹಿಂದಿನ ದಿನದ ಪುಟ ತೆರೆದು, ಹೊಸ ಪುಟ ನಿರ್ಮಿಸುವಾಗ. ಹಾಗೆ ಮಾಡುವ ಮೊದಲು ಪುಟದಲ್ಲಿರುವ ಎಲ್ಲ ಮಾಹಿತಿಗಳನ್ನೂ ಅಳಿಸಲಾಗುತ್ತದೆ. ಆದರೆ ಕಾಯಂ ಅಂಕಣಗಳನ್ನು ಹಾಗೇ ಉಳಿಸಿಕೊಂಡಾಗ ಇಂತಹ ತಪ್ಪುಗಳಾಗುತ್ತವೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

