ಮೊಳಕಾಲ್ಮೂರು ಸುರೇಶ, ಬಳ್ಳಾರಿ
ಕಸ ಇದ್ದಲ್ಲೇ ಇರುತ್ತೆ. ಬಿಲ್ಲು ಮಾತ್ರ ಮುಂದೆ ಹೋಗುತ್ತೆ ಯಾಕೆ?
ಸರ್ಕಾರದಲ್ಲಿ ಬಿಲ್‌ವಿದ್ಯಾ ಪ್ರವೀಣರೇ ಹೆಚ್ಚಿದ್ದಾರೆ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
60ರ ಹರೆಯದವರನ್ನು 30ರಹರೆಯದವರು ಪ್ರೇಮಿಸುವ ಪ್ರೇಮಪ್ರಸಂಗಗಳು ಹೆಚ್ಚಾಗಲು ಕಾರಣ?
ವಯಾಗ್ರ!
ಉಜ್ಜನಿ ಜಲೇಂದ್ರ, ಮಲ್ಲುಂಗೆರೆ, 8971857200
ಸಿದ್ರಾಮಣ್ಣ 'ಮದ್ಯಪಾನ ಭಾಗ್ಯ' ಯೋಜನೆ ಯಾವಾಗ ಶುರುಮಾಡ್ತಾರೆ?
ಅದು ಹಾಲಿಗೆ ಹುಳಿ ಹಿಂಡಿದಂಗಲ್ಲ. ಜನ ಕಿವಿಹಿಂಡುವ ಅಪಾಯವಿದೆ!
ಚಿರಪ್ರಭ, ನಂಜನಗೂಡು
ಕೈ ಪಕ್ಷದ ಜನಪ್ರಿಯತೆ ಇಳಿಯುತ್ತಿರುವಾಗ ಡಿಗ್ಗಿ-ರಾಯರ ಪ್ರೇಮ ಪ್ರಕರಣ ಏರುಗತಿಯಲ್ಲಿ ಸಾಗುತ್ತಿದೆಯಲ್ಲಾ?
'ಕೈ'ಪಕ್ಷದಲ್ಲಿ ಕೆಲಸ ಕಡಿಮೆಯಾದಾಗ ಪರ್ಯಾಯ ವ್ಯವಸ್ಥೆ ಬೇಕಲ್ಲ!
ಬಾಣಭಟ್ಟ