ಸಂಪಾದಕೀಯ

ವಿಶಿಷ್ಟ ಚೇತನರ ಕಡೆಗಣನೆ

Published On :

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿ, ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ, ಸರಕಾರಿ ಉನ್ನತ ತಾಂತ್ರಿಕ ಕಾಲೇಜುಗಳಲ್ಲಿ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಲ್ಲಿ, ಸರ್ಕಾರಿ ಕೈಗಾರಿಕಾ ಸಂಸ್ಥೆಗಳಲ್ಲಿ, ಸರ್ಕಾರಿ ಪೆಟ್ರೋಲಿಯಂ ರಿಫೈನರಿ ಸಂಸ್ಥೆಗಳಲ್ಲಿ, ಸಹ ಸಂಸ್ಥೆಗಳಾದ ಟ್ರಸ್ಟ್‌ಗಳಲ್ಲಿ, ಸರ್ಕಾರಿ ಬಂದರು ಮಂಡಳಿ ಇತ್ಯಾದಿಗಳಲ್ಲಿ ಅಂಗವಿಕಲರ ಸರ್ಕಾರೀ ಉದ್ಯೋಗ ಮೀಸಲಾತಿ ನಿಯಮ ಪಾಲಿಸಲಾಗಿಲ್ಲ. ಗೌರವಾನ್ವಿತ ಸುಪ್ರಿಂಕೋರ್ಟ್ ವಿಶಿಷ್ಟ ಚೇತನರ ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರಗಳಿಗೆ, ಇಲಾಖೆಗಳಿಗೆ ಸರ್ಕಾರಿ ಸಂಸ್ಥೆಗಳಿಗೆ ನೀಡಿದ ನಿರ್ದೇಶನಗಳಿಗೆ ಬೆಲೆ ಇಲ್ಲವೇ? ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿ, ಸರ್ಕಾರಿ ಕೈಗಾರಿಕಾ ಸಂಸ್ಥೆಗಳಲ್ಲಿ, ಉನ್ನತ ತಾಂತ್ರಿಕ ಕಾಲೇಜುಗಳಲ್ಲಿ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಲ್ಲಿ, ಸರ್ಕಾರಿ ಪೆಟ್ರೋಲಿಯಂ ರಿಫೈನರಿಗಳಲ್ಲಿ ವಿಶಿಷ್ಟ ಚೇತನರು ಕೆಲವೇ ಸಂಖ್ಯೆಯಲ್ಲಿ ಗುತ್ತಿಗೆ, ದಿನಗೂಲಿ, ತಾತ್ಕಾಲಿಕ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಲು ಪೂರಕ ವಾತಾವರಣ ಇಲ್ಲದೆ ಇರುವುದು ಕಂಡು ಬರುತ್ತಿದೆ. ಸರ್ಕಾರಿ ಸಂಸ್ಥೆಗಳ ಕೆಲವು ಉದ್ಯೋಗಿಗಳು ವಿಶಿಷ್ಟ ಚೇತನ ಕಾರ್ಮಿಕರಿಗೆ ಅಪಹಾಸ್ಯ ಮಾಡುವುದು, ನಿಂದಿಸುವುದು ಸಾಮಾನ್ಯವಾಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯಾಡಳಿತದ ಅಧಿಕಾರಿಗಳು ಇದರ ಬಗ್ಗೆ ಶೀಘ್ರ ಗಮನಹರಿಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಪತ್ರಿಕೆಗಳು ಈ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ.
-ಸೋಮನಾಥ ಎಚ್., ಹಳೆಯಂಗಡಿ (ದ.ಕ.)

ಗ್ರಾಮ ಪಂಚಾಯಿತಿಗಳೇನು ಮಾಡುತ್ತಿವೆ?
ರಾಜ್ಯದಲ್ಲಿ ಸುಮಾರು 5,628 ಪಂಚಾಯಿತಿಗಳಿವೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಾರಿಗೆ ತಂದ ಸವಲತ್ತುಗಳನ್ನು ಕಡುಬಡವರಿಗೆ ಪಾರದರ್ಶಕವಾಗಿ, ಮುಕ್ತವಾಗಿ ಮತ್ತು ತುರ್ತಾಗಿ ತಲುಪಿಸುವ ಉದ್ದೇಶದಿಂದಲೇ ಗ್ರಾಮ ಪಂಚಾಯಿತಿಯನ್ನು ಸ್ಥಾಪಿಸಲಾಗಿದ್ದು. ಇವುಗಳಿಗೆ ಸರ್ಕಾರ ಬಿಡುಗಡೆ ಮಾಡುವ ಹಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ದಿಗೆ ಮೀಸಲಿರಿಸಿದ ಶೇ.25ರ ನಿಧಿಯನ್ನು ಸಹ ಖರ್ಚು ಮಾಡದೆ ಇರುವುದು ವಿಪರ್ಯಾಸವೇ ಸರಿ. ಇದರಿಂದ ರಾಜ್ಯದ ಹಲವಾರು ಗ್ರಾಮ ಪಂಚಾಯತಿಗಳಲ್ಲಿ ವಾಸವಾಗಿರುವ ಎಸ್‌ಸಿ-ಎಸ್‌ಟಿ ಜನರ ಸ್ಥಿತಿಗತಿ ಇವತ್ತಿಗೂ ಬಹಳ ಶೋಚನಿಯವಾಗಿದೆ. ಗ್ರಾಮ ಪಂಚಾಯಿತಿಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಈ ಸಮಸ್ಯೆವನ್ನು ಹೋಗಲಾಡಿಸಬಹುದು. ಕೆಲವೊಂದು ಗ್ರಾಮ ಪಂಚಾಯತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ, ಅವರ ಸ್ಥಿತಿಗತಿ, ಸಾಮಾಜಿಕ ಜೀವನದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಮೀಸಿಲಿರಿಸಿದ ಅನುದಾನವು ಬಳಕೆಯಾಗುತ್ತಿಲ್ಲ. ಇಂತಹ ವಿಷಯದ ಬಗ್ಗೆ ಪರಿಜ್ಞಾನ ಇಲ್ಲದೇ ಇರುವ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾರ್ಗದರ್ಶನ ಕೊಡಬೇಕಾದ ಜವಾಬ್ದಾರಿ ತಾಲೂಕ ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳದ್ದು. ಆದರೆ ಅವರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದನ್ನು ಸರಿಪಡಿಸುವವರ್ಯಾರು?
-ಜಗದೀಶ ಹೆಚ್ ಭಜಂತ್ರಿ, ಧಾರವಾಡ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.