ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಉತ್ತರ ಕನ್ನಡದ ಹೊನ್ನಾವರದಿಂದ ಶಂಕರನಾರಾಯಣ ಭಟ್ ಪತ್ರ ಬರೆದಿದ್ದಾರೆ. 'ಮೇ 6ರ ಪುಟ 2ರಲ್ಲಿ 'ಮಂಗಳಮುಖಿಯರ ಮೇಲೆ ದೌರ್ಜನ್ಯ' ವರದಿಯಲ್ಲಿನ 4ನೇ ಪ್ಯಾರಾ, 5ನೇ ಸಾಲು 'ಪೊಲೀಸರು ನಮ್ಮನ್ನು ವಿತಾರಣೆ' ಅಂತಿದೆ. ಅದು 'ವಿಚಾರಣೆ' ಆಗಬೇಕಿತ್ತು. ಪುಟ 4ರಲ್ಲಿ 'ಗುಜರಾತ್ ಸಿಎಂ ಪಟ್ಟಕ್ಕೆ ಶುರು ಪೈಪೋಟಿ' ಶೀರ್ಷಿಕೆ ಸುದ್ದಿಯ 7ನೇ ಸಾಲಿನಲ್ಲಿ 'ಇವರಲ್ಲದೇ ಸಚಿರವಾದ' ಅಂತಿದೆ. ಅದು 'ಸಚಿವರಾದ' ಆಗಬೇಕು. ಪುಟ 7ರಲ್ಲಿ 'ಕರಾವಳಿಯಲ್ಲಿ ಗೂಂಡಾಗಿರಿಗೆ ಅಭಯ' ಲೇಖನದ 4ನೇ ಪ್ಯಾರಾದಲ್ಲಿ 'ಪತ್ರಕರ್ತರಿಗೆ ನಿಂದಿಸಿದರೆ, ಹಲ್ಲೆ ಮಾಡಿದರೆ ಏನು ಆಗದು...' ಎಂದಿದೆ. ಬದಲಿಗೆ 'ಪತ್ರಕರ್ತರನ್ನು ನಿಂದಿಸಿದರೆ, ಹಲ್ಲೆ ಮಾಡಿದರೆ ಏನೂ ಆಗದು' ಆಗಬೇಕಿತ್ತು.'
'ಮೇ 7ರ ಪುಟ 4ರಲ್ಲಿ 'ನನ್ನನ್ನು ಅವಮಾನಿಸಿ, ಕೆಳಜಾತಿಗಳನ್ನಲ್ಲ' ವರದಿಯಲ್ಲಿ 'ಅವರು ನೀಜ ರಾಜನೀತಿ ಅನುಸರಿಸುತ್ತಿದ್ದಾರೆ' ಎಂದಿದ್ದು, ಅದು 'ನೀಚ' ಎಂದಾಗಬೇಕು. ಇದೇ ಸುದ್ದಿಯ ಕೊನೆಯಲ್ಲಿ '.....ಎಂದು ಸೂಚ್ಯವಾಗಿ ಆಯೋಗ ಕಾಂಗ್ರೆಸ್ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಸೂಚ್ಯವಾಗಿ ನುಡಿದರು' ಎಂದಿದೆ. 'ಸೂಚ್ಯವಾಗಿ' ಎರಡು ಬಾರಿ ಪ್ರಯೋಗಿಸುವ ಅವಶ್ಯಕತೆಯಿರಲಿಲ್ಲ. ಪುಟ 6ರಲ್ಲಿ ಮಣಿಕಾಂತ್ ಅವರ ಲೇಖನದ 2ನೇ ಪ್ಯಾರಾದಲ್ಲಿ 'ಆಗಾಗಗ ಬರುತ್ತಿದ್ದ' ಬದಲಿಗೆ 'ಆಗಾಗ' ಅಂದರೆ ಸಾಕಿತ್ತು. ಇದೇ ಲೇಖನದ 5ನೇ ಪ್ಯಾರಾ 'ಈ ಹುಡುಗನ ಜಾನ್ ನೋವು ಎಂದು ಪದೇಪದೆ ಚೀರುತ್ತಿದ್ದ' ಎಂದಿದೆ. ಅದು 'ಈ ಹುಡುಗ' ಎಂದಾಗಬೇಕಿತ್ತು.'
'ಮೇ 8ರ ಮುಖ ಪುಟದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳಿಕೆ, 'ಕನ್ನಡವೂ ಸಾಹಿತ್ಯದಿಂದ ಸಂಪದ್ಭರಿ' ಎಂದಾಗಿದೆ. ಅದು 'ಸಂಪದ್ಭರಿತ' ಎಂದಾಗಬೇಕು. ಪುಟ 3ರಲ್ಲಿ 'ನೀರಿನ ಸಮಸ್ಯೆ; ಎಚ್ಚೆತ್ತ ಬಿಬಿಎಂಪಿ' ವರದಿಯಲ್ಲಿ ಒಂದೆಡೆ 'ಪ್ರಸ್ತಾಪ' ಎಂತಲೂ, ಇನ್ನೊಂದೆಡೆ 'ಪ್ರಸ್ತಾವ' ಅಂತಲೂ ಬಳಕೆಯಾಗಿದೆ. ಯಾವುದು ಸರಿಯಾದ ಪ್ರಯೋಗ? ಪುಟ 4ರಲ್ಲಿ ಪ್ರಾಂಜಲ್ ಯಾದವ್ ಅವರ ಹೇಳಿಕೆ ಪ್ರಕಟವಾಗಿದೆ. 'ಬೇನಿಯಾಬಾಗ್‌ನಲ್ಲಿ ರ್ಯಾಲಿ ನಡೆಸಲು ಬಿಜೆಪಿ ಅನುಮತಿ ನೀಡಲಾಗಿಲ್ಲ' ಅಂತಿದೆ, ಅದು 'ಬಿಜೆಪಿಗೆ' ಎಂದಾಗಬೇಕು. ಇನ್ನು ಸತ್ಯ ಅವರ ಲೇಖನದಲ್ಲಿ 'ತತ್‌ಕ್ಷಣದ ಕೆಲಸ... ನಿಗಮ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ನಾಮಕರಣ' ಅಂತಿದೆ. ಆದರೆ ಅದು 'ನಿರ್ದೇಶಕರ ಅಥವಾ ನಿರ್ದೇಶಕರುಗಳ' ಆಗಬೇಕು' ಎಂದಿದ್ದಾರೆ.
ಪ್ರಸ್ತಾವನೆ ಸಲ್ಲಿಸಿದರು ಅಥವಾ ಪ್ರಸ್ತಾಪ ಎನ್ನುವುದು ಸೂಕ್ತ ಪ್ರಯೋಗ. ಕೇವಲ ಪ್ರಸ್ತಾವ ಎಂದು ಬರೆಯುವುದು ಸರಿಯಲ್ಲ. ಇನ್ನು ಶಂಕರನಾರಾಯಣ ಭಟ್ ಅವರು ಪ್ರಸ್ತಾಪಿಸಿರುವ ಸಣ್ಣ ಸಣ್ಣ ತಪ್ಪುಗಳು ಓದುಗರಿಗೂ ಕಿರಿಕಿರಿಯನ್ನುಂಟು ಮಾಡುತ್ತವೆ. ಈ ಅಂಕಣದಲ್ಲಿ ಓದುವವರಿಗೂ ಹಾಗೆಯೇ ಅನಿಸಬಹುದು. ಇಂತಹ ಸಣ್ಣ ತಪ್ಪುಗಳ ಬಗೆಗೂ ಪುಟ ನಿರ್ವಹಿಸುವವರು ಎಚ್ಚರಿಕೆಯಿಂದಿರಬೇಕಾಗುತ್ತದೆ.

 ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.