ಶೌಚಾಲಯ ಕ್ರಾಂತಿ ಬೇಕು
ಹಿಂದುಳಿದ ಹೈದರಾಬಾದ್ ಕರ್ನಾಟಕದ ಪ್ರದೇಶದಲ್ಲೂ ಹಿಂದುಳಿದ ಪ್ರದೇಶ ಎನಿಸಿಕೊಂಡ ಕೊಪ್ಪಳ ಜಿಲ್ಲೆಯಲ್ಲಿ, ಜಿಲ್ಲಾ ಪಂಚಾಯಿತಿಯ ಸ್ವಯಂ ಪ್ರಯತ್ನದಿಂದ ಆರಂಭವಾಗಿರುವ ಶೌಚಾಲಯ ಕ್ರಾಂತಿ ಯಶಸ್ವಿಯಾಗಲೇಬೇಕು.
ಮಹಾತ್ಮಾಗಾಂಧಿ ಹುತಾತ್ಮರಾದ ದಿನ, ಅಲ್ಲಿನ ಜನ, ಸರ್ವೋದಯ ದಿನಾಚರಣೆಯ ಅಂಗವಾಗಿ ಇಂತಹ ಪ್ರತಿಜ್ಞೆಯನ್ನು ಮಾಡಲೇಬೇಕು.
ನಿಜ. ಬಟಾ ಬಯಲಿನಲ್ಲಿ ಬಹಿರ್ದೆಸೆಗೆ ಕೂಡುವುದು ಯಾರಿಗೂ "ಬೇಕು" ಎನಿಸುವ ವಿಚಾರವಲ್ಲ. ಆದರೆ ಲಕ್ಷ ಲಕ್ಷ ಜನರ ಪಾಲಿಗೆ ಅದು ಅನಿವಾರ್ಯವಾಗಿ ಅಂಟಿಕೊಂಡಿರುವ ಪಿಡುಗು. ಹೆಚ್ಚು ಕಡಿಮೆ ಇಪ್ಪತ್ತೆಂಟು ವರ್ಷಗಳ ಹಿಂದೆ, ರಾಜ್ಯದಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ಗ್ರಾಮೀಣ ಶೌಚಾಲಯ ವ್ಯವಸ್ಥೆಗೆ ಒಂದು ಯೋಜನೆಯನ್ನು ಸಿದ್ಧಪಡಿಸಿ, ಅದನ್ನು ಯೋಜನಾ ಆಯೋಗದ ಅನುಮತಿಗಾಗಿ ಕಳಿಸಿದಾಗ, ಸಿಕ್ಕಿದ್ದು ನಕಾರಾತ್ಮಕವಾದ ಉತ್ತರ.
ಈಗ ಕಾಲ ಬದಲಾಗಿದೆ. ಯೋಜನಾ ಆಯೋಗವೂ ಗ್ರಾಮೀಣ ನೈರ್ಮಲ್ಯ ಯೋಜನೆಯನ್ನು ಒಪ್ಪಿದೆ. ಕೊಪ್ಪಳದಲ್ಲಿ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಟಿ. ಜನಾರ್ದನ ಶೌಚಾಲಯ ನಿರ್ಮಾಣಕ್ಕೆ ಅತಿ ಕಡಿಮೆ ವೆಚ್ಚದ, ಸುಮಾರು ಅರ್ಧ ಗಂಟೆಯಲ್ಲೇ ಮುಗಿಯುವ ಒಂದು ಹೊಸ ತಂತ್ರ ಜ್ಞಾನವನ್ನು ಪರಿಚಯಿಸಿದ್ದಾರೆ. ಅದರ ಪ್ರಯೋಗವೂ ಆಗಿದೆ.
ನಮ್ಮ ಸಾರ್ವಜನಿಕ ಜೀವನದ ನಾಯಕರು, ಅದೊಂದು ಕೊಪ್ಪಳ ಜಿಲ್ಲೆಯ ಪ್ರಯೋಗವೆಂದು ಈ ಪ್ರಯೋಗವನ್ನು ಅಲಕ್ಷಿಸಬಾರದು. ಈ ವಿಚಾರದಲ್ಲಿ ಆಸಕ್ತಿ ವಹಿಸಿ, ಆ ಕ್ರಾಂತಿ ಸಾಧ್ಯವಾಗುವಂತೆ ಮಾಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

