ಸೇನೆಯಲ್ಲಿ ಟ್ರೇನಿಂಗ್ ನಡೆದಿತ್ತು. ಅಧಿಕಾರಿ ತಿಮ್ಮನನ್ನು ಕೇಳಿದ: "ನನ್ನ ಕೈಯಲ್ಲಿ ಇರೋದು ಏನು?"
ತಿಮ್ಮ: "ಸರ್, ಅದು ಬಂದೂಕು...!"
ಅಧಿಕಾರಿ: "ಇದು ಬಂದೂಕು ಅಲ್ವೋ ಮುಠ್ಠಾಳ! ಇದು ನಿನ್ನ ಗೌರವ, ಆತ್ಮಾಭಿಮಾನ, ಇದು ನಿನ್ನ ಅಮ್ಮ ಕಣೋ ತಿಮ್ಮ!"
ಅಧಿಕಾರಿ(ಕೋಲ್ಯನತ್ತ ತಿರುಗಿ): ಈಗ ನೀನು ಹೇಳು. ನನ್ನ ಕೈಯಲ್ಲಿ ಏನಿದೆ?
ಕೋಲ್ಯ: ಸರ್, ಇದು ತಿಮ್ಮನ ಅಮ್ಮ! ಅವನ ಗೌರವ, ಅವನ ಆತ್ಮಾಭಿಮಾನ...ಮತ್ತು ನಮ್ಮ ಆಂಟಿ ಸಾರ್, ಆಂಟಿ!