ತಪ್ಪಾಯ್ತು ತಿದ್ಕೋತೀವಿ
ಮೈಸೂರಿನ ಕುವೆಂಪುನಗರದಿಂದ ಸಿ. ದಿನಮಣಿ ರಾವ್ ಅವರು ಬರೆಯುತ್ತಾರೆ- 'ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಮೇ 16ರಂದು ಸಂಜೆಯಹೊತ್ತಿಗೆ. ಮೇ 17ರಂದು 'ಕನ್ನಡಪ್ರಭ'ದ ಪುಟ 13ರಲ್ಲಿ ಮೈಸೂರು ಪ್ರದೇಶಕ್ಕೆ ಸಂಬಂಧಿಸಿದಂತೆ 3 ಮುಖ್ಯ ವರದಿಗಳಲ್ಲಿ: 1) ತವರು ಜಿಲ್ಲೆಯಲ್ಲಿ ಸಿಎಂಗೆ ಮುಖಭಂಗ, 2) ಕೇವಲ 34 ದಿನಗಳಲ್ಲಿ ಸಂಸದರಾದ ಪ್ರತಾಪ್, 3) ಎಂದೂ ಸತತ 2ನೇ ಬಾರಿಗೆ ಗೆಲ್ಲದ ವಿಶ್ವ. ಈ ಮೂರೂ ವರದಿಗಳನ್ನು ಅಂಶಿ ಪ್ರಸನ್ನಕುಮಾರ್, ಮಹೇಂದ್ರ, ಕ.ಪ್ರ.ವಾರ್ತೆ ಮೈಸೂರು ಮೇ 14 ಎಂದು ವರದಿ ಬಂದ ಮೂಲವನ್ನು ತಿಳಿಸಿದ್ದೀರಿ.'
'ಫಲಿತಾಂಶ ಬಂದದ್ದು ಮೇ 16ರಂದು. ಆದರೆ ಅದಕ್ಕೆ 2 ದಿನಗಳ ಮೊದಲೇ ತಮ್ಮ ವರದಿಗಾರರು ಮೇ 14ರಂದೇ ಫಲಿತಾಂಶಗಳನ್ನು ವಿಶ್ಲೇಷಿಸಿ ತಮ್ಮ ವರದಿ ಕಳುಹಿಸಿದ್ದು ಹೇಗೆ? ಅದು ಮೇ 16 ಎಂದಿದ್ದರೆ ಸರಿಯೆನಿಸಿ ಹಾಗೆಯೇ ತಿದ್ದಿಕೊಂಡೆ' ಎಂದಿದ್ದಾರೆ.
ಫಲಿತಾಂಶವನ್ನು ಎರಡು ದಿನ ಮೊದಲೇ ಊಹಿಸಿ ಬರೆಯಲಂತೂ ಸಾಧ್ಯವಿಲ್ಲ. ಕೆಲವೊಮ್ಮೆ 2-3 ದಿನ ಮುಂಚಿತವಾಗಿ ವರದಿಗಳನ್ನು ಸಿದ್ಧಪಡಿಸುವುದಿದೆ. ಆಗ ಹೀಗಾಗಬಹುದು. ಆದರೆ ಚುನಾವಣೆ ಫಲಿತಾಂಶ ವಿಷಯದಲ್ಲಿ ಹೀಗಾಗಿರಲು ಸಾಧ್ಯವಿಲ್ಲ. ನಮ್ಮ ವರದಿಗಾರರು ಚುನಾವಣೆ ಫಲಿತಾಂಶವನ್ನು 2 ದಿನ ಮೊದಲೇ ಅಷ್ಟು ಸ್ಪಷ್ಟವಾಗಿ ಊಹಿಸಿ ಬರೆದಿದ್ದರು ಎಂದು ಸಮರ್ಥಿಸಿಕೊಳ್ಳಲೂ ಅವಕಾಶವಿದೆ. ಆದರೆ ಇಲ್ಲಿ ಆಗಿರುವುದು ಡೇಟ್ಲೈನ್ ಅಥವಾ ದಿನಾಂಕ ತಪ್ಪಾಗಿ ಪ್ರಕಟವಾಗಿದೆ. ಅಂತಹ ಪ್ರಮುಖ ದಿನಾಂಕವನ್ನು ಹೇಗೆ ತಪ್ಪಾಗಿ ಬರೆದರು ಮತ್ತು ಪ್ರಕಟಿಸಿದರು ಎಂಬುದು ನಿಜಕ್ಕೂ ಸೋಜಿಗದ ಸಂಗತಿ.
ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಮೇ 19ರಂದು 'ಕನ್ನಡಪ್ರಭ' 3ನೇ ಪುಟದಲ್ಲಿ 'ಕಲಿವ ಕನಸಿಗೆ ಬೇಕಿದೆ ನೆರವಿನ ಕೈಗಳು' ಶೀರ್ಷಿಕೆಯ ಲೇಖನದಲ್ಲಿ, ಮೈಸೂರಿನ ಸಾಲುಹುಂಡಿ ಗ್ರಾಮದ ಎನ್.ಶಿವಕುಮಾರ್ ಕೂಲಿ ಮಾಡಿಕೊಂಡು ಓದಿ ಉನ್ನತ ಶ್ರೇಣಿಯಲ್ಲಿ ಪಿಯುಸಿ ಪಾಸಾಗಿರುವ ಬಗ್ಗೆ ಸವಿವರ ಮಾಹಿತಿ ಇದೆ. ಉಪಶೀರ್ಷಿಕೆಯಲ್ಲಿ ಈ ರೀತಿ ತಪ್ಪು ನುಸುಳಿದೆ.'
'ಅದೆಂದರೆ ಓದೋ ವಯಸ್ಸಿಗೆ 'ದಡಿಯಲು' ಹೋದವನ ಕಣ್ಣಲ್ಲಿ ಮತ್ತೆ ಓದುವಾಸೆ ಎಂದಿದೆ. ಅದು ದುಡಿಯಲು ಎಂದಿರಬೇಕಿತ್ತು' ಎಂದಿದ್ದಾರೆ.
ಬೆಂಗಳೂರಿನ ಬನಶಂಕರಿ 3ನೇ ಹಂತದಿಂದ ಬೆಳ್ಳಾವೆ ರಮೇಶ್ ಅವರು ಬರೆಯುತ್ತಾರೆ- 'ಮೇ 16ರ ಸಿನಿಮಾ ಪುರವಣಿಯಲ್ಲಿ ತಪ್ಪಾಗಿದೆ. ಅಪರ್ಣ (ಅನುಪಮ) ಚಿತ್ರಮಂದಿರ ಅರ್ಪಣಾ ಆಗಿದೆ. ಸೋಮವಾರ ಸಂಚಿಕೆಯ 12ರ 'ಪೌರಸಮಸ್ಯೆ'ಯಲ್ಲಿ ಕೋಟೇಶ್ವರ ಸೂರ್ಯನಾರಾಯಣ ಹೆಸರಿನಲ್ಲಿ ಪ್ರಮಾದವಾಗಿದೆ. 'ಕೋಟೇಶ್ವರ' ಎಂಬಲ್ಲಿ 'ಕೊಟ್ರೇಶ್ವರ' ಆಗಿದೆ. 'ಪ್ರತಿಯೊಂದು ಪುಟವನ್ನು ಆಸ್ಥೆಯಿಂದ ಓದುವ ನನಗೆ ಅಕಸ್ಮಾತ್ ತಪ್ಪು ಕಂಡರೆ ಈ ಅಂಕಣಕ್ಕೆ ಬರೆಯುವೆ. ಅನ್ಯಥಾ ಭಾವಿಸಬಾರದು' ಎಂದಿದ್ದಾರೆ.
ಓದುಗರ ದೂರು ಮತ್ತು ಪತ್ರಗಳನ್ನು ಪ್ರೀತಿಯಿಂದ ಸ್ವೀಕರಿಸುವವರು ನಾವು. ಅನ್ಯಥಾ ಭಾವಿಸುವಂತಿದ್ದಿದ್ದರೆ ಈ ಅಂಕಣವೇ ಪತ್ರಿಕೆಯಲ್ಲಿ ಇರುತ್ತಿರಲಿಲ್ಲ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

