ಉಜ್ಜನಿ ಜಲೇಂದ್ರ, ಮಲ್ಲುಂಗೆರೆ, 8971857200
ನನ್ನವಳ ಮೊದಲ ಮುತ್ತೇ ಕಹಿಯಾಗಿತ್ತಲ್ಲ ಭಟ್ರೇ?
ನಿನ್ನವಳದ್ದು ಹಾಗಲಕಾಯಿ ಮುಖ ಅಂತ ಗೊತ್ತಾಯ್ತುಬಿಡು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಮನಸಿದ್ದರೆ ಮಾರ್ಗ. ಇಲ್ಲದಿದ್ದರೆ?
ಗಟಾರ!
ರಮೇಶ ಭಟ್ ಆವರ್ಸೆ, ಮೈಸೂರು, 9164276058
ಮನುಷ್ಯನ ಹತ್ತಿರ ಹೆಚ್ಚು ಹಣ ಇದ್ದಾಗ ನೆನಪಾಗೋದು ಯಾವುದು?
ಎಲ್ಲೋ ಓದಿದ ದರೋಡೆ ಸುದ್ದಿ!
ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಜನ್ಮಕೊಟ್ಟ ತಾಯಿ ಮತ್ತು ಕೈಹಿಡಿದ ಮಡದಿ ಇಬ್ಬರ ನಡುವೆ ವ್ಯತ್ಯಾಸವೇನು?
ಒಬ್ಬಳು ನಿನ್ನ ತಾಯಿ, ಇನ್ನೊಬ್ಬಳು ನಿನ್ನ ಮಗುವಿನ ತಾಯಿ!
ಬಾಣಭಟ್ಟ