ಸಣ್ಣ ಕೃಷಿಕರಿಗೆ ನೆರವು
ಕೃಷಿ ವಲಯದಲ್ಲಿ ಈಚಿನ ದಿನಗಳಲ್ಲಿ ಬೇಕಾದಷ್ಟು ಬದಲಾವಣೆಗಳಾಗಿವೆ. ಅದರಲ್ಲಿ ಪ್ರಮುಖವಾದದ್ದು ಕೃಷಿ ಕಾರ್ಮಿಕರ ಅಭಾವ. ಕೃಷಿಯ ಕೆಲಸಕ್ಕೆ ಈಗ ಕೂಲಿಯಾಳುಗಳು ಸಿಗುವುದಿಲ್ಲ. ಸಿಕ್ಕರೂ ಅವರ ವೇತನ ದುಬಾರಿ ಎನ್ನುವುದು ಕೃಷಿಕರ ಕೊರಗು.
ನಿಜ. ಕೃಷಿ ವಲಯದಲ್ಲಿ ಕ್ರಾಂತಿಯಾಗಬೇಕಾದರೆ, ಅದು ಯಂತ್ರೋಪಕರಣಗಳ ಬಳಕೆಯಿಂದಲೇ ಸಾಧ್ಯ. ಆದರೆ ಸಣ್ಣ ಕೃಷಿಕರಿಗೆ ಯಂತ್ರಗಳನ್ನು ಕೊಳ್ಳುವ ಶಕ್ತಿಯೂ ಇಲ್ಲ. ಆ ಯಂತ್ರಕ್ಕೆ ಅಗತ್ಯವಾದಷ್ಟು ಕೆಲಸವನ್ನು ಒದಗಿಸುವುದೂ ಸಾಧ್ಯವಿಲ್ಲ. ಹೀಗಾಗಿ ಬಡ ಕೃಷಿಕರಿಗೆ ಯಂತ್ರಗಳ ಬಳಕೆ ಒಂದು ಕನಸಾಗಿತ್ತು.
ಸಚಿವ ಕೃಷ್ಣ ಬೈರೇಗೌಡರು ಈ ಕೊರತೆಯನ್ನು ನೀಗಿಸಲು ಒಂದು ಒಳ್ಳೆಯ ಯೋಜನೆಯನ್ನು ಜಾರಿಗೆ ತರುವ ಮಾತಾಡಿದ್ದಾರೆ. ಆ ಮಾತಿನಂತೆ ಸರ್ಕಾರವೇ ಯಂತ್ರಗಳನ್ನು ಕೊಂಡು, ಅದನ್ನು ಹೋಬಳಿಯ ಮಟ್ಟದ ಕೇಂದ್ರದಲ್ಲಿಟ್ಟು ರೈತರಿಗೆ ಅಗತ್ಯಬಿದ್ದಾಗ ಬಾಡಿಗೆಗೆ ಕೊಡುವ ಯೋಜನೆ ಅದು. ಒಂದು ರೀತಿಯಲ್ಲಿ ಸರ್ಕಾರಿ ಪ್ರಚೋದಿತ ಸಹಕಾರಿ ಕೃಷಿ. ಆದರೆ ಉತ್ಪಾದನೆಯಲ್ಲಿ ಹಂಚಿಕೆಯ ಪ್ರಸ್ತಾಪವಿಲ್ಲ.
ಈ ಯೋಜನೆ ಯಶಸ್ವಿಯಾದರೆ ರೈತರಿಗೂ ಶ್ರಮ ಕಡಿಮೆಯಾಗುತ್ತದೆ. ಆದರೆ ಯಂತ್ರಗಳ ಬಾಡಿಗೆಯ ದರ (ಗಂಟೆಯ ಲೆಕ್ಕದಲ್ಲಿ) ನ್ಯಾಯವಾಗಿರಬೇಕು. ಆಗ ಮಾತ್ರ ಈ ಯೋಜನೆ ಯಶಸ್ವಿಯಾಗುವುದು. ಹಳೆಯ ಮೈಸೂರು ಸೀಮೆಯಲ್ಲಿ ಇಂತಹದ್ದೇ ಒಂದು ಪ್ರಯೋಗ ನಡೆದಿದ್ದು ನಿಜ. ಆದರೆ ಅದು ಯಶಸ್ವಿಯಾಗಲಿಲ್ಲ. ಅದಕ್ಕೆ ಕಾರಣ ಆಗಿನ ಕೂಲಿ ದರ ಕಡಿಮೆ ಇತ್ತು. ಯಂತ್ರಗಳ ಉಸ್ತುವಾರಿ ವ್ಯವಸ್ಥೆ ಇಲ್ಲಿ ತುಂಬಾ ಮುಖ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

