ಸಂಪಾದಕೀಯ

ಕೊನೆಗೂ ಬಂತು ಬುದ್ಧಿ

Published On :

ಹಿಂದೆ ಗುಜರಾತ್‌ನಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆದೇಶದ ಮೇರೆಗೆ ಬೆಂಗಳೂರಿನ ಒಬ್ಬ ಮಹಿಳಾ ಆರ್ಕಿಟೆಕ್ಟ್ ಅನಧಿಕೃತವಾಗಿ ಬೇಹುಗಾರಿಕೆಗೆ ತುತ್ತಾಗಿದ್ದರು ಎನ್ನುವ ವದಂತಿ ಆಧರಿತ ವರದಿ ಹಳೆಯದು.
ಆ ಪ್ರಕರಣದ ವಿಚಾರದಲ್ಲಿ ಈಗಾಗಲೇ ಸಾಕಷ್ಟು "ಸಾಹಿತ್ಯ" ಸೃಷ್ಟಿಯಾಗಿದೆ. ಗುಜರಾತ್‌ನ ಕೆಲವು ಮಹಳಾ ಸಂಘಟನೆಗಳು ಗುಜರಾತ್‌ನಲ್ಲಿ ಮಹಿಳೆಯರ ಖಾಸಗಿ ಜೀವನದ ವಿವರಗಳಿಗೆ ರಕ್ಷಣೆ ಇಲ್ಲ, ಬೇಹುಗಾರಿಕೆಯ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆನ್ನುವ ಒತ್ತಾಯವನ್ನೂ ಮಾಡಿದ್ದವು. ಆ ಒತ್ತಾಯವನ್ನು ಗುಜರಾತ್ ಸರ್ಕಾರ ತಿರಸ್ಕರಿಸಿತ್ತು. ಈಗ ಇದ್ದಕ್ಕಿದ್ದಂತೆ ಚುನಾವಣೆ ಸಮಯದಲ್ಲಿ ಅದರಲ್ಲೂ ದೇಶದ ಬಹುಭಾಗದಲ್ಲಿ ಮತದಾನ ಮುಗಿದು, ಇನ್ನು ಎರಡೇ ಸುತ್ತಿನ ಮತದಾನ ಬಾಕಿ ಇರುವ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಬೇಹುಗಾರಿಕೆ ಘಟನೆಯ ನ್ಯಾಯಾಂಗ ತನಿಖೆಗೆ ನಿರ್ಧರಿಸಿ, ಅದಕ್ಕೆ ಸೂಕ್ತ ನ್ಯಾಯಾಧೀಶರನ್ನು ಹುಡುಕುತ್ತಿದೆ ಎನ್ನುವ ಸುದ್ದಿ ನಿಜಕ್ಕೂ ಹಾಸ್ಯಾಸ್ಪದ. ಇನ್ನು ಹನ್ನೆರಡು ದಿನಗಳ ಅನಂತರ ದಿಲ್ಲಿ ದರ್ಬಾರಿನಲ್ಲಿ ಯಾರು ವಿಜೃಂಭಿಸುತ್ತಾರೋ ಗೊತ್ತಿಲ್ಲ. ಆದರೆ ಈಗಿನ ಮಂತ್ರಿಮಂಡಲಕ್ಕೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ನೈತಿಕ ಹಕ್ಕಿಲ್ಲ. ಈ ಮಾತನ್ನು ಮೊದಲು  ತಿರಸ್ಕರಿಸಿದ್ದ ಅಧಿಕೃತ ಮೂಲಗಳು ಈಗ ಕಾಂಗ್ರೆಸ್ಸಿನ ಸಂಗಾತಿ ಪಕ್ಷಗಳ ಮುಖಂಡರೇ ಸರ್ಕಾರದ ನಿಲವು ಸರಿಯಲ್ಲ ಎಂದಾಗ ತನಿಖೆ ಕುರಿತ ನಿರ್ಧಾರವನ್ನು ಮುಂದಿನ ಸರ್ಕಾರಕ್ಕೇ ಬಿಡುವ ವರದಿಗಳೂ ಪ್ರಕಟವಾಗಿವೆ. ಕೊನೆಗೂ ಬುದ್ಧಿ ಬಂತಲ್ಲ. ಅಷ್ಟೇ ಸಮಾಧಾನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.