ಸಿದ್ದರಾಮಯ್ಯ ಗೈರು ಹಾಜರಿ
ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಜ್ಞಾ ವಚನ ಸ್ವೀಕಾರ ಸಮಾರಂಭದಲ್ಲಿ ಸ್ವಲ್ಪ ಮಟ್ಟಿಗೆ ಇರಿಸು-ಮುರಿಸು ಕಂಡುಬಂದಿದ್ದು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಮಾರಂಭವನ್ನು ಬಹಿಷ್ಕರಿಸಿದರು ಎನ್ನುವ ಕಾರಣಕ್ಕಾಗಿ.
ಜಯಲಲಿತಾ- ಮಮತಾ ಅವರು ಇಡೀ ದೇಶಕ್ಕೆ ದೇಶವೇ ಸಮಾರಂಭವನ್ನು ಕುತೂಹಲ, ಆಸಕ್ತಿಯಿಂದ ಎದುರು ನೋಡುತ್ತಿದ್ದಾಗ, ತಮಗೆ ಗೌರವಾನ್ವಿತ ಆಹ್ವಾನವಿದ್ದರೂ ಸಮಾರಂಭವನ್ನು ಬಹಿಷ್ಕರಿಸಿದ್ದಕ್ಕೆ ಯಾವ ಕಾರಣವನ್ನೂ ಕೊಟ್ಟಿಲ್ಲ.
ಅವರಿಬ್ಬರೂ ಸಮಾರಂಭಕ್ಕೆ ಬಾರದೇ ಇದ್ದರೂ ಅದನ್ನು ಮಾಧ್ಯಮ ಪ್ರಪಂಚ ಗಮನಿಸುತ್ತಿತ್ತು ಹಾಗೂ ಗೈರು ಹಾಜರಿಯನ್ನು ದಾಖಲಿಸುತ್ತಿತ್ತು. ಆದರೆ ಬಹಿಷ್ಕಾರದ ಪ್ರಕಟನೆ ನೀಡಿದ್ದು ಜನತಾಂತ್ರಿಕ ಸಜ್ಜನಿಕೆಯಲ್ಲ. ಆ ಸಮಾರಂಭಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೋಗಲಿಲ್ಲ. ಅದನ್ನೇನೂ ಅವರು ಜಾಹೀರು ಮಾಡಲಿಲ್ಲ. ಕಾಂಗ್ರೆಸ್ ಆ ಸಮಾರಂಭವನ್ನೇನೂ ಬಹಿಷ್ಕರಿಸಿರಲಿಲ್ಲ. ಆದರೆ ಸಿದ್ದರಾಮಯ್ಯ ಅವರ ವರ್ತನೆಯೂ ಈಗ ಟೀಕೆಗೆ ಒಳಗಾಗಿದೆ.
ನಿಜ. ಸಮಾರಂಭಕ್ಕೆ ಸಿದ್ದರಾಮಯ್ಯ ಅವರೂ ಹೋಗಿದ್ದರೆ ಚೆನ್ನಾಗಿತ್ತು. ರಾಜಕೀಯದಲ್ಲಿ ಇಂತಹ ಸಣ್ಣ ವಿಚಾರಗಳೇ ಮುಂದೆ ಬೇರೆ ಯಾವುದೋ ಸನ್ನಿವೇಶದಲ್ಲಿ ದೊಡ್ಡದಾಗಬಹುದು. ಸಿದ್ದರಾಮಯ್ಯ ಅವರು ಘಟನೆಯ ಅನಂತರ ತಮ್ಮ ಗೈರು ಹಾಜರಿಗೆ ರಾಜಕೀಯ ಸ್ವರೂಪದ ಅರ್ಥವನ್ನು ಕಲ್ಪಿಸಬಾರದೆಂದು ಮನವಿ ಮಾಡಿಕೊಂಡು ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಪಟ್ಟಿದ್ದಾರೆ. ನಿಜ. ಸಿದ್ದರಾಮಯ್ಯ ಅವರು ಮೋದಿ ಪ್ರಧಾನಿಯಾದಾಗ, ಅವರನ್ನು ಅಭಿನಂದಿಸಿದ್ದರು. ಆ ಸಜ್ಜನಿಕೆಯ ವರ್ತನೆ ಈಗ ಅವರ ನೆರವಿಗೆ ಬರಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

