= ಕಾಲ ಬದಲಾದಂತೆ ಇದರ ವ್ಯಾಖ್ಯೆಯೂ ಬದಲಾಗುತ್ತದೆ
= ಸೂಟ್ ಆಗದ್ದನ್ನು ಈ ಶಬ್ದದಿಂದಲೇ ಕರೆಯಲಾಗುತ್ತದೆ. ಉದಾ- ಸೂಟ್, ಬೂಟ್ ಇಲ್ಲದೇ ಕಚೇರಿಗೆ ಹೋಗುವುದು
= ಹಿರಿಯರ ಬಳಿ ಅವರಿಗೆ ಗೊತ್ತಿಲ್ಲದ್ದನ್ನು ಕೇಳುವಿಕೆ
ಅರ್ನಬ್, ಥಾಪರ್ ಮೊದಲಾದವರಂತೆ ಮಧ್ಯೆ ಬಾಯಿ ಹಾಕಿ ದಿಕ್ಕು ತಪ್ಪಿಸುವಿಕೆ
ಹೆಂಡತಿಯ ಎದುರು ಪಕ್ಕದ ಮನೆಯವಳನ್ನು ಹೊಗಳುವಿಕೆ
ಬಾಸ್ ಕೇಳಿದ್ದಕ್ಕೆಲ್ಲ ಸತ್ಯವನ್ನೇ ಹೇಳುವಿಕೆ
ಕ್ಲಾಸ್ ಬಂಕ್ ಹಾಕಿ ನಂತರ 'ಸಿಕ್ಕಿಬೀಳುವಿಕೆ'. ಇದರಲ್ಲಿ ಎರಡನೆಯದು ಅನುಚಿತ
= ಪ್ರಾಣಿಯನ್ನು ಕೊಂದು, (ತಿನ್ನದೇ) ಬಿಸಾಕುವಿಕೆ
= ಸಂಗೀತಾಭ್ಯಾಸಿಗಳಿಗೆ 'ಗೊತ್ತಾಗುವಂತೆ' ಕಿವಿಗೆ ಹತ್ತಿ ಇಟ್ಟುಕೊಳ್ಳುವಿಕೆ
'ಎಲ್ಲರೆದುರು' ಮೂಗಿನಲ್ಲಿ, ಕಿವಿಯಲ್ಲಿ ಬೆರಳು ತೂರಿಸುವಿಕೆ
ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ಕೇಳುವಂತೆ ಅಪಾನವಾಯುವಿನ ಉತ್ಸರ್ಜನೆ
ಹೆಂಡತಿಯ ತಪ್ಪನ್ನು ತಪ್ಪೆಂದು ಇತರರೆದುರು ಸತ್ಯವನ್ನು ನುಡಿಯುವಿಕೆ
ಸಾರ್ವಜನಿಕವಾಗಿ ಮಾಡುವ ಮದ್ಯಪಾನ, ಧೂಮಪಾನ, ಅಧರಪಾನ ಇತ್ಯಾದಿ
= ಉಚಿತ ಮತ್ತು ಅನುಚಿತ ವರ್ತನೆಯನ್ನು ಹುಡುಗಿ ನಕ್ಕಿದ್ದು ಮೊದಲೋ ಅಥವಾ ಹುಡುಗನೋ ಎಂಬುದನ್ನು ಆಧರಿಸಿ ಇರುತ್ತದೆ
ವಿಶ್ವನಾಥ ಸುಂಕಸಾಳ
vishwasunkasal@yahoo.com