ಮಹಿಳಾ ಸಮಾನತೆಗೆ ನಾಂದಿ
2014ರ ಲೋಕಸಭಾ ಚುನಾವಣೆಯು ನಿಜಕ್ಕೂ ಮಹಿಳೆಯರನ್ನು ಪ್ರತಿನಿಧಿಸುವಂತಹ ಚುನಾವಣೆಯೇ. ಈ ಬಾರಿ ಕೇಂದ್ರ ಸಂಪುಟದಲ್ಲಿ ಏಳು ಮಹಿಳೆಯರು ತಮ್ಮ ಅಸ್ತಿತ್ವ ಗುರುತಿಸಿಕೊಂಡಿದ್ದಾರೆ. ಇದೊಂದು ಸಂತಸದ ವಿಷಯವೇ ಸರಿ. ಹಾಗೆ ಲೋಕಸಭಾಧ್ಯಕ್ಷರಾಗಿ ಸುಮಿತ್ರಾ ಮಹಾಜನ್ ಮಹಿಳಾ ಪ್ರತಿನಿಧಿಯಾಗಿ ಇರುತ್ತಾರೆ ಎಂಬ ಸಮಾಧಾನವಿದೆ. 1952 ರಿಂದ 2014 ರವರೆಗೆ ಕೇಂದ್ರ ಸಂಪುಟದಲ್ಲಿ ಇಷ್ಟು ಮಹಿಳೆಯರು ಅಸ್ತಿತ್ವ ಕಂಡಿರುವುದು ಇದು ಮೊದಲನೇ ಬಾರಿ. ಕೇವಲ ಮೀಸಲಿನಿಂದಲೇ ಮಹಿಳೆಯನ್ನು ಗೆಲ್ಲಿಸುವುದರಲ್ಲಿ ನೋಡುವ ಪುರುಷ ಜಾತಿಗೆ ಈ ಬಾರಿಯದ್ದೊಂದು ಉದಾಹರಣೆಯಾಗಿ ತೋರಬಲ್ಲದು. ರಾಜಕಾರಣದಲ್ಲಿ ನೇರವಾಗಿ ಪಾಲು ಪಡೆಯುವ ಧೈರ್ಯ ಮತ್ತು ಸಾಧ್ಯತೆ ಫಲಿಸುವುದು ಕೆಲವೇ ಕೆಲವು ಮಹಿಳೆಯರಿಗೆ ಮಾತ್ರ.
ಭಾರತದ ಸಂವಿಧಾನ ಲಿಂಗ ಸಮಾನತೆಯನ್ನು ಪ್ರತಿಪಾದಿಸುವುದಲ್ಲದೆ ಮಹಿಳೆಯರ ಪರ ವಿಶೇಷ ಖಾಳಜಿಯನ್ನು ತೋರಿಸಿದೆ. ಕಾನೂನಿನ ಪ್ರಕಾರ ಎಲ್ಲರೂ ಸಮಾನರೆಂದು ಸಂವಿಧಾನದ 14ನೇ ವಿಧಿ ಹೇಳುತ್ತದೆ. ಮಹಿಳಾ ಪರ ನಿಲುವುಗಳಿಗಾಗಿಯೇ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ವಿಶೇಷ ಕಾನೂನು ಹಾಗೂ ನೀತಿಗಳನ್ನು ಸರ್ಕಾರ ಜಾರಿ ಮಾಡಬಹುದು. ಆ ಸಂದರ್ಭದಲ್ಲಿ ದೇಶದ ಸಮಸ್ತ ಮಹಿಳೆಯರ ಪ್ರತಿನಿಧಿಯಾಗಿ ವಿಚಾರವಂತ, ಬುದ್ಧಿವಂತ ಸಮಾಜಮುಖಿ ಮಹಿಳೆಯರು ಸಂಸತ್ತಿನಲ್ಲಿ ಇರಬೇಕಾಗುತ್ತದೆ. ಅದರಂತೆ ಈ ಬಾರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೆಚ್ಚಿನ ಮಹಿಳೆಯರಿಗೆ ತಮ್ಮ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಿದೆ. ಅವರೆಲ್ಲ ದೇಶದ ಅನೇಕ ಸಮಸ್ಯೆಗಳ ಬಗ್ಗೆ ಚಿಂತಿಸಿ ಬದಲಾವಣೆ ತರಬಲ್ಲರು ಎಂಬ ವಿಶ್ವಾಸ ನಮ್ಮದು.
- ಶೋಭಾ ಹೆಚ್.ಜಿ., ಬೆಂಗಳೂರು
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

