ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಶಿಕಾರಿಪುರದಿಂದ ಆರ್.ಸಿ.ಪರಶುರಾಮ ಬರೆಯುತ್ತಾರೆ, 'ಮೇ 2ರ ಕ.ಪ್ರ.ದ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಕೊಕ್ಕಡ ವೆಂಕಟ್ರಮಣ ಭಟ್ರವರ ಬರಹದ ಕೊನೆಯಲ್ಲಿ ಕನ್ನಡಪ್ರಭದಲ್ಲಿ ಇದೀಗ ಶ್ರುತಿ ಎಂಬ ಪದ ಸರಿಯಾಗಿ ಬಳಕೆಯಾಗುತ್ತಿದೆ. ಮೊದಲು ಶೃತಿ ಎಂಬ ಅಸಾಧುರೂಪ ಬಳಕೆಯಾಗುತ್ತಿತ್ತು ಎಂದಿದ್ದಾರೆ. ಅವರು ಹೇಳಿದಂತೆ ಶೃತಿ ಎಂಬುದು ಅಸಾಧುರೂಪವಾದರೆ, ಕೃತಿ, ಸ್ಮೃತಿ ಈ ಪದಗಳು ಕೂಡ ಅಸಾಧುರೂಪವಾಗುತ್ತದೆಯೇ? ಖಂಡಿತ ಇಲ್ಲ. ಹೀಗಾಗಿ ಶೃತಿ ಎಂಬುದು ಕೂಡಾ ಅಸಾಧುರೂಪ ಎನ್ನಲಾಗು ವುದಿಲ್ಲ.'
'ಮೇ9ರ ಕ.ಪ್ರ. ಮುಖಪುಟದಲ್ಲಿನ ಒಳಪುಟಗಳ ಮುಖ್ಯಾಂಶಗಳಲ್ಲಿ 'ಕನ್ನಡಕ್ಕೆ ಗಂಡಾಂತರ' ಜೂನ್-5ಕ್ಕೆ ಕರ್ನಾಟಕ ಬಂದ್ ಪುಟ 9' ಎಂದಿದೆ. ಆದರೆ ನಾವು ಸುದ್ದಿಯ ವಿಶ್ಲೇಷಣೆಗೆ ಪುಟ-9ನ್ನು ತೆರೆದಾಗ 'ಕನ್ನಡಕ್ಕೆ ಗಂಡಾಂತರ; ಜುಲೈ 5ಕ್ಕೆ ರಾಜ್ಯ ವ್ಯಾಪಿ ಬಂದ್ ಕರೆ ಎಂದಿದೆ. ಒಂದೇ ಪತ್ರಿಕೆಯಲ್ಲಿ ಈ ರೀತಿ ಒಂದು ತಿಂಗಳು ಅಂತರದ ಎರಡು ದಿನಾಂಕಗಳನ್ನು ನೀಡಿದಾಗ ನಾವು ದಿನಾಂಕವನ್ನು ಖಾತ್ರಿ ಪಡಿಸಿಕೊಳ್ಳಲು ಮತ್ತೊಂದು ಪತ್ರಿಕೆಯನ್ನು ನೋಡಬೇಕಾದ ಆವಶ್ಯಕತೆ ಎದುರಾಗುತ್ತದೆ.'
'ಮೇ2ರ ಸಂಚಿಕೆಯ ಪುಟ 5ರಲ್ಲಿ 'ಕ್ರೇಜಿಗೆ ಅವಮಾನ ಅಭಿಮಾನಿಗಳ ಕಿಚ್ಚು' ಶೀರ್ಷಿಕೆಯ ಲೇಖನದಲ್ಲಿ ಕಿಚ್ಚ ಸುದೀಪ್ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯನದ ಚಿತ್ರ ಎಂದೇ ಅಬ್ಬರ ಉಂಟು ಮಾಡಿದ್ದ 'ನಿಮಾಣಿಕ್ಯನಿ' ಚಿತ್ರ ಎಂದು ಪ್ರಕಟವಾಗಿದೆ. ನಿಮಾಣಿಕ್ಯನಿ ಅಂದರೇನು, ಸಿನಿಮಾ ಹೆಸರು ಮಾಣಿಕ್ಯ ಅಲ್ಲವೇ.'
ಬೆಂಗಳೂರಿನಿಂದ ವಿ.ಹೇಮಂತಕುಮಾರ್ ಬರೆಯುತ್ತಾರೆ, 'ಪುಟ 13ರಲ್ಲಿ ಗುಂಪುಗಳ ನಡುವೆ ಘರ್ಷಣೆ; 6 ಜನರಿಗೆ ಗಾಯ ಶೀರ್ಷಿಕೆಯ ಲೇಖನದಲ್ಲಿ ಯಾದಗಿರಿ ನಗರದ ಗಂಜ್ ಪ್ರದೇಶದ ಬಳಿ ಶುಕ್ರವಾರ ಸಂಜೆ ಎರಡು ಗುಂಪುಗಳ ನಡುವೆ ನಡೆದ ಕಲ್ಲು ತೂರಾಟದ ಮತ್ತು ಮಾರಾಮಾರಿಯಲ್ಲಿ 6 ಜನರು ಗಾಯಗೊಂಡಿದ್ದಾರೆ ಎಂದು ಪ್ರಕಟವಾಗಿದೆ. ಶುಕ್ರವಾರ ಸಂಜೆ ನಡೆದ ಘಟನೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಓದಿದಂತಾಗಲಿಲ್ಲವೇ? ಗುರುವಾರ ಸಂಜೆ ಎಂದಿರಬೇಕು ಇಲ್ಲವೇ ಕಳೆದ ಶುಕ್ರವಾರ ಎಂದಿರಬೇಕು ಅಲ್ಲವೇ?'
ನಿನ್ನೆಯ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ 'ಭತ್ತ' ಪ್ರಯೋಗದ ಬಗ್ಗೆ ಪರಶುರಾಮ್ ಆಕ್ಷೇಪ ಎತ್ತಿದ್ದರು. ಆದರೆ ನಮ್ಮ ಪತ್ರಿಕೆಯ ಸ್ಟೈಲ್ ಶೀಟ್ ಪ್ರಕಾರ 'ಬತ್ತ' ಪ್ರಯೋಗವೇ ಸರಿ. ಈ ಶಬ್ದದ ಬಗ್ಗೆ ಹಿಂದೆಯೂ ಚರ್ಚೆಯಾಗಿದೆ. ಪ್ರತಿ ಪತ್ರಿಕೆಗೂ ಅದರದೇ ಆದ ಸ್ಟೈಲ್ ಶೀಟ್ ಇರುತ್ತದೆ.

 ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.