ಅವನು: ಹೇಗಿದ್ದೀಯ ಕೋಲ್ಯ?
ಕೋಲ್ಯ: ಚನ್ನಾಗಿದ್ದೀನಿ...
ಅವನು: ವಿದ್ಯಾಭ್ಯಾಸ ಹೇಗಿದೆ?
ಕೋಲ್ಯ: ನಿನ್ನ ಜೀವನದ ಥರ...
ಅವನು: ಅಂದ್ರೆ?
ಕೋಲ್ಯ: ಹಾಳಾಗಿ ಹೋಗಿದೆ!
ನವವಿವಾಹಿತೆ ತನ್ನ ತಾಯಿಗೆ ಫೋನ್ ಮಾಡಿದಳು: "ಅಮ್ಮ ನನ್ನ ಗಂಡನ ಜೊತೆ ಇವತ್ತು ಭಾರೀ ಜಗಳ ಆಯ್ತು..."
ಅಮ್ಮ: ಬೇಜಾರು ಮಾಡ್ಕೋಬೇಡ. ಸಂಸಾರ ಅಂದಮೇಲೆ ಇಂಥದ್ದೆಲ್ಲ ಇದ್ದದ್ದೇ...
ನವವಿವಾಹಿತೆ(ಅಳುತ್ತಾ): ನೀನು ಹೇಳೋದು ನಿಜ ಅಮ್ಮ... ಆದ್ರೆ ಹೆಣ ಏನು ಮಾಡ್ಲಿ?