ಸಂಪಾದಕೀಯ

ಕದ್ದು ತಿಂದರೆ ರುಚಿ ಜಾಸ್ತಿ ಅಂತೆ ಹೌದಾ?

Published On :

ರಮೇಶ ಭಟ್ ಆವರ್ಸೆ, ಮೈಸೂರು, 9164276058
ಕದ್ದು ತಿಂದರೆ ರುಚಿ ಜಾಸ್ತಿ ಅಂತೆ ಹೌದಾ?
ಆದರೆ ಕದ್ದಿದ್ದು ಹಾಗಲಕಾಯಿಯಾದರೆ ಈ ಮಾತು ಅನ್ವಯವಾಗುವುದಿಲ್ಲ!

ನಂದ ಯಡಿಯೂರು, 9880055196
ಖಡ್ಗಕ್ಕಿಂತ ಲೇಖನಿ ಹರಿತವಂತೆ. ಲೇಖನಿಗಿಂತ?
ಹರಿತ ಕೆಲವರ ನಾಲಿಗೆ!

ಚಿರಪ್ರಭ ನಂಜನಗೂಡು, 8553793107
ರಾಹುಲ್ ಗಾಂಧಿ ಪ್ರಕಾರ ಮೋದಿ ಭೂಗಳ್ಳರಾದರೆ, ರಾಬರ್ಟ್ ವಾದ್ರಾ?
ಬೇರೆಯವರಿಂದ ಭೂಮಿ ಪಡೆದು ರಕ್ಷಿಸುತ್ತಿರುವವರು!

ಶಂಕರನಾರಾಯಣ ಭಟ್,  ಮಾಡಗೇರಿ, ಹೊನ್ನಾವರ, 9632821920
ಚುನಾವಣೆ ಸಮೀಕ್ಷೆಯೇ ಒಂದು ಜೋಕ್ ಎಂದು ರಾಹುಲ್ ಇನ್ನೊಂದು ಜೋಕ್ ಸಿಡಿಸಿದ್ದಾರಲ್ಲ?
ಚುನಾವಣೆ ಗಾಂಭೀರ್ಯ ಕಡಿಮೆ ಮಾಡಿದ್ದಕ್ಕೆ ಅವರಿಗೆ ನಾವು ಋಣಿಯಾಗಿರಬೇಕು!

ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಮಾತು ಬೆಳ್ಳಿ, ಮೌನ ಬಂಗಾರ. ಪ್ರಧಾನಿ?
ಬಂಗಾರ ಪ್ರಿಯ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.