ತಪ್ಪಾಯ್ತು ತಿದ್ಕೋತೀವಿ
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಿಂದ ಶಂಕರನಾರಾಯಣ ಭಟ್ ಅವರು ಬರೆಯುತ್ತಾರೆ- 'ಏ.4ರಂದು ಪುಟ 3 ಬ್ರೇಕಿಂಗ್ ನ್ಯೂಸ್... 2ನೇ ಪ್ಯಾರಾ, 9ನೇ ಸಾಲು ಯಾರಿಗೆ ಮತದಾನ ಮಾಡುತ್ತಿದ್ದಾರೆ ಎನ್ನುವುದನ್ನು (ಏನ್ನುವುದನ್ನು), ಪುಟ 7 ವಾರಾಣಸಿ ದೇಶದ ಬೌದ್ಧಿಕ ರಾಜಧಾನಿಯಾಗಲಿ, 5ನೇ ಪ್ಯಾರಾ, ಮೊದಲನೆಯ ಸಾಲು ... ನಿಮಗೆಲ್ಲ ನೆನಪುರಬಹುದು (ನೆನಪಿರಬಹುದು).'
'ಸಂಪಾದಕೀಯ... ಕಾಂಗ್ರೆಸ್ಸಿನ ಪ್ರಖಾಳಕೆಯಲ್ಲಿ (ಪ್ರಣಾಳಿಕೆಯ), ಏಪ್ರಿಲ್ 5 ಸಂಪಾದಕೀಯ 2ನೇ ಪ್ಯಾರಾ... ಒಂದು ವ್ಯಂಗ್ಯ, ಎರಡು ಜೋಕು ಸಾಮಾನ್ಯ ದಿನಗಳಲ್ಲಿ ನೀಡಿದರೂ ಅದೇ ಮಾತ್ರ ಚುನಾವಣೆ ಪ್ರಚಾರ ಸಮರ ಕಾಲದಲ್ಲಿ ದೊಡ್ಡ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಹುದು. ಬದಲಿಗೆ ಸಾಮಾನ್ಯ ದಿನಗಳಲ್ಲಿ ನೀಡಿದ ಒಂದು ಜೋಕು, ವ್ಯಂಗ್ಯ (ಅನಿಸಿಕೊಂಡಿದ್ದು) ಚುನಾವಣಾ ಕಾಲದಲ್ಲಿ ದೊಡ್ಡ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಹುದು ಅಂತ ಬರೆಯಬಹುದಿತ್ತೇನೋ.'
'3ನೇ ಪ್ಯಾರಾ, 2ನೇ ಸಾಲು... ರೈತ ಪ್ರದರ್ಶನ ಕುರಿತಂತೆ ತನಿಖೆಗೆ ಆದೇಶ ನೀಡಿದರೂ ಬದಲಿಗೆ ನೀಡಿದವರೂ ಆಗಬೇಕಿತ್ತು. ಇದು ಸಣ್ಣ ಪ್ರಕರಣವಲ್ಲ ಶೀರ್ಷಿಕೆ, ಕೊನೆಯ ಪ್ಯಾರಾ ಅಲ್ಲಿಂದ ಏನಾದರೂ ದಾಖಲೆ ಬರುವವರೆಗೆ ನಾವೇನೂ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರದ ಅಲಕ್ಷ್ಯ ಮಾಡಬಾರದು. ಕೇಂದ್ರ ಸರಕಾರ ಆಗಬೇಕಿತ್ತು.'
'ಪುಟ 8, ಸ್ವಪನ್ ದಾಸ್ಗುಪ್ತಾ ಲೇಖನ... 5ನೇ ಪ್ಯಾರಾ.. ಇನ್ನುಳಿದವರಿಗೆ ಭವಿಷ್ಯತ್ತಿನ ಬಗ್ಗೆ ಭರವಸೆ ಕೊಟ್ಟು ಒಳಗೆ ಬಿಟ್ಟುಕೊಳ್ಳಲಾಗಿದೆ ಅಂತ ಬರೆದಿದೆ. ಬದಲಿಗೆ ಒಳಗೆ ಇಟ್ಟುಕೊಳ್ಳಲಾಗಿದೆ ಆಗಬೇಕಿತ್ತಲ್ಲವೇ? 6ನೇ ಪ್ಯಾರಾ... ನಿಜ ಸ್ವರೂಪವನ್ನು ಬಯಲು ಮಾಡುತ್ತಿದ್ತಾ ಎನ್ನುವುದಂತೂ ನಿಜ ಅಂತ ಬರೆದಿದೆ. ಅದು ಮಾಡುತ್ತಿದ್ದಾರೆ ಆಗಬೇಕು' ಎಂದಿದ್ದಾರೆ.
ಬೆಂಗಳೂರಿನಿಂದ ಎಚ್. ಆನಂದರಾಮ ಶಾಸ್ತ್ರಿ ಅವರು ಬರೆಯುತ್ತಾರೆ- 'ಏ.27ರ ಗೋಡೆ ಬರಹದಲ್ಲಿ ಪ್ರಕಟವಾಗಿರುವ ನನ್ನ ಪತ್ರದಲ್ಲಿನ ವಾಕ್ಯವೊಂದರಲ್ಲಿ ಮುದ್ರಾರಾಕ್ಷಸನ ಸ್ವಾಹಾದಿಂದಾಗಿ ನಾಲ್ಕು ಪದಗಳು ಕಾಣೆಯಾಗಿವೆ! ಒಂದು ತಪ್ಪೂ ನುಸುಳಿದೆ.'
'ಆ ದಿನಗಳಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆ, ಕಾದಂಬರಿಗಳು (ಧಾರಾವಾಹಿಗಳು) ವಿಫುಲವಾಗಿ ಪ್ರಕಟಗೊಳ್ಳುತ್ತಿದ್ದವು ಎಂದು ಪ್ರಕಟಗೊಂಡಿರುವ ವಾಕ್ಯವು, 'ಆ ದಿನಗಳಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳೆಲ್ಲೆಲ್ಲ ಅವರ ಕಥೆಗಳು, ಕಾದಂಬರಿಗಳು (ಧಾರಾವಾಹಿಗಳು) ವಿಪುಲವಾಗಿ ಪ್ರಕಟಗೊಳ್ಳುತ್ತಿದ್ದವು' ಎಂದು ಇರಬೇಕಿತ್ತು.'
'ಪತ್ತೆದಾರಿ ಕೃತಿಗಳ ಕರ್ತೃ ಟಿ.ಕೆ. ರಾಮರಾವ್ ಬಗ್ಗೆ ಬರೆಯಲಾಗಿರುವ ಆ ವಾಕ್ಯದಲ್ಲಿ ನಾಲ್ಕು ಪದಗಳನ್ನು ನಾಪತ್ತೆಯಾಗಿಸಿ ನಿಮ್ಮ ಲಿಪಿಕಾರನು ಓದುಗರಿಗೆ ಪದಗಳನ್ನೂ ವ್ಯಾಕ್ಯಾರ್ಥವನ್ನೂ ಪತ್ತೆ ಮಾಡಬೇಕಾದ ಕೆಲಸ ಕೊಟ್ಟಿದ್ದಾನೆ. ಭೇಷ್! 'ವಿಪುಲ'ವು 'ವಿಫುಲ'ವಾಗಿ ಪ್ರಕಟಗೊಂಡಿರುವುದು ನನ್ನ ಬ್ರಹ್ಮಲಿಪಿಯ ಪರಿಣಾಮವೂ ಆಗಿರಬಹುದು. ಅಂದ ಹಾಗೆ, ಪತ್ತೆದಾರಿ ಎಂದು ನಾನು ಬರೆದಿರುವುದು ಸರಿಯಾಗಿದೆ. 'ಪತ್ತೇದಾರಿ' ಎಂದು ಪ್ರಕಟವಾಗಿರುವುದು ಸರಿಯಲ್ಲ' ಎಂದಿದ್ದಾರೆ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

