ಬಸವನಗೌಡ ಹೆಬ್ಬಳೆಗೆರೆ, ಚನ್ನಗಿರಿ
ಒಂದೊಮ್ಮೆ ನಮ್ಮ ಮೆದುಳನ್ನು ಮೊಬೈಲ್ನಂತೆ ಸ್ವಿಚ್ ಆಫ್ ಮಾಡುವಂತೆ ಇದ್ದಿದ್ರೆ?
ಆಫ್ ಮಾಡಬಹುದು. ಆದರೆ ಆನ್ ಮಾಡುವ ಬಟನ್ ಇಲ್ಲ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಬಸುರಿಯಾದವಳಿಗೆ ಬಹು ಬಯಕೆಗಳು ಯಾಕೆ?
ಬಯಕೆ ಇದ್ದಿದ್ದಕ್ಕೇ ಬಸಿರಾಗಿದ್ದು. ಮೊದಲಿನ ಬಯಕೆಗಳನ್ನು ಹೇಳಿಕೊಳ್ಳುವಂತಿಲ್ಲ. ನಂತರದ್ದನ್ನು ಹೇಳಿಕೊಳ್ಳಬಹುದು.
ರವಿಕುಮಾರ ಜಿ.ಬಿ., 9449669897
ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು ನಿದ್ರೆ ಮಾಡುತ್ತಾರೇಕೆ?
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎಂಬ ಮಾತನ್ನು ನಿಜ ಮಾಡಿ ತೋರಿಸಲು!
ಮೊಳಕಾಲ್ಮೂರು, ಸುರೇಶ, ಬಳ್ಳಾರಿ
ಚಿಟ್ಟೆಹೆಜ್ಜೆ ಎಲ್ಲಿಯಾದರೂ ಕಾಣುವುದೇ?
ಚಿಟ್ಟೆಹೆಜ್ಜೆ ಜಾಡು ಹುಡುಕಿ ಜಾಡು ತಪ್ಪಿ ಅದನ್ನೂ ಇತ್ತೀಚೆಗೆ ನಿಲ್ಲಿಸಿದ್ದಾರೆ!
- ಬಾಣಭಟ್ಟ