ಸಂಪಾದಕೀಯ

ಹೀಗೊಂದು ಒಳ್ಳೆಯ ಕ್ರಮ

Published On :

ಐ.ಎ.ಎಸ್, ಐಪಿಎಸ್ ಅಧಿಕಾರಿಗಳಿಗೆ ಒಂದು ಹುದ್ದೆಗೆ ವರ್ಗವಾದ ಅನಂತರ ಅಲ್ಲಿ ಕೆಲಸ ಮಾಡಲು ಕನಿಷ್ಠಪಕ್ಷ ಎರಡು ವರ್ಷಗಳ ಅವಕಾಶವಿರಬೇಕು ಎನ್ನುವುದು ಒಳ್ಳೆಯ ವಿಚಾರವೇ. ಈಗಲೂ ಅಂತಹ ನಿಯಮವಿದೆ.
ಆದರೆ ಹಲವಾರು ಕಾರಣಗಳಿಂದ, ಪ್ರಧಾನವಾಗಿ ರಾಜಕೀಯ ಒತ್ತಡದ ಪರಿಣಾಮವಾಗಿ, ಆ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಅನೇಕ ಅಧಿಕಾರಿಗಳನ್ನು ಕೆಲವು ತಿಂಗಳಲ್ಲೇ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ವರ್ಗ ಮಾಡಿರುವ ನಿದರ್ಶನಗಳು ಹೇರಳವಾಗಿವೆ. ಈಗಾಗಲೇ ಈ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದು ಅಧಿಕಾರಿಗಳ ವರ್ಗಾವರ್ಗಿಯಲ್ಲಿ ಪ್ರಭಾವಿಗಳ (ರಾಜಕಾರಣಿಗಳು) ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವ ರೀತಿಯಲ್ಲಿ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆಯನ್ನೇ ಹೊರಡಿಸಿದೆ.
ಎಲ್ಲ ರಾಜ್ಯಗಳಲ್ಲೂ ಈಗ ನಾಗರಿಕ ಸೇವಾ ಸಮಿತಿಗಳನ್ನು ರಚಿಸಬೇಕಾಗುತ್ತದೆ. ಆ ಸಮಿತಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯೇ ಅಧ್ಯಕ್ಷರು. ಇನ್ನೊಬ್ಬರು ಹಿರಿಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವರ್ಗಿಯ ನಿಯಮಗಳ ಪಾಲನೆಯ ಉಸ್ತುವಾರಿ ಈ ಸಮಿತಿಯ ಹೊಣೆ. ಸರ್ಕಾರ ಮಾಡುವ ಎಲ್ಲ ವರ್ಗಗಳನ್ನೂ ಈ ಸಮಿತಿಯ ಒಪ್ಪಿಗೆ ಸಿಕ್ಕಿದ ಅನಂತರವೇ ಮಾಡಬೇಕು.
ದಕ್ಷ ಆಡಳಿತ ವ್ಯವಸ್ಥೆಯ ದೃಷ್ಟಿಯಿಂದ ಈಗ ಪ್ರಕಟವಾಗಿರುವ ಆದೇಶ ಒಂದು ಒಳ್ಳೆಯ ಕ್ರಮವೇ. ಆದರೂ ವಿಶೇಷ ಪರಿಸ್ಥಿತಿಯ ನೆಪ ಹೇಳಿ ಸರ್ಕಾರಗಳು ಹಿರಿಯ ಅಧಿಕಾರಿಗಳ ವರ್ಗಾವರ್ಗಿಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಬಹುದು. ಅದನ್ನು ನಿಯಂತ್ರಿಸುವುದು ಉನ್ನತ ಮಟ್ಟದ ಸಮಿತಿಯ ಕರ್ತವ್ಯ. ಚುನಾವಣೆಯ ಸಮಯದಲ್ಲೇ ಇಂತಹ ಆದೇಶ ಪ್ರಕಟವಾಗಿರುವುದೂ ಸೂಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.