ತಪ್ಪಾಯ್ತು ತಿದ್ಕೋತೀವಿ
ಮೈನಾ ಶ್ರೀವರ ಅವರು ಬರೆಯುತ್ತಾರೆ- 'ಪೊಲೀಸರು ಬಂಧಿಸುವುದಕ್ಕೂ ವಶಕ್ಕೆ ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿಲ್ಲವೇ? ಏಕೆಂದರೆ ಮಾ.6ರಂದು ಪುಟ 4ರಲ್ಲಿ ಪ್ರಕಟವಾಗಿರುವ ಸುದ್ದಿಯ ಶೀರ್ಷಿಕೆಯ ಪ್ರಕಾರ 'ಅರವಿಂದ ಕೇಜ್ರಿವಾಲ್ ಬಂಧನ' ಎಂದು ಶೀರ್ಷಿಕೆಯಲ್ಲಿದ್ದರೆ, ಸುದ್ದಿಯ ಪ್ರಕಾರ, ಅವರನ್ನು ಕೇವಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು ಎಂದಿದೆ. ಹಾಗೆಯೆ ಕೇಜ್ರಿವಾಲರು ಮೋದಿ ಆದೇಶದ ಮೇರೆಗೆ ನನ್ನನ್ನು ಬಂಧಿಸಿದರು ಎಂದು ಹೇಳಿದರು ಎಂದಿದೆ. ಆದ್ದರಿಂದ ಅವರು ಪೊಲೀಸ್ ವಶಕ್ಕೆ ತೆಗೆದುಕೊಂಡರೋ, ಬಂಧನಕ್ಕೊಳಪಡಿಸಿದರೊ ತಿಳಿಯದೇ ಗೊಂದಲಮಯವಾಗಿದೆ. ಕೇಜ್ರಿವಾಲರು ಹೇಳಿದ್ದು ನಿಜವಾದರೆ, ಸುದ್ದಿ ತಪ್ಪಿದೆ ಅಥವಾ ಅವರು ಹೇಳಿದ್ದು ಸುಳ್ಳಾದರೆ ಶೀರ್ಷಿಕೆ ತಪ್ಪಿದೆ. ಗುಜರಾತ್ ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಂಧಿಸಿದರೋ ಯಾವುದು ಸರಿಯಾದ ಮಾಹಿತಿ ದಯವಿಟ್ಟು ತಿಳಿಸಿ' ಎಂದಿದ್ದಾರೆ.
ವಶಕ್ಕೆ ತೆಗೆದುಕೊಳ್ಳುವುದಕ್ಕೂ ಬಂಧಿಸುವುದಕ್ಕೂ ವ್ಯತ್ಯಾಸವಿದೆ. ಪೊಲೀಸರು ವಿಚಾರಣೆಗೆಂದು ಕೆಲವರನ್ನು ವಶಕ್ಕೆ ಪಡೆದು, ನಂತರ ಬಂಧಿಸದೇ ಬಿಟ್ಟುಬಿಡಬಹುದು. ಪ್ರತಿಭಟನೆಗಳು ನಡೆದಾಗ ಪ್ರತಿಭಟನಾಕಾರರನ್ನು 'ಬಂಧಿಸಿ ಬಿಡುಗಡೆ' ಎಂದೇ ಕರೆಯಲಾಗುತ್ತದೆ. ಅದೇ ರೀತಿಯಲ್ಲಿ ಕೇಜ್ರಿವಾಲ್ ಅವರನ್ನೂ ಮಾಡಿರಬಹುದು. ಪ್ರಕರಣ ದಾಖಲಿಸಿದರೆ ಬಂಧನ, ದಾಖಲಿಸದೇ ಇದ್ದರೆ ವಶ ಎಂದಾಗುತ್ತದೆ. ಈ ಗೊಂದಲದಿಂದಾಗಿ ಸುದ್ದಿಯಲ್ಲೂ ಗೊಂದಲವಾಗಿರಬೇಕು.
ಶಿಕಾರಿಪುರದಿಂದ ಆರ್.ಸಿ. ಪರಶುರಾಮ್ ಅವರು ಬರೆಯುತ್ತಾರೆ- 'ಫೆ.20ರಂದು ಪತ್ರಿಕೆಯ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯಲ್ಲಿ ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಮುನ್ನಡೆ ಎಂದಿದೆ. ಆದರೆ ಶೇಕಡಾವಾರು ಮತ ಹಂಚಿಕೆಯಲ್ಲಿ ಕಾಂಗ್ರೆಸ್ 36ರ್ ಬಿಜೆಪಿ 38ರ್ ಇದೆ. ಹೀಗಾಗಿ ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಮುನ್ನಡೆ ಎಂದು ವರದಿ ನೀಡಬೇಕಿತ್ತು' ಎಂದಿದ್ದಾರೆ.
ಮ.ರಾ. ಹೆಗಡೆಯವರು ಚಿಕ್ಕ ತಪ್ಪೊಂದನ್ನು ಗಮನಕ್ಕೆ ತಂದಿದ್ದಾರೆ. ಅವರು ಬರೆಯುತ್ತಾರೆ- 'ಫೆ.23ರಂದು 'ಖುಷಿ'ಯ 'ಪಾಪು ಕಾರ್ನರ್'ನಲ್ಲಿ 'ನೀ ನೀರೆಗೆ ಬಾರೆ...' (ತಪ್ಪು) 'ನೀ ನೀರಿಗೆ ಬಾರೆ...' (ಸರಿ)
ಚಿತ್ರ ನೋಡಿಯಾದರೂ ಶೀರ್ಷಿಕೆ ನೀಡಬಹುದಿತ್ತಲ್ಲವೇ?' ಎಂದಿದ್ದಾರೆ.
ದಾವಣಗೆರೆಯಿಂದ ಜಿ.ಎಂ. ರಾಜಶೇಖರ ಅವರು ಬರೆಯುತ್ತಾರೆ- 'ಪರಭಾಷೆಯನ್ನು ಕನ್ನಡಕ್ಕೆ ಯಥಾವತ್ ತರ್ಜುಮೆ ಮಾಡುವುದು ಕಷ್ಟ ಸಾಧ್ಯವಾದರೂ ಅಸಾಧ್ಯವೇನಲ್ಲ. ಔಛಟಿಜ ಏನೋ ಸರಿ ಆದರೆ ಅದು ಇಂಗ್ಲ್ಯಾಂಡ್/ಇಂಗ್ಲೆಂಡ್ ಅಲ್ಲ. ಅದು ಇಂಗ್ಲಂಡ್. ಹಾಗೆಯೇ ನ್ಯೂಜೀಲಂಡ್, ಆಕ್ಲಂಡ್, ಪೋರ್ಟ್ಲಂಡ್. ಮೇಲ್ಬೋರ್ನ್ ಪ್ರಯೋಗ ತಪ್ಪು. ಅದು ಮೆಲ್ಬರ್ನ್!'
'ಇಂಗ್ಲಿಷ್ ನಂತರದ ಸ್ಥಾನ ಬಹುಷಃ ಫ್ರೆಂಚ್ದು. ಫ್ರಾಂಕೋಯಿಸ್ ತಪ್ಪು ಅದು ಫ್ರಾನ್ ಸ್ಪಾ (France wa). ನಮ್ಮ ಕ.ಪ್ರ. ಆದಷ್ಟೂ ತಪ್ಪುರಹಿತವಾಗಿರಲಿ ಎನ್ನುವ ಉದ್ದಿಷ್ಯದಿಂದ ಈ ಪತ್ರ' ಎಂದಿದ್ದಾರೆ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

