ಆರ್.ಸಿ. ಪರಶುರಾಮ, 9902203492
ಬಸ್ ನಿಲ್ಲುವ ಸ್ಥಳಕ್ಕೆ ಬಸ್ಸ್ಟ್ಯಾಂಡ್ ಎನ್ನುವಂತೆ ರೈಲು ನಿಲ್ಲುವ ಸ್ಥಳಕ್ಕೆ ರೈಲ್ಸ್ಟ್ಯಾಂಡ್ ಎನ್ನುವುದಿಲ್ಲ ಏಕೆ?
ಸೈಕಲ್ ಸ್ಟ್ಯಾಂಡ್ ಥರ ಬಸ್ಗೆ ಸ್ಟ್ಯಾಂಡ್ ಇಲ್ಲದಿದ್ದರೂ ಬಸ್ ಸ್ಟ್ಯಾಂಡ್ ಅಂತ ಹೇಳೋದ್ಯಾಕೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ!
ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಭಾರತೀಯ ಮದುವೆ ಪದ್ಧತಿಯನ್ನು ವಿದೇಶಿಯರು ಇಷ್ಟಪಡುತ್ತಿರುವುದೇಕೆ?
ಅವರ ಲಿವಿಂಗ್ ಇನ್ ಪದ್ಧತಿಯನ್ನು ನಾವು ಇಷ್ಟಪಡುತ್ತಿರುವುದರಿಂದ!
ಆರ್.ಸಿ.ಪಿ., ಶಿಕಾರಿಪುರ
ತಪ್ಪು ಮಾಡಿದವರನ್ನು ಕ್ಷಮಿಸುವುದು ದಯೆಯೋ? ದೌರ್ಬಲ್ಯವೋ?
ಅತಿಯಾದರೆ ಪ್ರೀತಿಯೂ ದೌರ್ಬಲ್ಯವೇ!
ಬರ್ಕಲಿರಮೇಶ, ಮಂಡ್ಯ, 9008741348
ದಿನದಿನಕ್ಕೂ ಅವಳ ಮುಖದಲ್ಲಿ ಸೌಂದರ್ಯ ಕಾರಂಜಿ ಚಿಮ್ಮುತ್ತಿದೆಯಲ್ಲಾ?
ಕಾರಂಜಿ ನೋಡೋಕೆ ಟಿಕೆಟ್ ಇಡದಿದ್ದರೆ ಸಾಕು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಊಹೆಗೂ ನಿಲುಕದ್ದು ಎಂದರೆ ಯಾವುದು?
ಕೇಜ್ರಿವಾಲ್ ನಿರ್ಧಾರಗಳು!
-ಬಾಣ ಭಟ್ಟ