ಕರಾರುವಾಕ್
= ಕರಾರಿನ ಪ್ರಕಾರ ನಡೆದುಕೊಳ್ಳುವಿಕೆ (ವಾಕ್)
= ಹಾಕಿದ ಗೆರೆಯನ್ನು ದಾಟದಿರುವಿಕೆ
= ಒಂದು ಹೆಜ್ಜೆಯನ್ನೂ ಅಪ್ಪಿತಪ್ಪಿಯೂ ತಪ್ಪಿ ನಡೆಯದವ
= ಎಲ್ಲದರಲ್ಲೂ ಪಕ್ಕಾ, ವ್ಯಕ್ತಿತ್ವವೂ ಚೊಕ್ಕ
ಅಷ್ಟಕ್ಕಷ್ಟೇ. ಕಾಟೋಕಾಟು
= ಒಂದು ಹೆಚ್ಚೂ ಇಲ್ಲ, ಎರಡರ ಹುಚ್ಚೂ ಇಲ್ಲ
ಅಂದಾಜಿಗೆ ಗುಂಡು ಹೊಡೆದರೂ ಗುರಿಯನ್ನು ಬೇಧಿಸುವ ಪರಿ
= ಯೋಧನ ಬಂದೂಕಿನ ಗುರಿಯಂತೆ
= ಇಷ್ಟವಾದದ್ದು ದಕ್ಕಬೇಕೆಂದರೆ ಪ್ರಯತ್ನವೂ ನಿರ್ದಿಷ್ಟವಾಗಿರಬೇಕು
= ಕರಾರುವಾಕ್ ಆಗಿ ಕಾನೂನು ತಿಳಿದುಕೊಂಡರೆ ಕರ ಕಟ್ಟುವುದರಿಂದ ತಪ್ಪಿಸಿಕೊಳ್ಳಬಹುದು
= ನಿಖರ ವಾಕ್ಕು
= ಗಣಿತದಲ್ಲಿ ಮಾತ್ರ ಇದು ಸಾಧ್ಯ
-ವಿಶ್ವನಾಥ ಸುಂಕಸಾಳ
vishwasunkasal@yahoo.com