ಉರಿತ
= ಹರಿತ ಉಗುರಿನಿಂದ ಮಾಡಿಕೊಂಡ ಕೆರೆತದ ಪರಿಣಾಮ
= ಬರ್ನಾಲ್ ಕಂಪೆನಿಯ ಜನಕ
= ಕೆಲವರಿಗಿದು ಹೊಟ್ಟೆಯಲ್ಲಿ ಹುಟ್ಟುತ್ತದೆ, ತಲೆಯ ತನಕ ಕೊರೆಯುತ್ತದೆ
= ಪಕ್ಕದ ಮನೆಯವನಿಗೆ ಒಳ್ಳೆಯದಾದಾಗ ನಮಗಾಗುವಂಥದ್ದು
= ಮೇ 16ರಂದು ದೇಶಾದ್ಯಂತ ಇರುವ ಬುದ್ಧಿಜೀವಿಗಳಿಗೆ ಉಂಟಾಗಿದ್ದು
= ಮೋದಿ ಎಂಬ ಶಬ್ದ ಕೇಳಿದ ಕೂಡಲೇ ಮೂರುತಿಯ ಮೂತಿ ಉರಿಯುತ್ತದೆ
= ಹಲವು ಬಾರಿ ಇದು ಪೂರ್ವಾಗ್ರಹ ಪ್ರೇರಿತ
= ರಾಮ ರಾಜನಾಗುತ್ತಾನೆಂದು ತಿಳಿದಾಗ ಕೈಕೇಯಿಗಾಗಿದ್ದು ಇದೇ
= ಬಿದ್ದ ಗಾಯದ ಉರಿತ ವಾಸಿಯಾಗುತ್ತದೆ. ಆದರೆ (ಶತ್ರುಗಳು) ಎದ್ದಾಗ ಆಗುವ ಉರಿತವಲ್ಲ
= ನಿರಹಂತೆಯ ಕೊರತೆ ಇರುವವರಲ್ಲಿ ಉಂಟಾಗುವ ಅಹಂ-ಸಮುದ್ರ ಕೊರೆತ
= ಉಳಿದವರ ಔನ್ನತ್ಯವನ್ನು ಸಹಿಸದ ಅಸಹನೆಯ ಪರಿಣಾಮ
= ಸ್ವರ್ಗಕ್ಕೆ ಕಿಚ್ಚು ಹಚ್ಚುವವರ ಹೆಚ್ಚುಗಾರಿಕೆ ನೋಡಿ ಉಂಟಾಗುವ ಹೊಟ್ಟೆ ಕಿಚ್ಚು
= ಇನ್ನೈದು ವರ್ಷಗಳ ಮಟ್ಟಿಗೆ ಕೆಲವರ ಉರಿತ ಕಡಿಮೆಯಾಗುವ ಲಕ್ಷಣವಿಲ್ಲ
= ಚುರುಚುರು ಮತ್ತು ಭುಗು ಭುಗು
ವಿಶ್ವನಾಥ ಸುಂಕಸಾಳ
vishwasunkasal@yahoo.com