ಸಾಧ್ಯತೆ

Updated on: 

ಸಾಧ್ಯತೆ
= ಇದನ್ನು ಸುಲಭದಲ್ಲಿ ಅರ್ಥೈಸಬಹುದಾದ ಸಾಧ್ಯತೆ ಕಡಿಮೆಯೇ
= ಬಹುವಾಗಿ ಉಪಯೋಗಿಸಲ್ಪಡುವ 'ಬಹುದು'
= ಆಗಲೂ ಬಹುದು, ಆಗದೇ ಇರಲೂ ಬಹುದು ಎಂಬಂಥ ಸ್ಥಿತಿ ಇದರದ್ದು
= ಭುವಿಯಲ್ಲಿ ಸಂಭವಿಸಬಹುದಾದ ಸಂಭವನೀಯತೆಗಳು
= ಭವದ ಅನುಭವ ಹೆಚ್ಚಿಸುವಂಥ ಅನಿಶ್ಚಿತತೆ
= ಜ್ಯೋತಿಷಿಗಳಿಗೆ, ಹವಾಮಾನ ತಜ್ಞರಿಗೆ ಹೆಚ್ಚು ಉಪಯೋಗಕ್ಕೆ ಬರುವ ಶಬ್ದ
= ಇದು ಸಾಧ್ಯವಾ ಎಂಬ ಅನುಮಾನಕ್ಕೆ ಅನುಮಾನದಲ್ಲೇ ಕೊಡಲ್ಪಡುವ ಉತ್ತರ
= ಎಬಿಲಿಟಿ ಇಲ್ಲದಿದ್ದರೆ ಪಾಸಿಬಿಲಿಟಿಗಾಗಿ ಕಾಯಬೇಕಾಗುತ್ತದೆ
= ಸಾಧ್ಯವೇ ಇಲ್ಲ ಎನ್ನುವಾಗಲೂ ಆಸೆಯನ್ನು ಜೀವಂತವಾಗಿರಿಸುವುದು ಸಾಧ್ಯತೆಗಳೇ
= ಸಾಧ್ಯತೆ ಎಂಬುದಿಲ್ಲದಿದ್ದರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು
= ಪಕ್ಕಾ ಹೇಳಲಾಗದ ಅಪಕ್ವ ಸಂದರ್ಭದಲ್ಲಿ ಉಪಯೋಗಿಸಲ್ಪಡುವ ಶಬ್ದ

-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com