ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಹುಡುಗಿಯರಿಗೆ ಬ್ಯೂಟಿ ಪಾರ್ಲರ್. ಹುಡುಗರಿಗೆ?
ಬ್ಯೂಟಿಪಾರ್ಲರ್ ಪಕ್ಕದಲ್ಲೇ ಡ್ಯೂಟಿ!
ಓಂಚನ್ನೇಶ್, ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಪೂಜಾರಿಗೂ, ರಾಜಕಾರಣಿಗೂ ವ್ಯತ್ಯಾಸವೇನು?
ಅವರದ್ದು ಮಂತ್ರ, ಇವರದ್ದು ತಂತ್ರ!
ಎ.ಎಚ್. ಪ್ರಕಾಶಕುಮಾರ, ಶಿಕಾರಿಪುರ,
ಹಿಂದೆ ವೃದ್ಧಾಪ್ಯ ಸಂಕೇತವಾಗಿ ಬಿಳಿಕೂದಲು ಪ್ರಾರಂಭವಾಗುತ್ತಿತ್ತು. ಈಗ ಬಾಲ್ಯದಿಂದಲೇ ಶುರುವಾಗುತ್ತಿದೆಯಲ್ಲಾ?
ಡಿಗ್ಗಿ, ತಿವಾರಿಯಂಥವರಿಗೆ ವೃದ್ಧಾಪ್ಯದಲ್ಲೂ ಯೌವನ ಬರುತ್ತಿದೆಯಲ್ಲಾ ಅದಕ್ಕೆ!
ಎಸ್. ಸಂತೋಷಕುಮಾರ, ಶಿಕಾರಿಪುರ
ಹೆಣ್ಣಿಗೆ ಮದುವೆಯಾಗಿದೆ ಎಂದು ತಿಳಿಯಲು ತಾಳಿ, ಕಾಲುಂಗುರ ನೋಡಬೇಕು. ಗಂಡಿಗೆ ಮದುವೆಯಾಗಿದೆ ಎಂದು ತಿಳಿಯಲು?
ಆತನ ಮುಖ ನೋಡಿದರೆ ಸಾಕು!
ಬಾಣಭಟ್ಟ