ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಮೇ 15ರ ಕ.ಪ್ರ. 'ಬೈಟುಕಾಫಿ' ಪುಟ 2ರಲ್ಲಿ ಎರಡು ಕಡೆ ತಪ್ಪುಗಳು ಗೋಚರಿಸಿವೆ. 'ಬನ್ನಿಮಂಟಪ ಹೆಣ್ಣಲ್ಲವೇ!' ನಾಟಕ ಲೇಖನದ ಕಲಂ 21ರಲ್ಲಿ 'ಜತೆಗೆ ಹೆಣ್ಣು ಈ ಸೋಷಣೆಯ ವಿರುದ್ಧ ನಡೆಸುತ್ತಾ ಬಂದಿರುವ ಹೋರಾಟದ ಪರಿಚಯವನ್ನೂ ಮಾಡಿಕೊಡುತ್ತದೆ' ಎಂದಿದೆ. ಈ ಶೋಷಣೆಯ ಆಗಬೇಕಿತ್ತಲ್ಲವೇ?' ಎಂದಿದ್ದಾರೆ.
ಕುಮಟಾದ ಕೆಕ್ಕಾರದಿಂದ ಎಸ್.ಎ. ಭಟ್ಟ ಅವರು ಬರೆಯುತ್ತಾರೆ- 'ಈ ಹಿಂದೆ ಪತ್ರಿಕೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಕೆಕ್ಕಾರು ರಘೋತ್ತಮ ಮಠದಲ್ಲಿ ಜುಲೈ 12ರಿಂದ   ಈ    ವರ್ಷದ    ಚಾತುರ್ಮಾಸ ವ್ರತ   ಕೈಗೊಳ್ಳುವ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಶ್ರೀ ರಘೋತ್ತಮ ಭಾರತೀ ಸ್ವಾಮಿಗಳು ಸ್ಥಾಪಿಸಿದ ಉ.ಕ. ಜಿಲ್ಲೆ ಕೆಕ್ಕಾರಿನಲ್ಲಿರುವುದು 'ರಘೋತ್ತಮ' ಮಠವಲ್ಲ, ಅದು 'ರಘೂತ್ತಮ ಮಠ'.  ಮುಂದೆ ಪ್ರತಿನಿತ್ಯ ಇಲ್ಲಿಯ ಸುದ್ದಿ ಪ್ರಕಟವಾಗಬೇಕಾಗಿರುವುದರಿಂದ ಈ ತಿದ್ದುಪಡಿ ವಿಷಯ ತಿಳಿಸಬೇಕಾಯಿತು' ಎಂದಿದ್ದಾರೆ.
ಭದ್ರಾವತಿಯಿಂದ ಓಂಚನ್ನೇಶ್ ಅವರು ಬರೆಯುತ್ತಾರೆ- 'ಜೂ.8ರಂದು ಪುಟ 4ರಲ್ಲಿ ಅಂತಃಪುರ ಸ್ವಗತದಲ್ಲಿ 'ಬೇರುಗಳಲ್ಲಿದ ನಾವು ಸಮಾನ ದುಃಖಿಗಳು' ಎಂದಿದೆ. ಇದೇನು 'ಬೇರುಗಳಲ್ಲಿದ' ಅಂದರೆ ಏನರ್ಥ? 'ಬೇರುಗಳಿಲ್ಲದ' ಎಂದಿರಬೇಕಿತ್ತಲ್ಲವೇ? ದಪ್ಪ ಅಕ್ಷರದ ಹೆಡ್ಡಿಂಗ್ ಹಿಂಗಾದ್ರೆ ಹೆಂಗೆ? ಅಥವ ಬೇರುಗಳಲ್ಲಿದ ಪದವೇ ಸರಿಯಾದುದೇನೋ ನಾಕಾಣೆ' ಎಂದಿದ್ದಾರೆ.
ಮಾನ್ವಿಯಿಂದ ಅಂಬಮ್ಮ ಪ್ರತಾಪ ಸಿಂಗ್ ಅವರು ಬರೆಯುತ್ತಾರೆ- 'ಸಾಮಾನ್ಯವಾಗಿ ಹೋಳಿಗೆ ತಿನ್ನುವಾಗ ಎಂಥದ್ದು ಅಂತ ಗೊತ್ತಿರುವುದಿಲ್ಲ. ತಿಂದ ಮೇಲೆ ಒಳಗಿನ ಹೂರಣ ಯಾವುದು ಅಂತ ಗೊತ್ತಾಗೋದು. ಹಬ್ಬದ ದಿನ ಮಾಡುವ ಹೋಳಿಗೆಗೂ ಗೆಣಸಿನ ಹೋಳಿಗೆಗೂ ಮೇಲ್ನೋಟಕ್ಕೆ ಅಂತಹ ವ್ಯತ್ಯಾಸ ಇರುವುದಿಲ್ಲ. ತಿಂದ ಮೇಲೆ ಅದರ ವ್ಯತ್ಯಾಸ ತಿಳಿಯೋದು. ಅದೇ ರೀತಿ 'ಕನ್ನಡಪ್ರಭ' ಪತ್ರಿಕೆಗಳಲ್ಲಿನ ವರದಿಗಳ ಶೀರ್ಷಿಕೆಯೂ ಅದರಲ್ಲಿನ ಮಾಹಿತಿಗೂ ವ್ಯತ್ಯಾಸಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿವೆ.'
'ಇದರ ಬಗ್ಗೆ 'ತಪ್ಪಾಯ್ತು ತಿದ್ಕೋತೀವಿ' ವಿಭಾಗದಲ್ಲಿ ಅನೇಕರು ಪ್ರಸ್ತಾಪಿಸಿದ್ದಾರೆ. ಈಗ ನಾನು ಅದನ್ನೇ ಪ್ರಸ್ತಾಪಿಸುತ್ತಿದ್ದೇನೆ. ಜೂ.15ರಂದು ಪತ್ರಿಕೆಯ 'ಉಪನ್ಯಾಸ ಕರ  ಅವಧಿ' ಅಂಕಣದಲ್ಲಿ   ಡಾ.ಬಿ.ಜಿ. ಧನಂಜಯ ಅವರ 'ಚುನಾವಣೆಯ ನಂತರ ನಮ್ಮ ಜವಾಬ್ದಾರಿಯೇನು?' ಲೇಖನವನ್ನು ಬಹಳ ಆಸಕ್ತಿಯಿಂದ ಓದುತ್ತಿದ್ದೆ. ಓದಿದ ನಂತರ ತಿಳಿಯಿತು ಶೀರ್ಷಿಕೆಗೂ ಲೇಖನದಲ್ಲಿರುವ ಅಂಶಗಳಿಗೂ ಸಂಬಂಧವಿಲ್ಲ ಅಂತ.'
'ಲೇಖನದಲ್ಲಿ ಚುನಾವಣೆ ಮುಂಚೆ ತರಬೇತಿ ಬಗ್ಗೆ, ಚುನಾವಣೆ ಸಮಯದಲ್ಲಿ ಕರ್ತವ್ಯ ನಿರ್ವಹಣೆ ಬಗ್ಗೆ ತಿಳಿಸಲಾಗಿದೆ. ಚುನಾವಣೆಯ ನಂತರ ನಮ್ಮ ಜವಾಬ್ದಾರಿ ಏನು ಎಂಬ ಬಗ್ಗೆ ಮಾಹಿತಿ ಇಲ್ಲ' ಎಂದಿದ್ದಾರೆ.

 ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.