ಚಾನೆಲ್ಲುಗಳು ಮಾಡುವ ಆವಾಂತರ
ಕೆಲ ದಿನಗಳ ಹಿಂದೆ ಕನ್ನಡದ ಚಾನಲ್ಲೊಂದು ದೇಶದ ಪ್ರಧಾನ ಮಂತ್ರಿ ಮೋದಿಯವರಿಗೆ ಕೊಡ ಮಾಡುವ ಭದ್ರತೆ ಕುರಿತು ಕಾರ್ಯಕ್ರಮವೊಂದನ್ನು ಬಿತ್ತರಿಸಿತು. ಈ ಕಾರ್ಯಕ್ರಮದಲ್ಲಿ ಮೋದಿಯವರಿಗೆ ಯಾವ ರೀತಿ ಭದ್ರತೆ ನೀಡಲಾಗುತ್ತಿದೆ, ಅವರ ವಾಹನದ ರಚನೆ ಹೇಗಿರುತ್ತದೆ, ಭದ್ರತಾ ಸಿಬ್ಬಂದಿ ಅವರನ್ನು ಹೇಗೆ ಸುತ್ತುವರೆದಿರುತ್ತಾರೆ ಎಂಬುದನ್ನು ಎಳೆಎಳೆಯಾಗಿ ವಿವರಿಸಿತ್ತು. ಭದ್ರತೆಯ ಎಲ್ಲಾ ಅಂಶಗಳನ್ನು ಸಾರ್ವಜನಿಕರಿಗೆ ಬಿಚ್ಚಿಟ್ಟಿತ್ತು.
ಇದೇ ಚಾನೆಲ್ನವರು ಮುಂಬಯಿ ದಾಳಿಯ ಸಮಯದಲ್ಲೂ ಕೂಡ 'ಲೈವ್' ಕವರೇಜು ಮಾಡಿ ಕಮಾಂಡೋ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸಿತ್ತು. ಭಾರತೀಯ ಚಾನೆಲ್ಲುಗಳ ಈ ಅವಿವೇಕಿತನದ ಪ್ರಸಾರದಿಂದಾಗಿ ವೈರಿ ದೇಶ ಪಾಕಿಸ್ತಾನ ಇಲ್ಲಿಯ ದೃಶ್ಯಾವಳಿಗಳನ್ನು ನೋಡುತ್ತಾ ತನ್ನ ಉಗ್ರರಿಗೆ ಮುಂದಿನ ಆದೇಶಗಳನ್ನು ನೀಡುತ್ತಿದ್ದನ್ನು ಜಗತ್ತೇ ಗಮನಿಸಿತು. ಚಾನೆಲ್ಗಳ ಈ ಬೇಜವಾಬ್ದಾರಿ ವರ್ತನೆಯಿಂದ ದೇಶದ ಸುರಕ್ಷತೆಯ ವಿಷಯದಲ್ಲಿ ಪರೋಕ್ಷವಾಗಿ ವೈರಿ ದೇಶಕ್ಕೆ ಅನುಕೂಲವಾಗತ್ತಿದೆ. ಸರ್ಕಾರವೂ ಕೂಡ ಈ ಭದ್ರತಾ ಲೋಪದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ಚಾನೆಲ್ಲುಗಳವರಿಗೆ ಯಾವಾಗ ಬುದ್ಧಿ ಬರುತ್ತೋ ದೇವರೇ ಬಲ್ಲ.
ಶ್ರವಣಕುಮಾರ ರಾಯ್ಕರ್ (ಬೆಳ್ಳಿಮನೆ), ಗಂಗಾವತಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

